ಖಜ್ರಾನಾ ಮಂದಿರದ ಗಣೇಶ ದೇವರ ಮುಖ್ಯ ಮಂದಿರ ಸೇರಿದಂತೆ, ಮಂದಿರದ ಆವರಣ ತುಂಬಾ ವಿಶಾಲವಾಗಿದ್ದು, ಸುಂದರವಾಗಿದೆ. ಖಜ್ರಾನಾ ಮಂದಿರದಲ್ಲಿ ಇನ್ನಿತರ ದೇವರುಗಳ 33 ದೇವಾಲಯಗಳು ಇಲ್ಲಿವೆ. ಪ್ರಮುಖ ಮಂದಿರದಲ್ಲಿ ಶಿವ ಮತ್ತು ದುರ್ಗಾಮಾತೆಯ ಮೂರ್ತಿಗಳನ್ನು ಕಾಣಬಹುದಾಗಿದೆ. ಫೋಟೋ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ ಮಾಡಿಮಂದಿರದ ಆವರಣದಲ್ಲಿ ಪ್ರಾಚೀನ ಕಾಲದ ಆಲದ ಮರವಿದ್ದು ಭಕ್ತರ ಬೇಡಿಕೆಗಳನ್ನು ಈಡೇರಿಸುತ್ತದೆ ಎನ್ನುವುದು ಭಕ್ತರ ನಂಬಿಕೆಯಾಗಿದೆ. ಆದ್ದರಿಂದ ಭಕ್ತರು ಆಲದ ಮರವನ್ನು ಸುತ್ತುಹಾಕಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಪ್ರಾರ್ಥಿಸುತ್ತಾರೆ. ಆಲದ ಮರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಗಿಳಿಗಳು ಆಶ್ರಯವನ್ನು ಪಡೆದಿವೆ. ಗಿಳಿಗಳಿದ್ದ ಆಲದ ಮರದಿಂದಾಗಿ ಖಜ್ರಾನಾ ಮಂದಿರ ಇನ್ನಷ್ಟು ಸುಂದರವಾಗಿ ಕಂಡುಬರುತ್ತದೆ. ಕೋಮು ಸೌಹಾರ್ದತೆ ಖಜ್ರಾನಾ ಮಂದಿರದ ವಿಶೇಷತೆಯಾಗಿದೆ. ಜಾತಿ ಮತ ಭೇದವೆನ್ನದೆ ಎಲ್ಲಾ ಜಾತಿ ಜನಾಂಗದವರು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ನೂರಾರು ಜನರು ತಾವು ಖರೀದಿಸಿದ ಹೊಸ ವಾಹನಗಳ ಪೂಜೆಗಾಗಿ ದೇವಾಲಯಕ್ಕೆ ಆಗಮಿಸುತ್ತಾರೆ. ಗಣೇಶ ಉತ್ಸವವನ್ನು ಬಹು ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ.
ಪ್ರತಿ ಬುಧವಾರದಂದು ಭಕ್ತರಿಂದ ಸಂಗ್ರಹಿಸಲಾದ 11 ಲಕ್ಷ ಮೋದಕಗಳನ್ನು ಗಣೇಶ ಉತ್ಸವದಲ್ಲಿ ದೇವ ಗಣೇಶನಿಗೆ ಅರ್ಪಿಸಲಾಗುತ್ತದೆ. ಗಣೇಶ ಮಂದಿರದ ಅಡಳಿತ ಮಂಡಳಿಯು, ಮಂದಿರದ ಪ್ರತಿಷ್ಠಾಪನೆಯ ಆರಂಭದಿಂದ ಅರ್ಚಕ ಮಹೇಶ್ ಭಟ್ ಅವರು ನಿರ್ವಹಿಸುತ್ತಿದ್ದರು. ಕೆಲ ವರ್ಷಗಳ ಹಿಂದೆ ಮಂದಿರದ ಅಡಳಿತವನ್ನು ಜಿಲ್ಲಾಡಳಿತದ ಸುಪರ್ದಿಗೆ ಒಪ್ಪಿಸಲಾಗಿದೆ.
ಮಂದಿರದ ನಿರ್ವಹಣೆಗಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ಭಟ್ ಕುಟುಂಬ ಮಂದಿರದ ಅಡಳಿತವನ್ನು ನಿರ್ವಹಿಸುವಲ್ಲಿ ಜಿಲ್ಲಾಡಳಿತಕ್ಕೆ ತನ್ನಿಂದಾದ ಸಹಾಯವನ್ನು ನೀಡುತ್ತಿದೆ. ಪ್ರಸ್ತುತ ಬಾಲಚಂದ್ರ ಭಟ್ ಮಂದಿರದ ನಿರ್ವಹಣೆ ಮಾಡುತ್ತಿದ್ದು, ವಿಶೇಷ ಸಂದರ್ಭಗಳಲ್ಲಿ ಪ್ರಧಾನ ಅರ್ಚಕರಾಗಿ ಕಾರ್ಯನಿರ್ವಹಿಸುತ್ತಾರೆ.
ಬಾಲಚಂದ್ರ ಅರ್ಚಕರು ಮಂದಿರವನ್ನು ಪುನರ್‌ನಿರ್ಮಾಣ ಮಾಡುವಂತೆ ಒತ್ತಾಯಿಸಿ ಅನೇಕ ವರ್ಷಗಳ ಕಾಲ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದರು ಎಂದು ಹೇಳಲಾಗುತ್ತದೆ.
ಯಾವಾಗ ಹೋಗಬಹುದು: ಮಂದಿರದ ದ್ವಾರಗಳು ಸದಾ ಕಾಲ ಭಕ್ತರಿಗಾಗಿ ತೆರೆದಿರುತ್ತವೆ. ಪ್ರತಿ ಬುಧವಾರದಂದು ಜಾತ್ರಾ ಕಾರ್ಯಕ್ರಮಗಳು ನಡೆಯುತ್ತವೆ. ವಿಶೇಷ ಆಚರಣೆಗಳು ನೋಡಬೇಕಾದಲ್ಲಿ ಗಣೇಶ ಚತುರ್ಥಿ ಹಬ್ಬದಂದು ಭೇಟಿ ನೀಡಬಹುದಾಗಿದೆ. ಹಬ್ಬದ ದಿನದಂದು ಗಣೇಶ ದೇವರಿಗೆ ನೈವೇದ್ಯವನ್ನು ಅರ್ಪಿಸಲಾಗುತ್ತದೆ.
ತಲುಪುವ ದಾರಿ: ಇಂದೋರನ್ನು ಮಧ್ಯಪ್ರದೇಶದ ವಾಣಿಜ್ಯ ರಾಜಧಾನಿಯಂದು ಕರೆಯಲಾಗುತ್ತದೆ. ರಾಷ್ಟ್ರೀಯ ಹೆದ್ದಾರಿ -3 ( ಆಗ್ರಾ- ಮುಂಬೈರಸ್ತೆ )ರ ಮೂಲಕ ( ರಸ್ತೆ, ರೈಲ್ವೆ, ವಿಮಾನ) ಸುಲಭವಾಗಿ ತಲುಪಬಹುದಾಗಿದೆ.