ಈಗಾಗಲೇ ಬೇಯಿಸಿದ ಬಟಾಣಿಯನ್ನು ಮಿಕ್ಸಿಯಲ್ಲಿ ತರಿ ತರಿಯಾಗಿ ರುಬ್ಬಿ ಮಿಕ್ಸಿಂಗ್ ಬೌಲ್‌ನಲ್ಲಿ ಹಾಕಿಕೊಳ್ಳಬೇಕು. ಇದಕ್ಕೆ ಆಲೂಗಡ್ಡೆ, ಈರುಳ್ಳಿ, ಕ್ಯಾರೆಟ್, ಬೀಟ್‌ರೋಟ್, ಬೀನ್ಸ್, ಹಸಿಮೆಣಸು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕೆಂಪುಮೆಣಸಿನ ಪುಡಿ, ಗರಂ ಮಸಾಲಾ ಪುಡಿ ಮತ್ತು ಉಪ್ಪನ್ನು ಹಾಕಿ ಸೇರಿಸಿ ಕಲೆಯಬೇಕು. ನಂತರ ಬ್ರೆಡ್ ಅನ್ನು ನೀರಿನಲ್ಲಿ ಮುಳುಗಿಸಿ ಸಂಪೂರ್ಣ ನೀರನ್ನು ತೆಗೆಯಬೇಕು. ಇದನ್ನು ಮಿಶ್ರಣಕ್ಕೆ ಸೇರಿಸಬೇಕು.
ನಂತರ ಇದನ್ನು ಪುನಃ ಕಲೆಸಿ ಉಂಡೆ ಮಾಡಿ ಬೇಕಾದ ಆಕಾರಕ್ಕೆ ಕಟ್ಲೆಟ್ ಅನ್ನು ತಯಾರಿಸಿ ಚಿರೋಟಿ ರವೆಯಲ್ಲಿ ಹೊರಳಿಸಿ ಕಾದ ತವಾದಲ್ಲಿ ಸ್ವಲ್ಪ ಎಣ್ಣೆ ಅಥವಾ ಬೆಣ್ಣೆಯನ್ನು ಹಾಕಿ ಎರಡೂ ಬದಿಯಲ್ಲಿ ಬೇಯಿಸಿದರೆ ವೆಜಿಟೇಬಲ್ ಕಟ್ಲೆಟ್ ಸವಿಯಲು ಸಿದ್ಧ. ಇದನ್ನು ಟೊಮೆಟೊ ಸಾಸ್‌ನೊಂದಿಗೆ ತಿಂದರೆ ರುಚಿಯಾಗಿರುತ್ತದೆ.