Select Your Language

Notifications

webdunia
webdunia
webdunia
webdunia

ಹಾಲಿನಲ್ಲಿ ಬೇಯಿಸಿ ಖರ್ಜೂರ ತಿನ್ನುವುದರಿಂದ ಹಲವು ಪ್ರಯೋಜನ

ಹಾಲಿನಲ್ಲಿ ಬೇಯಿಸಿ ಖರ್ಜೂರ ತಿನ್ನುವುದರಿಂದ ಹಲವು ಪ್ರಯೋಜನ
ದೆಹಲಿ , ಬುಧವಾರ, 31 ಆಗಸ್ಟ್ 2016 (11:30 IST)
ಹಾಲಿನಲ್ಲಿ ಒಣದ್ರಾಕ್ಷಿಯನ್ನು ಬೇಯಿಸಿ ತಿನ್ನುವುದರಿಂದ ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಖರ್ಜೂರದಲ್ಲಿ ಐರನ್, ಫೈಬರ್ ಹಾಗೂ ಜಿಂಕ್, ಮೆಗ್ನೆಶಿಯಂ ಅಂಶಗಳು ಇರುವುದರಿಂದ ಆರೋಗ್ಯಕ್ಕೆ ಹೆಚ್ಚು ಸಹಾಯಕಾರಿಯಾಗುತ್ತದೆ. ಹಾಲಿನಲ್ಲಿ ಬೇಯಿಸಿ ತಿನ್ನುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು..
ಹಾಲಿನಲ್ಲಿ ಬೇಯಿಸಿ ತಿನ್ನುವುದರಿಂದ ಏನೆಲ್ಲಾ ಪ್ರಯೋಜನಗಳು...
 
ಖರ್ಜೂರದಲ್ಲಿ ವಿಟಾಮಿನ್ ಅಂಶ ಹೆಚ್ಚಾಗಿರುವುದರಿಂದ ಚರ್ಮದ ರಕ್ಷಣೆಗೆ ಹೆಚ್ಚು ಸಹಾಯಕಾರಿ. 
 
ಮೆಗ್ನೆಶಿಯಂ ಅಂಶ ಇದರಲ್ಲಿ ಹೆಚ್ಚಾಗಿರುವುದರಿಂದ ನಿಮ್ಮ ದೇಹದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ. ಇದರಿಂದ ಮಧುಮೇಹದಂತಹ ಕಾಯಿಲೆಗಳು ದೂರವಿಡುವ ಶಕ್ತಿ ಖರ್ಜೂರದಲ್ಲಿದೆ. 
 
ಫೈಬರ್ ಇರೋದ್ರಿಂದ ಜೀರ್ಣಕ್ರಿಯೆಗೆ ಇದು ಸಹಾಯಕಾರಿ.. 
 
ಇನ್ನೂ ಹಾಲಿನಲ್ಲಿ ಪೋಟ್ಯಾಶಿಯಂ ಅಂಶ ಹೆಚ್ಚಾಗಿರುವುದರಿಂದ ಇದನ್ನು ಹೆಚ್ಚಾಗಿ ಸೇವಿಸುವುರಿಂದ ಹೊಟ್ಟೆ ನೋವು ಸಮಸ್ಯೆಗಳು ಉಪಶಮನವಾಗುತ್ತವೆ. 
 
ನಿಮ್ಮ ಮೂಳೆಗಳು ಗಟ್ಟಿಯಾಗಬೇಕೆಂಬ ಆಸೆ ನಿಮ್ಮದಾಗಿದ್ದರೆ ಖರ್ಜೂರ ತಿನ್ನಿ. ಇದರಿಂದ ಮೂಳೆಗಳು ಗಟ್ಟಿಯಾಗುತ್ತವೆ. ಹಾಲಿನಲ್ಲಿ ಬೇಯಿಸಿದ ಖರ್ಜೂರ ತಿನ್ನುವುದರಿಂದ ಕ್ಯಾಲ್ಸಿಯಂ, ಸೇಲೆನಿಯಂ, ಹೆಚ್ಚಾಗಿ ಕಾಣಬಹುದು.
 

Share this Story:

Follow Webdunia kannada

ಮುಂದಿನ ಸುದ್ದಿ

ಗುಲಾಬಿ ಎಸಳಿನಂತ ತುಟಿ ಬೇಕೆ? ( ವಿಡಿಯೋ)