Select Your Language

Notifications

webdunia
webdunia
webdunia
webdunia

ಟೊಮೆಟೊ ತೊಕ್ಕು ಮಾಡಿ ವಿಟಮಿನ್ ಹೊಟ್ಟೆಗಿಳಿಸಿ

ಟೊಮೆಟೊ ತೊಕ್ಕು ಮಾಡಿ ವಿಟಮಿನ್ ಹೊಟ್ಟೆಗಿಳಿಸಿ
Bangalore , ಗುರುವಾರ, 2 ಫೆಬ್ರವರಿ 2017 (10:41 IST)
ಬೆಂಗಳೂರು: ಟೊಮೆಟೊ ಉಪ್ಪಿನಕಾಯಿ ರೀತಿಯಲ್ಲೇ ತೊಕ್ಕು ಮಾಡಬಹುದು. ಸಿ ವಿಟಮಿನ್ ಹೇರಳವಾಗಿರುವ ಟೊಮೆಟೋ ಸೇವನೆ ಆರೋಗ್ಯಕ್ಕೂ ಒಳ್ಳೆಯದು. ಹದ ಖಾರ, ಉಪ್ಪು ಹಾಕಿಕೊಂಡು ಮಾಡುವುದರಿಂದ ಹೊಟ್ಟೆಯುರಿ ಬಾರದ ಹಾಗೆ ಊಟ ರುಚಿಯಾಗುವಂತೆ ಮಾಡುವ ರೆಸಿಪಿ ಇದು. ಮಾಡುವುದು ಹೇಗೆಂದು ನೋಡಿಕೊಳ್ಳಿ.

ಬೇಕಾಗುವ ಸಾಮಗ್ರಿಗಳು

ಟೊಮೆಟೊ
ಸಾಸಿವೆ
ಇಂಗು
ಎಣ್ಣೆ
ಉಪ್ಪು
ಅರಸಿನ ಪುಡಿ
ಖಾರದ ಪುಡಿ

ಮಾಡುವ ವಿಧಾನ

ಟೊಮೆಟೋವನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಬಾಣಲೆಯಲ್ಲಿ ಸಾಸಿವೆ, ಇಂಗು, ಎಣ್ಣೆ ಹಾಕಿಕೊಂಡು ಒಗ್ಗರಣೆ ಮಾಡಿದ ಮೇಲೆ ಕತ್ತರಿಸಿದ ಟೊಮೆಟೋವನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ. ಇದಕ್ಕೆ ಸ್ವಲ್ಪ ಅರಸಿನ ಪುಡಿ, ಖಾರದ ಪುಡಿ, ಉಪ್ಪು ಹಾಕಿಕೊಂಡು ಚೆನ್ನಾಗಿ ತಿರುವಿ. ನೀರು ಹಾಕುವುದು ಬೇಡ. ಟೊಮೆಟೊ ಚೆನ್ನಾಗಿ ಬೆಂದು ಮುದ್ದೆಯಾಗಿ ಉರಿ ಆರಿಸಿ. ಇದನ್ನು ಎರಡು ಮೂರು ದಿನದವರೆಗೆ ಹಾಳಾಗದಂತೆ ಇಡಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೂದಲು ಉದುರುವಿಕೆಗೆ ಈರುಳ್ಳಿಯೇ ರಾಮಬಾಣ