Publish Date: Mon, 16 Jan 2017 (11:55 IST)
Updated Date: Mon, 16 Jan 2017 (12:01 IST)
ಬೆಂಗಳೂರು: ಘೀ ರೈಸ್, ಪುಲಾವ್, ಪೂರಿ ಜತೆ ರುಚಿಯಾದ ಗ್ರೇವಿ ಐಟಂ ಇದ್ದರೇನೇ ತಿನ್ನಲು ರುಚಿ. ಹೀಗಾಗಿ ಸಿಂಪಲ್ಲಾಗೊಂದು ಟೊಮೆಟೋ ಸಾಗು ಮಾಡುವುದು ಹೇಗೆಂದು ಹೇಳಿಕೊಡುತ್ತೇವೆ ನೋಡಿಕೊಳ್ಳಿ.
ಬೇಕಾಗುವ ಸಾಮಗ್ರಿಗಳು
ಟೊಮೆಟೊ
ತೆಂಗಿನ ತುರಿ
ಹಸಿಮೆಣಸು
ಸಾಸಿವೆ
ಜೀರಿಗೆ
ಸಿಹಿ ಮೊಸರು
ಸಕ್ಕರೆ
ಮಾಡುವ ವಿಧಾನ
ಟೊಮೊಟೋ ಹೋಳು ಮಾಡಿ ಉಪ್ಪು ಹಾಕಿ ಬೇಯಿಸಿ. ಮೊಸರು, ಬೇಯಿಸಿ ಟೊಮೆಟೋ ಹೊರತು ಪಡಿಸಿ ಉಳಿದೆಲ್ಲಾ ವಸ್ತುಗಳನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಟೊಮೆಟೋ ಹೋಳಿಗೆ ಸೇರಿಸಿ ಸಿಹಿ ಮೊಸರು ಸೇರಿಸಿ ಒಂದು ಕುದಿ ಕುದಿಸಿ. ಇದಕ್ಕೆ ಸಾಸಿವೆ, ಜೀರಿಗೆ ಒಗ್ಗರಣೆ ಕೊಟ್ಟರೆ ಟೊಮೆಟೋ ಸಾಗು ರೆಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ