ಬೆಂಗಳೂರು: ಖಾರ ದೋಸೆ ಜತೆಗೆ ಸ್ವಲ್ಪ ಹುಳಿ, ಸ್ವಲ್ಪ ಉಪ್ಪ, ಇನ್ನು ಸ್ವಲ್ಪ ಸಿಹಿ ಜತೆಗಿರುವ ಸೈಡ್ ಡಿಶ್ ಇದ್ದರೆ ಚೆನ್ನ ಅನಿಸುತ್ತದಲ್ವಾ? ಆದರೆ ತುಂಬಾ ಹೊತ್ತು ಅಡುಗೆ ಮಾಡಲು ಬೇಸರವೆನಿಸಿದರೆ, ಸುಲಭವಾಗಿ, ಸಿಂಪಲ್ ಆಗಿ ಟೊಮೆಟೊ ಫ್ರೈ ಮಾಡಿಕೊಂಡು ಗೊಜ್ಜು ಮಾಡುವುದು ಹೇಗೆಂದು ನೋಡಿ.
ಬೇಕಾಗುವ ಸಾಮಗ್ರಿಗಳು
ಟೊಮೆಟೊ
ಈರುಳ್ಳಿ
ಉಪ್ಪು
ಮೊಸರು
ಹಸಿಮೆಣಸಿನಕಾಯಿ
ಒಗ್ಗರಣೆ ಸಾಮಾನು
ಮಾಡುವ ವಿಧಾನ
ಬಾಣಲೆಯಲ್ಲಿ ಒಗ್ಗರಣೆ ಮಾಡಿಕೊಳ್ಳಿ. ಇದಕ್ಕೆ ಈರುಳ್ಳಿ ಹಾಕಿ ಫ್ರೈ ಮಾಡಿಕೊಳ್ಳಿ. ಇದಾದ ಮೇಲೆ ಟೊಮೆಟೊ ಫ್ರೈ ಮಾಡಿಕೊಳ್ಳಿ. ಎರಡೂ ಫ್ರೈ ಆದ ಮೇಲೆ ಇದಕ್ಕೆ ಉಪ್ಪು ಹಾಕಿ ಉರಿ ಆಫ್ ಮಾಡಿ. ಇದಕ್ಕೆ ಮೊಸರು ಹಾಕಿ ಕಲಸಿಕೊಳ್ಳಿ. ಖಾರ ಬೇಕಾದಲ್ಲಿ ಒಂದು ಹಸಿ ಮೆಣಸಿನಕಾಯಿ ಕಿವುಚಿಕೊಳ್ಳಿ. ಇದು ದೋಸೆ ಜತೆ ತಿನ್ನಲು ಉತ್ತಮ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ