ಬೇಕಾಗುವ ಸಾಮಗ್ರಿಗಳು
ಬೆಂಡೆಕಾಯಿ - 1\4 ಕೆ ಜಿ
ಹಸಿಮೆಣಸಿನಕಾಯಿ - 3 ರಿಂದ 4
ಕೊತ್ತಂಬರಿ - 1\4 ಬಟ್ಟಲು
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ - 1ಚಮಚ
ಮೊಸರು - 1ಬಟ್ಟಲು
ಈರುಳ್ಳಿ - 4
ಪಾಕ ವಿಧಾನ:
ಮೊದಲು ಬೆಂಡೆಕಾಯಿಯನ್ನು ಸ್ವಚ್ಚಗೊಳಿಸಿ ಸಣ್ಣದಾಗಿ ಹೆಚ್ಚಿಕೊಳ್ಳಿ.
ನಂತರ ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಕಾಯಿಸಿ.ಕಾದ ಮೇಲೆ ಅದಕ್ಕೆ ಬೆಂಡೆಕಾಯಿ, ಹೆಚ್ಚಿದ ಹಸಿಮೆಣಸಿನಕಾಯಿ, ಈರುಳ್ಳಿ, ಕೊತ್ತಂಬರಿ, ರುಚಿಗೆ ತಕ್ಕಷ್ಟು ಉಪ್ಪು, ಮೊಸರು ಹಾಕಿ ಚೆನ್ನಾಗಿ ಕಿವುಚಿರಿ.
ಕೊನೆಯಲ್ಲಿ ಸಾಸಿವೆ ಕರಿಬೇವು ಒಗ್ಗರಣೆ ಹಾಕಿರಿ.