ರವಾ ಪೊಂಗಲ್

Webdunia
ಬುಧವಾರ, 13 ಫೆಬ್ರವರಿ 2019 (15:26 IST)
ತಮಿಳುನಾಡಿನ ಖಾದ್ಯಗಳಲ್ಲಿ ಪೊಂಗಲ್ ಕೂಡಾ ಒಂದು. ವೈವಿಧ್ಯಮಯ ಪೊಂಗಲ್‌ಗಳನ್ನು ತಯಾರಿಸಬಹುದು ಖಾರಾ ಪೊಂಗಲ್, ಸಕ್ಕರೆ ಪೊಂಗಲ್. ಅಂತಹುದರಲ್ಲಿ ರವಾ ಪೊಂಗಲ್ ಅನ್ನೂ ಸಹ ಸುಲಭವಾಗಿ ರುಚಿಕರವಾಗಿ ತಯಾರಿಸಬಹುದು. 
ಬೇಕಾಗುವ ಸಾಮಗ್ರಿಗಳು:
* ರವೆ 1 ಕಪ್ (250 ಗ್ರಾಂ)
* ಹೆಸರುಬೇಳೆ 1/2 ಕಪ್
* ನೀರು 5 ಕಪ್
* ರುಚಿಗ ತಕ್ಕಷ್ಟು ಉಪ್ಪು
* ಸ್ವಲ್ಪ ಗೋಡಂಬಿ
* ತುಪ್ಪ 4 ಟೇಬಲ್ ಚಮಚ
* ಕರಿಬೇವು ಸ್ವಲ್ಪ
* ಹಸಿ ಶುಂಠಿ ಸ್ವಲ್ಪ
* ಕಾಳುಮೆಣಸು 1 ಚಮಚ
* ಹಸಿ ಮೆಣಸಿನ ಕಾಯಿ 3
* ಜೀರಿಗೆ 1/2 ಟೀ ಚಮಚ
* ಚಿಟಿಕೆಯಷ್ಟು ಇಂಗು
 
ತಯಾರಿಸುವ ವಿಧಾನ:
 
ಮೊದಲು ಬೇಳೆಯನ್ನು ಪರಿಮಳ ಬರುವವರೆಗೆ ಹುರಿದುಕೊಂಡು ನಂತರ ಕುಕ್ಕರಿನಲ್ಲಿ ಒಂದೂವರೆ ಕಪ್ ನೀರು ಮತ್ತು ಒಂದು ಟೀ ಚಮಚ ತುಪ್ಪ ಹಾಕಿ ಮೂರು ವಿಷಲ್ ಬರುವವರೆಗೆ ಬೇಯಿಸಿಕೊಳ್ಳಬೇಕು. ನಂತರ ರವೆಯನ್ನು ಬಣ್ಣ ಬದಲಾವಣೆ ಆಗುವವರೆಗೆ ಹುರಿದುಕೊಳ್ಳಬೇಕು. ನಂತರ ಒಂದು ಬಾಣಲೆಯಲ್ಲಿ ತುಪ್ಪವನ್ನು ಹಾಕಿ ಬಿಸಿ ಮಾಡಿಕೊಂಡು ಅದಕ್ಕೆ ಗೋಡಂಬಿ ಚೂರುಗಳು, ಕರಿಬೇವು, ಹಸಿ ಶುಂಠಿ, ಕಾಳುಮೆಣಸು, ಇಂಗು, ಕತ್ತರಿಸಿದ ಹಸಿ ಮೆಣಸಿನಕಾಯಿ, ಜೀರಿಗೆಯನ್ನು ಹಾಕಿ ಒಗ್ಗರಣೆ ಮಾಡಿಕೊಳ್ಳಬೇಕು. ನಂತರ ಈ ಒಗ್ಗರಣೆಗೆ ಬೇಯಿಸಿಕೊಂಡ ಬೇಳೆ ಮತ್ತು ಹುರಿದ ರವೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ರುಚಿಗ ತಕ್ಕಷ್ಟು ಉಪ್ಪನ್ನು ಹಾಕಬೇಕು. ನಂತರ ಇದು ಚೆನ್ನಾಗಿ ಬೇಯುವವರೆಗೆ ಸಣ್ಣ ಉರಿಯಲ್ಲಿ ಮುಚ್ಚಿ ಬೇಯಿಸಬೇಕು. ನಂತರ ಒಲೆಯಿಂದ ಅದನ್ನು ಇಳಿಸಿ ಬಿಸಿ ಇರುವಾಗಲೇ ತುಪ್ಪವನ್ನು ಅದರ ಮೇಲೆ ಹಾಕಿ ಕಾಯಿ ಚಟ್ನಿಯೊಂದಿಗೆ ಸವಿಯಬಹುದು. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಉತ್ತಮ ಆರೋಗ್ಯಕ್ಕೆ ಮಧ್ಯಾಹ್ನದ ಆಹಾರ ಕ್ರಮ ಹೀಗಿರಲಿ

ಚಳಿಗಾಲದಲ್ಲಿ ಮಕ್ಕಳಿಗೆ ಸ್ಥಾನ ಮಾಡಿಸಿದ್ರೆ ಶೀತ ಆಗುತ್ತೇ ಎನ್ನವವರು ಈ ಟ್ರಿಕ್ಸ್‌ ಬಳಸಿ

ಅಸಿಡಿಟಿಯಿಂದ ಹೊಟ್ಟೆ ತೊಳೆಸಿದಂತಾಗುತ್ತಿದ್ದರೆ ಏನು ಮಾಡಬೇಕು

ಗರ್ಭಿಣಿಯರು ಮೊದಲ ಮೂರು ತಿಂಗಳು ಈ ಆಹಾರ ವಸ್ತುಗಳನ್ನು ಸೇವಿಸಬಾರದು

ತೂಕ ಇಳಿಸಿಕೊಳ್ಳುವ ಯೋಜನೆಯಲ್ಲಿರುವವರ ಬೆಳಗ್ಗಿನ ಅಭ್ಯಾಸ ಹೀಗಿರಲಿ

ಮುಂದಿನ ಸುದ್ದಿ
Show comments