Select Your Language

Notifications

webdunia
webdunia
webdunia
webdunia

ಪುದೀನಾ ಸೊಪ್ಪಿನ ಮುರುಕು

pudina soppina muruku
ಬೆಂಗಳೂರು , ಗುರುವಾರ, 21 ಫೆಬ್ರವರಿ 2019 (13:58 IST)
ತಂತ್ರಜ್ಞಾನವು ಎಷ್ಟೇ ಮುಂದುವರೆದರೂ ಮನುಷ್ಯ ಹಸಿವೆಯನ್ನು ನಿಯಂತ್ರಿಸಲಾರ. ಹಸಿವು ಅನ್ನುವುದು ವರವೂ ಹೌದು ಶಾಪವೂ ಹೌದು. ಅದರಲ್ಲಿಯೂ ಸಾಯಂಕಾಲ ಟೀ ಕುಡಿಯುವ ಹವ್ಯಾಸವಿರುವವರಿಗೆ ಟೀ ಜೊತೆಗೆ ಏನಾದರೂ ತಿಂಡಿಯನ್ನೂ ಸಹ ತಿನ್ನುವ ಅಭ್ಯಾಸವಿರುತ್ತದೆ.

ಆದರಲ್ಲಿಯೂ ಮನೆಯಲ್ಲೇ ಕೆಲವು ತಿಂಡಿಗಳನ್ನು ಸುಲಭವಾಗಿ ದಿಢೀರ್ ಎಂದು ತಯಾರಿಸಿಕೊಳ್ಳಬಹುದು. ಹಾಗಾದರೆ ಅಂತಹ ತಿಂಡಿಗಳಲ್ಲಿ ಪುದೀನಾ ಸೊಪ್ಪಿನ ಮುರುಕೂ ಸಹ ಒಂದು ಎಂದು ಹೇಳಬಹುದು. ಇದನ್ನು ಮನೆಯಲ್ಲಿಯೇ ಕೆಲವೇ ಕೆಲವು ಪದಾರ್ಥಗಳನ್ನು ಬಳಸಿಕೊಂಡು ತಯಾರಿಸಿಕೊಂಡು ಸವಿಯಬಹುದು. 
 
ತಯಾರಿಸಲು ಬೇಕಾಗುವ ಸಾಮಗ್ರಿಗಳು:
* ಪುದೀನಾ ಸೊಪ್ಪಿನ ಚಿಕ್ಕ ಕಟ್ಟಿನ ಸೊಪ್ಪು 1
* ಅಕ್ಕಿ ಹಿಟ್ಟು ಅರ್ಧ ಕೆಜಿ
* ಬೆಣ್ಣೆ 50 ಗ್ರಾಂ
* ಜೀರಿಗೆ 1 ಚಮಚ
* ಎಳ್ಳು 1 ಚಮಚ
* ಹಸಿಮೆಣಸು ಸ್ವಲ್ಪ
* ನಿಂಬೆರಸ 1 ಚಮಚ
 * ಕರಿಯಲು ಎಣ್ಣೆ 
* ಉಪ್ಪು ರುಚಿಗೆ ತಕ್ಕಷ್ಟು
 
ತಯಾರಿಸುವ ವಿಧಾನ:
 ಮೊದಲು ಮಿಕ್ಸಿಯಲ್ಲಿ ಪುದೀನಾ ಮತ್ತು ಹಸಿಮೆಣಸಿನಕಾಯಿಯನ್ನು ಸ್ವಲ್ಪ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಒಂದು ಬೌಲ್‌ಗೆ ಅಕ್ಕಿಹಿಟ್ಟು, ಜೀರಿಗೆ, ಉಪ್ಪು, ಹುರಿದ ಎಳ್ಳು, ಸ್ವಲ್ಪ ಬಿಸಿ ಮಾಡಿದ ಎಣ್ಣೆಯನ್ನು ಹಾಕಿ ಮಿಶ್ರಣ ಮಾಡಬೇಕು. ನಂತರ ರುಬ್ಬಿಕೊಂಡ ಪುದೀನಾ ಸೊಪ್ಪನ್ನು ಹಾಕಿ ಕಲೆಸಬೇಕು. (ಗಟ್ಟಿಯದರೆ ಸ್ವಲ್ಪ ನೀರನ್ನು ಸೇರಿಸಬಹುದು) ಮೃದುವಾಗ ಕಲೆಸಿಕೊಳ್ಳಬೇಕು. ನಂತರ ಎಣ್ಣೆಯನ್ನು ಬಿಸಿ ಮಾಡಲು ಇಟ್ಟು ಚಕ್ಕುಲಿ ಒರಳಿನಲ್ಲಿ ಹಿಟ್ಟನ್ನು ಹಾಕಿ ಬಿಸಿಯಾದ ಎಣ್ಣೆಯಲ್ಲಿ ಬಿಡಬೇಕು. ಚಕ್ಕುಲಿ ರೀತಿಯಲ್ಲಿ ಬೇಕಂದರೆ ಒಂದು ಪ್ಲೇಟ್‌ನಲ್ಲಿ ಚಿಕ್ಕ ಚಿಕ್ಕ ಚಕ್ಕುಲಿಯನ್ನು ಹಿಟ್ಟಿನಿಂದ ಒತ್ತಿ ಎಣ್ಣೆಯಲ್ಲಿ ಕರಿಯಬೇಕು. ಎರಡೂ ಬದಿಯಲ್ಲಿ ಗರಿ ಗರಿಯಾಗಿ ಬೇಯಿಸಬೇಕು. ಈಗ ಸಿದ್ಧವಾದ ರುಚಿ ರುಚಿಯಾದ ಪುದೀನಾ ಸೊಪ್ಪಿನ ಮುರುಕು ಸವಿಯಲು ಸಿದ್ಧ. 

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಮಕ್ಕಳು ಮಾತನಾಡುವಾಗ ತೊದಲುತ್ತಾರಾ? ಹಾಗಾದ್ರೆ ಈ ಮನೆಮದ್ದನ್ನು ತಿನ್ನಿಸಿ