ಬೆಂಗಳೂರು: ಎಳ್ಳು ದೇಹಕ್ಕೂ ತಂಪು, ಆರೋಗ್ಯಕ್ಕೂ ಉತ್ತಮ. ಆರೋಗ್ಯಕರ ಎಳ್ಳಿನ ಜ್ಯೂಸ್ ಮನೆಯಲ್ಲೇ ಮಾಡುವುದು ಹೇಗೆಂದು ನೋಡಿಕೊಳ್ಳಿ.
ಬೇಕಾಗುವ ಸಾಮಗ್ರಿಗಳು
ಎಳ್ಳು
ಬೆಲ್ಲ
ಹಾಲು
ನೀರು
ಮಾಡುವ ವಿಧಾನ
ಬೆಲ್ಲ ಪುಡಿ ಮಾಡಿಟ್ಟುಕೊಳ್ಳಿ. ಎಳ್ಳನ್ನು ಬಾಣಲೆಯಲ್ಲಿ ಹುರಿದಿಟ್ಟುಕೊಳ್ಳಿ. ಹುರಿದ ಎಳ್ಳು, ಪುಡಿ ಮಾಡಿದ ಬೆಲ್ಲದ ಜತೆಗೆ ಸ್ವಲ್ಪವೇ ನೀರು ಸೇರಿಸಿ ಮಿಕ್ಸಿಯಲ್ಲಿ ತಿರುವಿ. ಇದನ್ನು ಒಂದು ಲೋಟಕ್ಕೆ ಸೋಸಿಕೊಂಡು, ಸ್ವಲ್ಪ ಹಾಲು, ಬೇಕಾದಷ್ಟು ನೀರು ಸೇರಿಸಿಕೊಂಡು ಜ್ಯೂಸ್ ಸಿದ್ಧ ಮಾಡಿ. ಇದು ಹೊಟ್ಟೆ ಉರಿ, ಎದೆಯುರಿ, ಉಷ್ಣದ ಬಾಧೆಯಿದ್ದವರಿಗೆ ಉತ್ತಮ ಪಾನೀಯ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ