Select Your Language

Notifications

webdunia
webdunia
webdunia
webdunia

ಪನ್ನೀರ್ ಮಸಾಲಾ ಮ್ಯಾಗಿ ಮಾಡಿ ನೋಡಿ...

ಪನ್ನೀರ್ ಮಸಾಲಾ ಮ್ಯಾಗಿ ಮಾಡಿ ನೋಡಿ...
ಬೆಂಗಳೂರು , ಸೋಮವಾರ, 25 ಮಾರ್ಚ್ 2019 (14:46 IST)
2 ನಿಮಿಷಗಳಲ್ಲಿ ಸಿದ್ದವಾಗುವ ಮ್ಯಾಗಿ ಅತ್ಯಂತ ಜನಪ್ರಿಯವಾದ ತಿಂಡಿಯಾಗಿದೆ. ಮಕ್ಕಳು, ಹಿರಿಯರು ಎಲ್ಲರಿಗೂ ಮ್ಯಾಗಿ ನೂಡಲ್ಸ್ ಅತ್ಯಂತ ಪ್ರಿಯವಾದ ತಿಂಡಿ. ನೀವು ಮ್ಯಾಗಿಯನ್ನು ಹಲವು ವಿಧಾನಗಳಲ್ಲಿ ತಯಾರಿಸಿಕೊಳ್ಳಬಹುದಾಗಿದೆ. ಹಾಗೆಯೇ ಇದು ಪನ್ನೀರ್ ಅನ್ನು ಸೇರಿಸಿ ತಯಾರಿಸುವ ಮ್ಯಾಗಿಯಾಗಿದೆ.
ಬೇಕಾಗುವ ಸಾಮಗ್ರಿಗಳು:
ಪನ್ನೀರ್ - 200 ಗ್ರಾಂ
ಈರುಳ್ಳಿ - 1/2 ಕಪ್
ಶುಂಠಿ - 2 ಚಮಚ
ಬೆಳ್ಳುಳ್ಳಿ - 2 ಚಮಚ
ಟೊಮ್ಯಾಟೊ- 1/2 ಕಪ್
ಕ್ಯಾರೆಟ್ - 1/2 ಕಪ್
ಅಚ್ಚಖಾರದ ಪುಡಿ - 1/2 ಚಮಚ
ಅರಿಶಿಣ - 1/4 ಚಮಚ
ದನಿಯಾ ಪುಡಿ - 1/2 ಚಮಚ
ಹಸಿರು ಬಟಾಣಿ - 1/2 ಕಪ್
ಮ್ಯಾಗಿ - 1 ಪ್ಯಾಕೆಟ್
 
ಮಾಡುವ ವಿಧಾನ:
ಒಂದು ಪ್ಯಾನ್‌ಗೆ ಒಂದು ಕಪ್ ನೀರನ್ನು ಹಾಕಿ ಕುದಿಸಿ. ಅದಕ್ಕೆ ಮ್ಯಾಗಿ ಪ್ಯಾಕೆಟ್ ಅನ್ನು ತೆರೆದು ಮ್ಯಾಗಿ ಮಸಾಲಾವನ್ನು ಕುದಿಯುತ್ತಿರುವ ನೀರಿಗೆ ಹಾಕಿ. ನಂತರ ಮ್ಯಾಗಿ ನೂಡಲ್ಸ್ ಅನ್ನು ಕಟ್ ಮಾಡಿ ನೀರಿಗೆ ಹಾಕಿ ಚೆನ್ನಾಗಿ ಬೇಯಿಸಿ ನೀರು ಸುಮಾರಾಗಿ ಆರಿದ ನಂತರ ಒಂದೆಡೆ ಇಟ್ಟುಕೊಳ್ಳಿ. ನಂತರ ಒಂದು ಪ್ಯಾನ್‌ಗೆ 3-4 ಚಮಚ ಎಣ್ಣೆಯನ್ನು ಹಾಕಿ ಬಿಸಿಯಾದಾಗ ಪನ್ನೀರ್ ಕ್ಯೂಬ್‌ಗಳನ್ನು ಹಾಕಿ ಹೊಂಬಣ್ಣಬರುವವರೆಗೆ ಹುರಿದಿಟ್ಟುಕೊಳ್ಳಿ. ನಂತರ ಅದೇ ಪ್ಯಾನ್‌ನಲ್ಲಿ 1-2 ಚಮಚ ಎಣ್ಣೆಯನ್ನು ಹಾಕಿ ಬಿಸಿಯಾದ ನಂತರ ಹೆಚ್ಚಿದ ಈರುಳ್ಳಿ, ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಹಾಕಿ 1 ನಿಮಿಷ ಹುರಿಯಿರಿ.

ನಂತರ ಅದಕ್ಕೆ ಹೆಚ್ಚಿದ ಟೊಮ್ಯಾಟೋವನ್ನು ಸೇರಿಸಿ 2 ನಿಮಿಷ ಹುರಿಯಿರಿ. ನಂತರ ಅದಕ್ಕೆ ಅಚ್ಚಖಾರದ ಪುಡಿ, ಅರಿಶಿಣ, ದನಿಯಾ ಪುಡಿ, ಹೆಚ್ಚಿದ ಕ್ಯಾರೆಟ್, ಹಸಿರು ಬಟಾಣಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ 3-4 ನಿಮಿಷ ಚೆನ್ನಾಗಿ ಹುರಿಯಿರಿ. ನಂತರ ಈ ಮಿಶ್ರಣಕ್ಕೆ ಈಗಾಗಲೇ ಹುರಿದಿಟ್ಟ ಪನ್ನೀರ್ ಅನ್ನು ಸೇರಿಸಿ ಸ್ವಲ್ಪ ನೀರು ಮತ್ತು ಈಗಾಗಲೇ ಮಾಡಿಟ್ಟುಕೊಂಡಿರುವ ಮ್ಯಾಗಿಯನ್ನು ಸೇರಿಸಿ ಮಿಕ್ಸ್ ಮಾಡಿದರೆ ರುಚಿಯಾದ ಪನ್ನೀರ್ ಮ್ಯಾಗಿ ಮಸಾಲಾ ಸಿದ್ದವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ವಾದಿಷ್ಠ ಜೋಳದ ಸಮೋಸ