Select Your Language

Notifications

webdunia
webdunia
webdunia
webdunia

ಮಳೆಗಾಲದಲ್ಲಿ ಈ ಕ್ರಿಸ್ಪಿ ಪನ್ನೀರ್ ಕಟ್ಲೇಟ್ ಸವಿದು ನೋಡಿ..

Paneer cutlet
ಬೆಂಗಳೂರು , ಮಂಗಳವಾರ, 20 ಜೂನ್ 2017 (19:31 IST)
ಹೊರಗಡೆ ಧೋ ಎಂದು ಮಳೆ ಸುರಿಯುತ್ತಿರಲು ಸಂಜೆ ಹೊತ್ತಲ್ಲಿ ಮನೆಯಲ್ಲಿ ಬಿಸಿ ಬಿಸಿ ಕಾಫಿ-ಟೀ ಜತೆ ಕ್ರಿಸ್ಪಿ, ಕ್ರಿಸ್ಪಿಯಾದ ಸ್ನ್ಯಾಕ್ಸ್  ಇದ್ದರೆ ಎಷ್ಟು ಚೆನ್ನ ಅಲ್ವಾ. ಆದ್ರೆ ಏನ್ ಮಾಡೋದು ಅಂತ ಯೋಚ್ನೆನಾ.. ಇಲ್ಲಿದೆ ಒಂದು ಈಸಿ ಟೇಸ್ಟಿ ರೆಸಿಪಿ. ಈ ಕ್ರಿಸ್ಪಿ ಪನ್ನೀರ್ ಕಟ್ಲೇಟ್ ನ್ನು ಒಮ್ಮೆ ಮನೆಯಲ್ಲೆ ಟ್ರೈ ಮಾಡಿ ನೋಡಿ..
 
ಬೇಕಾಗುವ ಸಾಮಾಗ್ರಿಗಳು :
 
ಪನ್ನೀರ್ - 250 ಗ್ರಾಂ 
ಬ್ರೆಡ್ ಸ್ಲೈಸ್ - 2 
ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ - 1 ಚಮಚ 
ಕತ್ತರಿಸಿದ ಹಸಿ ಮೆಣಸಿನ ಕಾಯಿ - 1 
ಚಾಟ್ ಮಸಾಲ - 1 ಚಮಚ 
ಪೆಪ್ಪರ್ ಪೌಡರ್ - 1/2 ಚಮಚ 
ಪುದೀನಾ ಎಲೆ - ಸ್ವಲ್ಪ 
ರಸ್ಕ್ ಅಥವಾ ಬ್ರೆಡ್ ಚೂರು - 1 ಕಪ್ 
ಮೈದಾ ಹಿಟ್ಟು - 2 ಚಮಚ 
ಎಣ್ಣೆ - 3 ಚಮಚ 
ಅರಿಷಿಣ- ಸ್ವಲ್ಪ
ನೀರು - ಸ್ವಲ್ಪ
 
ಮಾಡುವ ವಿಧಾನ 
ಬ್ರೆಡ್ ಅನ್ನು ನೀರಿನಲ್ಲಿ ಅದ್ದಿ, ನಂತರ ನೀರಿನ್ನು ಹಿಂಡಿ ತೆಗೆಯಿರಿ. ಬಳಿಕ ಬ್ರೆಡ್ ಚೂರನ್ನು ಒಂದು ಬಟ್ಟಲಿಗೆ ಹಾಕಿ, ಅದರಲ್ಲಿ ಪನ್ನೀರ್,  ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ, ಈರುಳ್ಳಿ, ಹಸಿ ಮೆಣಸಿನಕಾಯಿ, ಅರಿಶಿಣ ಪುಡಿ, ಚಾಟ್ಸ್, ಕರಿ ಮೆಣಸಿನ ಪುಡಿ, ಪುದೀನಾ ಎಲೆ, ರುಚಿಗೆ ತಕ್ಕ ಉಪ್ಪು ಹಾಕಿ ಮಿಕ್ಸ್ ಮಾಡಿ, ಉಂಡೆ ಕಟ್ಟಿ. 
 
* ನಂತರ ಕಟ್ಲೇಟ್ ನ ಶೇಪ್ ಗೆ ತಟ್ಟಿ.  ತವಾವನ್ನು ಬಿಸಿ ಮಾಡಲು ಇಡಿ.  
 
* ಮೈದಾ ಹಿಟ್ಟಿಗೆ ಸ್ವಲ್ಪ ನೀರು ಹಾಕಿ ಕಲೆಸಿ. ಈಗ ತಟ್ಟಿದ ಕಟ್ಲೇಟ್ ಅನ್ನು ಒಮ್ಮೆ ಮೈದಾ ಹಿಟ್ಟಿನಲ್ಲಿ ಅದ್ದಿ, ನಂತರ ಬ್ರೆಡ್ ಚೂರಿನಲ್ಲಿ ಹೊರಳಾಡಿಸಿ ತವಾಕ್ಕೆ ಎಣ್ಣೆ ಸವರಿ ಅದಕ್ಕೆ ಹಾಕಿ ಎರಡೂ ಬದಿ ಕಂದು ಬಣ್ಣ ಬರುವವರೆಗೆ ಬೇಯಿಸಿ.  
 
ಈಗ ಒಂದು ಪ್ಲೇಟ್ ಗೆ ಹಾಕಿ. ಟೊಮೆಟೊ ಸಾಸ್ ಜತೆ ಪನ್ನೀರ್ ಕಟ್ಲೇಟ್ ಸವಿಯಲು ನೀಡಿ.
 

Share this Story:

Follow Webdunia kannada

ಮುಂದಿನ ಸುದ್ದಿ

ಅಂಗೈ ದೂರದಲ್ಲೇ ನೈಸರ್ಗಿಕ ಸೌಂದರ್ಯ ವರ್ಧಕಗಳು