Select Your Language

Notifications

webdunia
webdunia
webdunia
webdunia

ಕಿತ್ತಳೆ ಹಣ್ಣಿನ ಸಿಪ್ಪೆಯ ಗೊಜ್ಜು ಆರೋಗ್ಯಕ್ಕೂ, ರುಚಿಗೂ ಒಳ್ಳೆಯದು

ಕಿತ್ತಳೆ ಹಣ್ಣಿನ ಸಿಪ್ಪೆಯ ಗೊಜ್ಜು ಆರೋಗ್ಯಕ್ಕೂ, ರುಚಿಗೂ  ಒಳ್ಳೆಯದು
Bangalore , ಗುರುವಾರ, 15 ಡಿಸೆಂಬರ್ 2016 (12:14 IST)
ಬೆಂಗಳೂರು: ಕಿತ್ತಳೆ ಹಣ್ಣಿನ ಸಿಪ್ಪೆ ಚರ್ಮದ ಆರೋಗ್ಯಕ್ಕೆ ಒಳ್ಳೆಯದು ಎಂಬುದು ಗೊತ್ತಿರುವ ವಿಚಾರವೇ. ಅದನ್ನು ಗೊಜ್ಜು ಮಾಡಿ ತಿನ್ನಲೂ ಬಹುದು. ಸಿಪ್ಪೆಯ ಗೊಜ್ಜಿನ ಸಿಂಪಲ್ ರೆಸಿಪಿ ಹೀಗಿದೆ ನೋಡಿ.

ಬೇಕಾಗುವ ಸಾಮಗ್ರಿಗಳು:

ಚೆನ್ನಾಗಿ ಹಣ್ಣಾದ ಕಿತ್ತಳೆ ಹಣ್ಣಿನ ಸಿಪ್ಪೆ
ಈರುಳ್ಳಿ
ಬೆಲ್ಲ
ಹುಣಸೆ ರಸ
ಉಪ್ಪು
ಹಸಿಮೆಣಸಿನ ಕಾಯಿ
ಶುಂಠಿ

ಮಾಡುವ ವಿಧಾನ:

ಹುಣಸೆ ರಸ ನೆನೆ ಹಾಕಿ. ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಫ್ರೈ ಮಾಡಿಕೊಳ್ಳಿ. ಈರುಳ್ಳಿ, ಶುಂಠಿ, ಹಸಿಮೆಣಸು ಫ್ರೈ ಮಾಡಿಕೊಳ್ಳಿ. ಇದು ಚೆನ್ನಾಗಿ ಬಾಡಿದ ಮೇಲೆ, ಒಂದು ಪಾತ್ರೆಗೆ ಫ್ರೈ ಮಾಡಿದ ವಸ್ತುಗಳನ್ನು ಹಾಕಿ ಅದಕ್ಕೆ ಹುಣಸೆ ರಸ, ಬೆಲ್ಲ, ಉಪ್ಪು ಹಾಕಿ ಚೆನ್ನಾಗಿ ಕುದಿಸಿ. ಅದು ಜೇನು ತುಪ್ಪದಷ್ಟು ದಪ್ಪಗಾಗುವ ತನಕ ಕುದಿಸಬೇಕು. ಈಗ ಸಿಹಿ-ಖಾರ ಮಿಶ್ರಿತ ಕಿತ್ತಳೆ ಹಣ್ಣಿನ ಸಿಪ್ಪೆಯ ಗೊಜ್ಜು ರೆಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಸಾಲ್ ಪುರಿ ಮಾಡುವುದು ಹೇಗೆ ಗೊತ್ತಾ?