ಮಿಲ್ಕ್ ಮೈಸೂರ್ ಪಾಕ್

Webdunia
ಗುರುವಾರ, 21 ಮೇ 2020 (09:01 IST)
Normal 0 false false false EN-US X-NONE X-NONE

ಬೆಂಗಳೂರು : ಮೈಸೂರು ಪಾಕ್ ಎಂದರೆ ಸಾಮಾನ್ಯವಾಗಿ ಚಿಕ್ಕ ಮಕ್ಕಳಿಂದ , ದೊಡ್ಡವರು ಎಲ್ಲರೂ ಇಷ್ಟಪಡುತ್ತಾರೆ.  ಇಂತಹ ಸಿಹಿಯಾದ ಮೈಸೂರು ಪಾಕ್ ನ್ನು ಮನೆಯಲ್ಲಿಯೇ ತಯಾರಿಸಿ ತಿಂದರೆ ಇನ್ನೂ ರುಚಿಕರವಾಗಿ ಆರೋಗ್ಯಕರವಾಗಿರುತ್ತದೆ.
 


 

ಬೇಕಾಗುವ ಸಾಮಾಗ್ರಿಗಳು: ಹಾಲು-1ಕಪ್, ಕಡಲೆಹಿಟ್ಟು-1 ಕಪ್, ತುಪ್ಪ-1 ಕಪ್, ಸಕ್ಕರೆ 2 ಕಪ್, ಏಲಕ್ಕಿ ಪುಡಿ ಚಿಟಿಕೆಯಷ್ಟು.

 

ಮಾಡುವ ವಿಧಾನ: ಕಡಲೆಹಿಟ್ಟನ್ನು ಒಂದು ಬಾಣಲೆಯಲ್ಲಿ ಹುರಿದುಕೊಳ್ಳಬೇಕು. ಮತ್ತೊಂದು ಪಾತ್ರೆಯಲ್ಲಿ ಹಾಲಿಗೆ ಸಕ್ಕರೆಯನ್ನು ಬೆರೆಸಿ ಒಲೆಯ ಮೇಲಿಡಿ. ಸಕ್ಕರೆ ಕರಗಿದ ನಂತರ 5 ನಿಮಿಷ ಹಾಲು ಕುದಿಯಲು ಬಿಡಿ. ನಂತರ ಇದಕ್ಕೆ ಹುರಿದಿಟ್ಟುಕೊಂಡ ಕಡಲೆಹಿಟ್ಟನ್ನು ಹಾಕಿ, ಹಿಟ್ಟು ಗಂಟಾಗದಂತೆ ಕೈಯಾಡಿಸಿ. ಸ್ವಲ್ಪ ಸ್ವಲ್ಪ ತುಪ್ಪ ಅದಕ್ಕೆ ಹಾಕುತ್ತಾ ಕಲಸುತ್ತೀರಿ.

 

ಕೊನೆಯಲ್ಲಿ ಏಲಕ್ಕಿ ಪುಡಿ ಸೇರಿಸಿ ಸ್ವಲ್ಪ ಹೊತ್ತು ಕುದಿಯಲು ಬಿಡಿ. ಕುದ್ದು ಗಟ್ಟಿಯಾದ ನಂತರ ಒಂದು ಅಗಲವಾದ ತಟ್ಟೆಗೆ ತುಪ್ಪ ಸವರಿ ಅದರ ಮೇಲೆ ಕುದಿಸಿದ ಪದಾರ್ಥವನ್ನು ಹರಡಿ. ಅದು ತಣ್ಣಗಾದ ಮೇಲೆ ಬೇಕಾದ ಆಕಾರಕ್ಕೆ ಕತ್ತರಿಸಿ ತಿನ್ನಿ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಬಿಸಿಲ ತಾಪಕ್ಕೆ ಬಾಯಾರಿಕೆ ಆಗದಿದ್ದರು ನೀವು ಇಷ್ಟು ನೀರು ಕುಡಿಯಲೇಬೇಕು

ದೇಹದಲ್ಲಿ ಬಿಳಿ ರಕ್ತ ಕಣ ಮತ್ತು ಕೆಂಪು ರಕ್ತ ಕಣ ಸಮತೋಲನದಲ್ಲಿರಲು ಏನು ಮಾಡಬೇಕು

ಹೆರಿಗೆ ನಂತರ ಮಹಿಳೆಯರು ದಪ್ಪ ಆಗಲು ಕಾರಣವೇನು

ಕಹಿ ಬೇವನ್ನು ಪ್ರತಿನಿತ್ಯ ಸೇವನೆ ಮಾಡುವುದರ ಉಪಯೋಗವೇನು ತಿಳಿದುಕೊಳ್ಳಿ

ಮಾವಿನಕಾಯಿ ಸಿಕ್ರೆ ಈ ರೀತಿ ಚಟ್ನಿ ಮಾಡಿ ಗಂಜಿ ಜತೆ ಸೇವಿಸಿ, ಅದ್ಭುತ

ಮುಂದಿನ ಸುದ್ದಿ
Show comments