Select Your Language

Notifications

webdunia
webdunia
webdunia
webdunia

ಸಿಂಪಲ್ ಆಗಿ ಮಸಾಲಾ ಪುರಿಯನ್ನು ಮನೆಯಲ್ಲೇ ಮಾಡಿರಿ..

masla puri
ಬೆಂಗಳೂರು , ಸೋಮವಾರ, 24 ಸೆಪ್ಟಂಬರ್ 2018 (13:56 IST)
ನಾವು ಸಾಮಾನ್ಯವಾಗಿ ಹಲವು ಬಗೆಯ ಚಾಟ್‌ಗಳನ್ನು ಹೊರಗಡೆ ದಿನನಿತ್ಯ ತಿನ್ನುತ್ತಾ ಇರುತ್ತೇವೆ. ಅದು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರಬಹುದಾಗಿದೆ. ಹೊರಗೆ ಅಂಗಡಿಗಳಲ್ಲಿ ಸಿಗುವಂತೆಯೇ ನಾವೂ ಸಹ ಚಾಟ್‌ಗಳನ್ನು ಮನೆಯಲ್ಲೇ ತಯಾರಿಸಿಕೊಳ್ಳಬಹುದು. ಚಾಟ್‌ಗಳಲ್ಲಿ ಜನಪ್ರಿಯವಾಗಿರುವ ಮಸಾಲಾಪುರಿಯನ್ನು ಸರಳವಾಗಿ ತಯಾರಿಸುವ ವಿಧಾನಕ್ಕಾಗಿ ಇಲ್ಲಿ ನೋಡಿ.
ಬೇಕಾಗುವ ಸಾಮಗ್ರಿಗಳು:
 
ಪುದೀನಾ - 2 ಹಿಡಿ
ಕೊತ್ತಂಬರಿ ಸೊಪ್ಪು - 4 ಹಿಡಿ
ಹಸಿರು ಬಟಾಣಿ - 1 ಕಪ್
ಈರುಳ್ಳಿ - 2
ಟೊಮೆಟೋ - 1
ಬಟಾಟೆ - 1
ಅಚ್ಚಖಾರದ ಪುಡಿ - 2 ಚಮಚ
ಗರಂ ಮಸಾಲಾ - 1 ಚಮಚ
ಉಪ್ಪು - ರುಚಿಗೆ
ಪೂರಿ - ಸ್ವಲ್ಪ
ಶೇವು - ಸ್ವಲ್ಪ
ಸ್ವೀಟ್ ಚಟ್ನಿ - ಅಗತ್ಯವಿದ್ದರೆ
ಹಸಿಮೆಣಸಿನ ಪೇಸ್ಟ್ - 2 ಚಮಚ
ಕ್ಯಾರೆಟ್ ತುರಿ - ಸ್ವಲ್ಪ
 
ಮಾಡುವ ವಿಧಾನ:
ಹಸಿರು ಬಟಾಣಿ ಹಾಗೂ ಬಟಾಟೆಯನ್ನು ಬೇಯಿಸಿಕೊಳ್ಳಿ. ಟೊಮೆಟೋ, ಈರುಳ್ಳಿಯನ್ನು ಹೆಚ್ಚಿಕೊಳ್ಳಿ. ಪುದೀನಾ ಮತ್ತು ಕೊತ್ತಂಬರಿ ಸೊಪ್ಪನ್ನು ಮಿಕ್ಸಿ ಜಾರ್‌ಗೆ ಹಾಕಿ 1/2 ಕಪ್ ನೀರನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ 1/2 ಕಪ್ ಬೇಯಿಸಿದ ಬಟಾಣಿಗೆ ಸ್ವಲ್ಪ ನೀರನ್ನು ಸೇರಿಸಿ ಅದನ್ನೂ ಸಹ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಪ್ಯಾನ್ ಒಂದನ್ನು ಸ್ಟೌಮೇಲಿಟ್ಟು 2 ಚಮಚ ಎಣ್ಣೆ ಹಾಕಿ ಅದು ಬಿಸಿಯಾದಾಗ 1 ಹೆಚ್ಚಿದ ಈರುಳ್ಳಿಯನ್ನು ಹಾಕಿ ಹುರಿಯಿರಿ. 1 ನಿಮಿಷದ ನಂತರ ಅದಕ್ಕೆ ಹೆಚ್ಚಿದ ಟೊಮೆಟೋ ಸೇರಿಸಿ ಹುರಿಯಿರಿ. ಇವೆರಡೂ ಸ್ವಲ್ಪ ಬೆಂದು ಮೆತ್ತಗಾದಾಗ ಈ ಮೊದಲೇ ರುಬ್ಬಿಟ್ಟ ಮಿಶ್ರಣವನ್ನು ಇದಕ್ಕೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಇದಕ್ಕೆ ಉಳಿದ 1/2 ಕಪ್ ಬೇಯಿಸಿದ ಬಟಾಣಿ ಹಾಗೂ ಹೆಚ್ಚಿದ ಬೇಯಿಸಿದ ಬಟಾಟೆಯನ್ನು ಹಾಕಿ. 5 ನಿಮಿಷ ಬಿಟ್ಟು ಇದಕ್ಕೆ ನಿಮ್ಮ ರುಚಿಗೆ ತಕ್ಕಷ್ಟು ಅಚ್ಚಖಾರದ ಪುಡಿ, 1 ಚಮಚ ಗರಂ ಮಸಾಲಾ ಮತ್ತು ಉಪ್ಪನ್ನು ಸೇರಿಸಿ ಇನ್ನೂ 5 ನಿಮಿಷ ಚೆನ್ನಾಗಿ ಕುದಿಸಿ ಸ್ಟೌ ಆಫ್ ಮಾಡಿ.
 
ಈಗ ಒಂದು ಪ್ಲೇಟ್ ತೆಗೆದುಕೊಂಡು ಅದರಲ್ಲಿ 4-5 ಪುರಿಗಳನ್ನು ಮುರಿದು ಹಾಕಿ. ಅದರ ಮೇಲೆ ನೀವು ಈಗಷ್ಟೇ ತಯಾರಿಸಿದ ಮಸಾಲಾವನ್ನು ಹಾಕಿಕೊಳ್ಳಿ. ಈಗ ಅದರ ಮೇಲೆ ಹೆಚ್ಚಿದ ಟೊಮೆಟೋ, ಈರುಳ್ಳಿ, ಕೊತ್ತಂಬರಿ ಸೊಪ್ಪು ಮತ್ತು ತುರಿದ ಕ್ಯಾರೆಟ್ ಅನ್ನು ಹಾಕಿಕೊಳ್ಳಿ. ನಂತರ ಅದರ ಮೇಲೆ ನಿಮ್ಮ ರುಚಿಗೆ ಅನುಗುಣವಾಗಿ ಸಿಹಿ ಚಟ್ನಿ ಮತ್ತು ಹಸಿಮೆಣಸಿನ ಪೇಸ್ಟ್ ಹಾಗೂ ಶೇವನ್ನು ಹಾಕಿಕೊಂಡರೆ ರುಚಿರುಚಿಯಾದ ಮಸಾಲಾ ಪುರಿ ಸವಿಯಲು ಸಿದ್ಧವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ನೀವು ಮಾಡುವ ಈ ಕೆಟ್ಟ ಅಭ್ಯಾಸದಿಂದ ನಿಮಗೆ ಪೈಲ್ಸ್ ಬರುತ್ತದೆಯಂತೆ