Select Your Language

Notifications

webdunia
webdunia
webdunia
webdunia

ಗರಿ ಗರಿಯಾದ ಮಸಾಲ ದೋಸೆ

ಗರಿ ಗರಿಯಾದ ಮಸಾಲ ದೋಸೆ
ಬೆಂಗಳೂರು , ಸೋಮವಾರ, 27 ಜುಲೈ 2020 (09:13 IST)
Normal 0 false false false EN-US X-NONE X-NONE

ಬೆಂಗಳೂರು : ಬೆಳಿಗ್ಗಿನ ತಿಂಡಿ ಏನು ಮಾಡಬೇಕು ಎಂಬುದೇ ಕೆಲವರಿಗೆ ದೊಡ್ಡ ಸಮಸ್ಯೆಯಾಗಿರುತ್ತದೆ. ಉಪ್ಪಿಟ್ಟು, ಅವಲಕ್ಕಿ, ಚಿತ್ರಾನ್ನ ತಿಂದು ಬೋರು ಅನಿಸಿದ್ರೆ, ಒಮ್ಮೆ ಈ ಮಸಾಲ ದೋಸೆ ಪ್ರಯತ್ನಿಸಿ ನೋಡಿ. 

ಬೇಕಾಗುವ ಸಾಮಾಗ್ರಿಗಳು : 2 ಕಪ್ –ಅಕ್ಕಿ, ಮೆಂತೆಕಾಳು 2 ಚಮಚ, 5 ಚಮಚ ಕಡಲೆಬೇಳೆ, 3  ಚಮಚ ಉದ್ದಿನಬೇಳೆ, 3  ಚಮಚ ಹೆಸರುಬೇಳೆ, 1 ಚಮಚ ಕಾಳು ಮೆಣಸಿನ ಪುಡಿ, ½ ಕಪ್ ಮೈದಾ ಹಿಟ್ಟು, ½ ಕಪ್ ಅಕ್ಕಿ ಹಿಟ್ಟು, ಉಪ್ಪು ,ಸ್ವಲ್ಪ ಎಣ್ಣೆ.

ಮಾಡುವ ವಿಧಾನ : ಕಡಲೆಬೇಳೆ, ಉದ್ದಿನಬೇಳೆ, ಹೆಸರುಬೇಳೆ, ಮೆಂತೆಕಾಳು, ಅಕ್ಕಿ ಇವನ್ನೆಲ್ಲಾ ಚೆನ್ನಾಗಿ  ತೊಳೆದು ಎರಡು ಗಂಟೆ ನೀರಿನಲ್ಲಿ ನೆನೆದು ಹಾಕಿರಿ. ಬಳಿಕ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.  ಇದಕ್ಕೆ ಕಾಳು ಮೆಣಸಿನ ಪುಡಿ ಹಾಕಿ. ಚೆನ್ನಾಗಿ ಮಿಶ್ರಣ ಮಾಡಿ ಒಂದು ಪ್ಲೇಟ್ ಮುಚ್ಚಿಡಿ. ಹಾಗೇ ಇನ್ನೊಂದು ಪಾತ್ರೆಯಲ್ಲಿ ಮೈದಾ, ಅಕ್ಕಿ ಹಿಟ್ಟು ಹಾಕಿ ಅದಕ್ಕೆ ನೀರು ಸೇರಿಸಿ ಗಂಟಿಲ್ಲದಂತೆ ಅದನ್ನು ಕಲಸಿ. ಬೆಳಿಗ್ಗೆ ಮೈದಾ ಮತ್ತು ಅಕ್ಕಿ ಹಿಟ್ಟಿನ ಮಿಶ್ರಣದ ಮೇಲಿನ ನೀರನ್ನು ಹೊರಕ್ಕೆ ಚೆಲ್ಲಿ ಆ ಮಿಶ್ರಣವನ್ನು ದೋಸೆ ಹಿಟ್ಟು ರುಬ್ಬಿಟ್ಟುಕೊಂಡ ಮಿಶ್ರಣಕ್ಕೆ ಸೇರಿಸಿ, ಉಪ್ಪು ಹಾಕಿ ಚೆನ್ನಾಗಿ ಕಲಸಿ ಕಾದ ತವಾದ ಮೇಲೆ ದೋಸೆ ಹಾಕಿ.

 


Share this Story:

Follow Webdunia kannada

ಮುಂದಿನ ಸುದ್ದಿ

ಹಾಗಲಕಾಯಿ ಕಿಸ್ಮುರಿ