Daily Horoscope
✕

ಆರೋಗ್ಯಕರ ಮಸಾಲಾ ಮಜ್ಜಿಗೆ

Webdunia
ಶುಕ್ರವಾರ, 15 ಮಾರ್ಚ್ 2019 (15:29 IST)
ಸುಡ ಸುಡು ಬಿಸಿಲಿನಲ್ಲಿ ದಾಹವಾದಾಗ ನಮಗೆಲ್ಲ ನೆನಪಾಗುವುದು ತಂಪು ಪಾನೀಯಗಳು. ಆದರೆ ತಂಪು ಪಾನೀಯಗಳಿಗಿಂತ ಮಜ್ಜಿಗೆ, ಎಳನೀರಿನಿಂದ ಆರೋಗ್ಯಕ್ಕೆ ಬಹು ಪ್ರಯೋಜನಗಳವೆ. ಮಜ್ಜಿಗೆ ಎಲ್ಲಾ ರೀತಿಯ ರೋಗಗಳಿಗೆ ಉಪಯುಕ್ತವಾದ ಪೇಯವಾಗಿದೆ. 
 
ತಯಾರಿಸಲು ಬೇಕಾಗುವ ಸಾಮಗ್ರಿಗಳು:
* ಗಟ್ಟಿ ಮೊಸರು 1 ಕಪ್
* ಶುಂಠಿ ಒಂದಿಂಚು
* ಹಸಿಮೆಣಸಿನಕಾಯಿ 1
* ಜೀರಿಗೆ ಪುಡಿ 1/2 ಚಮಚ
* ಇಂಗು 1/4 ಟೀ ಚಮಚ
* ನಿಂಬೆರಸ 1 ಟೀ ಚಮಚ
* ಉಪ್ಪು ರುಚಿಗೆ ತಕ್ಕಷ್ಟು
* ನೀರು 1 ಕಪ್
* ಸ್ವಲ್ಪ ಪುದೀನಾ
* ಸ್ವಲ್ಪ ಕೊತ್ತಂಬರಿ ಸೊಪ್ಪು
* ತುಪ್ಪ 1/2 ಟೀ ಚಮಚ
* ಕರಿಬೇವು ಸ್ವಲ್ಪ
 
   ತಯಾರಿಸುವ ವಿಧಾನ:
 
ಮೊದಲು ಮಿಕ್ಸಿ ಜಾರಿಗೆ ಚಿಕ್ಕದಾಗಿ ಕತ್ತರಿಸಿಕೊಂಡ ಹಸಿಮೆಣಸಿನಕಾಯಿ, ಮೊಸರು, ಪುದೀನಾ, ಕೊತ್ತಂಬರಿ ಸೊಪ್ಪು, ಜೀರಿಗೆ ಪುಡಿ, ಇಂಗು, ಉಪ್ಪು ಮತ್ತು ಚಿಕ್ಕದಾಗಿ ಕತ್ತರಿಸಿಕೊಂಡ ಶುಂಠಿ ಎಲ್ಲವನ್ನೂ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಬಾಣಲೆಯಲ್ಲಿ 1/2 ಟೀ ಚಮಚ ತುಪ್ಪ, ಜೀರಿಗೆ ಮತ್ತು ಕರಬೇವಿನ ಎಲೆಯನ್ನು ಹಾಕಿ ಒಗ್ಗರಣೆಯನ್ನು ತಯಾರಿಸಿಕೊಳ್ಳಬೇಕು. ಈ ಒಗ್ಗರಣೆಯನ್ನು ರುಬ್ಬಿಕೊಂಡ ಮಜ್ಜಿಗೆಗೆ ಹಾಕಬೇಕು. ನಂತರ ನಿಂಬೆರಸವನ್ನು ಹಾಕಿ ಮಿಶ್ರಣ ಮಾಡಬೇಕು. ನಂತರ ಒಂದು ಕಪ್ ನೀರನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಹೀಗೆ ಮಾಡಿದರೆ ಮಸಾಲಾ ಮಜ್ಜಿಗೆ ಸವಿಯಲು ಸಿದ್ಧ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ದಿನಕ್ಕೆ ಎಷ್ಟು ಗಂಟೆ ಇಯರ್ಫೋನ್ ಬಳಸಬಹುದು, ಹೆಚ್ಚು ಬಳಸಿದರೆ ಏನಾಗುತ್ತದೆ ಗಮನಿಸಿ

ಸೀರೆಗಳು ಬಣ್ಣ ಮಾಸದಂತೆ ಇಟ್ಟುಕೊಳ್ಳಲು ಈ ಸೂಪರ್ ಐಡಿಯಾ ಬಳಸಿ

ಅತಿಯಾಗಿ ಎಣ್ಣೆ ಬಳಸಿದರೆ ಆರೋಗ್ಯದ ಮೇಲೆ ಏನು ಪರಿಣಾಮವಾಗುತ್ತದೆ

ಕಲ್ಲಂಗಡಿಯನ್ನು ಯಾರು ಸೇವಿಸಬಾರದು ತಪ್ಪದೇ ನೋಡಿ

ಪಾದದ ಅಡಿಭಾಗದಲ್ಲಿ ನೋವಾಗಲು ಕಾರಣ ಮತ್ತು ಪರಿಹಾರವೇನು ನೋಡಿ

ಮುಂದಿನ ಸುದ್ದಿ
Show comments