Daily Horoscope
✕

ಕಲ್ಲಂಗಡಿ ಸಿಪ್ಪೆಯ ದೋಸೆ ಮಾಡಿ ಸವಿಯಿರಿ

Webdunia
ಸೋಮವಾರ, 17 ಸೆಪ್ಟಂಬರ್ 2018 (19:01 IST)
ಸಾಮಾನ್ಯವಾಗಿ ಕಲ್ಲಂಗಡಿ ಹಣ್ಣಿನ ಕೆಂಪು ಭಾಗವನ್ನು ಮಾತ್ರ ತಿಂದು ಬಿಳಿಯ ಭಾಗವನ್ನು ಬಿಸಾಡುವುದು ರೂಢಿ. ಆದರೆ ಆ ಕೆಂಪು ಭಾಗದ ತಿರುಳನ್ನು ಕಟ್ ಮಾಡಿ ಉಳಿದಿರುವ ಬಿಳಿಯ ಭಾಗದಿಂದ ದೋಸೆಯನ್ನು ಮಾಡಿಕೊಳ್ಳಬಹುದು..
ಬೇಕಾಗುವ ಸಾಮಗ್ರಿಗಳು:
 
ಕಲ್ಲಂಗಡಿ ಸಿಪ್ಪೆ (ಸಿಪ್ಪೆಯ ಒಳಭಾಗವನ್ನು ಹೆಚ್ಚಿಕೊಳ್ಳಬೇಕು) 2 ಕಪ್
ಅಕ್ಕಿ 2 ಕಪ್
ಅವಲಕ್ಕಿ 1 ಕಪ್
ಮೆಂತ್ಯ 1/4 ಕಪ್
ಉದ್ದಿನಬೇಳೆ 1/2 ಕಪ್
ರುಚಿಗೆ ತಕ್ಕಷ್ಟು ಉಪ್ಪು
 
ಮಾಡುವ ವಿಧಾನ:
 
ಮೊದಲು ಅವಲಕ್ಕಿ, ಉದ್ದಿನಬೇಳೆ, ಮೆಂತ್ಯ ಕಾಳು ಎಲ್ಲವನ್ನೂ ತೊಳೆದು ಒಟ್ಟಿಗೆ ಸೇರಿಸಿ 4 ರಿಂದ 5 ಗಂಟೆಗಳ ಕಾಲ ನೆನಸಿಡಬೇಕು. ನಂತರ ಹೆಚ್ಚಿಕೊಂಡ ಕಲ್ಲಂಗಡಿ ಜೊತೆ ಸ್ವಲ್ಪ ನೀರನ್ನು ಸೇರಿಸಿ ನುಣ್ಣಗೆ ರುಬ್ಬಬೇಕು. ನಂತರ ಈ ಹಿಟ್ಟನ್ನು 7 ರಿಂದ 8 ಗಂಟೆಗಳ ಕಾಲ ಅಥವಾ ರಾತ್ರಿ ರುಬ್ಬಿ ಬೆಳಿಗ್ಗೆಗೆ ದೋಸೆ ಎರೆಯಬಹುದು. ಅದರೆ ಎರೆಯುವ ಮುನ್ನ ಸ್ವಲ್ಪ ಉಪ್ಪನ್ನು ಸೇರಿಸಬೇಕು. ದೋಸಾ ತವಕ್ಕೆ ಎಣ್ಣೆ ಸವರಿ ಚೆನ್ನಾಗಿ ಕಾಯಿಸಿ ತೆಳ್ಳಗೆ ದೋಸೆ ಮಾಡಿ ಮುಚ್ಚಿ ಬೇಯಿಸಬೇಕು. ಈಗ ಗರಿಗರಿಯಾದ ಕಲ್ಲಂಗಡಿ ಸಿಪ್ಪೆಯ ದೋಸೆ ಸವಿಯಲು ಸಿದ್ಧ. ಈ ದೋಸೆಯನ್ನು ಕಾಯಿ ಚಟ್ನಿಯ ಜೊತೆಗೂ ಸವಿಯಬಹುದು. ಮತ್ತು ದೋಸೆ ಮಾಡುವಾಗ ಎಣ್ಣೆಯ ಬದಲು ತುಪ್ಪವನ್ನೂ ಸಹ ಹಾಕಿಕೊಳ್ಳಬಹುದು. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಒಂದು ಮಾತ್ರೆ ನುಂಗುವಾಗ ಎಷ್ಟು ನೀರು ಕುಡಿಯಬೇಕು, ಕಡಿಮೆಯಾದರೆ ಏನಾಗುತ್ತದೆ

ಮಕ್ಕಳು ದಿನಕ್ಕೆ ಎಷ್ಟು ಗಂಟೆ ಮೊಬೈಲ್ ನೋಡಬಹುದು, ತಪ್ಪದೇ ತಿಳಿದುಕೊಳ್ಳಿ

ಮುಟ್ಟಿನ ಮುನ್ನ ಅಥವಾ ನಂತರ ಮಹಿಳೆಯರಿಗೆ ತಲೆನೋವು ಬರುವುದೇಕೆ, ಪರಿಹಾರವೇನು

ಸದಾ ಹೊಟ್ಟೆ ಉಬ್ಬರವೇ, ಹಾಗಿದ್ದರೆ ಇದು ಕರುಳಿನ ಈ ಸಮಸ್ಯೆ ರಹಸ್ಯ ಸಂಕೇತಗಳು

ತಿನ್ನುವಾಗ ನಾಲಿಗೆ ಕಚ್ಚಿ ಗಾಯವಾದರೆ ತಕ್ಷಣ ಏನು ಮಾಡಬೇಕು

ಮುಂದಿನ ಸುದ್ದಿ
Show comments