Daily Horoscope
✕

ಬಿಸಿ ಬಿಸಿಯಾದ ಅನ್ನಕ್ಕೆ ರುಚಿ ರುಚಿಯಾದ ನಿಂಬೆಹಣ್ಣಿನ ರಸಂ

Webdunia
ಶನಿವಾರ, 7 ಜುಲೈ 2018 (14:07 IST)
ಬೆಂಗಳೂರು:ಮಳೆಗಾಲದಲ್ಲಿ ಬಿಸಿಬಿಸಿ ಖಾರಖಾರವಾದ ಪದಾರ್ಥಗಳನ್ನು ತಿನ್ನಬೇಕು ಎಂಬ ಆಸೆ ಸಹಜವಾದದ್ದು. ಅದರಲ್ಲೂ ಬಿಸಿಬಿಸಿಯಾದ ಅನ್ನಕ್ಕೆ ರುಚಿಕರವಾದ ರಸಂ ಬಡಿಸಿಕೊಂಡು ತಿಂದರೆ ಆರೋಗ್ಯಕ್ಕೂ ಒಳ್ಳೆಯದ್ದು. ಮನಸ್ಸಿಗೂ ಹಿತ. ಇದು ನೆಗಡಿ, ಕೆಮ್ಮುವನ್ನು ಕೂಡ ಕಡಿಮೆಮಾಡುತ್ತದೆ.


ಸಾಮಾಗ್ರಿಗಳು
ತೊಗರಿಬೇಳೆ ½ ಕಪ್, ಕೊತ್ತಂಬರಿಸೊಪ್ಪು ಸ್ವಲ್ಪ, ಜೀರಿಗೆ ½ ಚಮಚ, ½ ಚಮಚ ಸಾಸಿವೆ, ಸ್ವಲ್ಪ ಕರಿಬೇವಿನ ಎಸಳು, ಚಿಟಿಕೆ ಎಂಗು, ಹಸಿಮೆಣಸು-2, ಉಪ್ಪು ರುಚಿಗೆ, ಬೆಲ್ಲ-1 ಚಮಚ, 3 ಚಮಚ-ನಿಂಬೆರಸ, ಅರಿಶಿನ ಚಿಟಿಕೆ.


ವಿಧಾನ
ಕುಕ್ಕರಿಗೆ ತೊಗರಿಬೇಳೆ ಸ್ವಲ್ಪ ನೀರು, ಅರಸಿನ ಹಾಕಿ ಬೇಯಿಸಿ. ನಂತರ ಒಂದು ಬಾಣಲೆಗೆ ಎಣ್ಣೆ ಹಾಕಿ ಅದು ಬಿಸಿಯಾದ ಮೇಲೆ ಸಾಸಿವೆ ಹಾಕಿ. ನಂತರ ಇಂಗು, ಹಸಿಮೆಣಸು, ಕರಿಬೇವು ಸೊಪ್ಪು ಹಾಕಿ. ಆಮೇಲೆ ಅದಕ್ಕೆ ಬೇಯಿಸಿದ ಬೇಳೇಯನ್ನು ಹಾಕಿ ಕುದಿಸಿ. ರುಚಿಗೆ ತಕ್ಕಷ್ಟು ಉಪ್ಪು ,ಬೆಲ್ಲ ಸೇರಿಸಿ ಕುದಿಸಿ. ನಂತರ ಕೊತ್ತಂಬರಿಸೊಪ್ಪಿನಿಂದ ಅಲಂಕರಿಸಿ. ಒಲೆಯಿಂದ ಕೆಳಗೆ ಇಳಿಸಿದ ನಂತರ ನಿಂಬೆಹಣ್ಣಿನ ರಸ ಸೇರಿಸಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅನ್ನಕ್ಕಿಂತ ಅವಲಕ್ಕಿ ತಿನ್ನುವುದು ಆರೋಗ್ಯಕ್ಕೆ ನಿಜಕ್ಕೂ ಉತ್ತಮವೇ, ಇಲ್ಲಿದೆ ಸಂಪೂರ್ಣ ವಿವರ

ಆಯುರ್ವೇದದ ಪ್ರಕಾರ ತಲೆಗೆ ಎಷ್ಟು ದಿನಕ್ಕೊಮ್ಮೆ ಸ್ನಾನ ಮಾಡಬೇಕು

ಕಿವಿಯಲ್ಲಿ ಸದಾ ಗಾಳಿಯಾಡುವಂತಹ ಶಬ್ಧ ಕೇಳುವುದು ಯಾಕೆ, ಯಾವ ರೋಗದ ಲಕ್ಷಣ

ಮೊಡವೆ ಸಮಸ್ಯೆ ನಿವಾರಣೆಯಾಗಬೇಕೇ, ಇಂದೇ ಈ 4 ಆಹಾರ ಪದಾರ್ಥಗಳನ್ನು ತಿನ್ನುವುದನ್ನು ನಿಲ್ಲಿಸಿ

ಹೊಟ್ಟೆಯ ಕೊಬ್ಬನ್ನು ಕರಗಿಸಲು ಅತ್ಯಂತ ಸರಳ ಮತ್ತು ಪರಿಣಾಮಕಾರಿ ಯೋಗಾಸನಗಳು

ಮುಂದಿನ ಸುದ್ದಿ
Show comments