Webdunia - Bharat's app for daily news and videos

Install App

ಬೆಂಡೆಕಾಯಿ ಚಟ್ನಿ

Webdunia
ಗುರುವಾರ, 14 ಫೆಬ್ರವರಿ 2019 (15:24 IST)
ಮಧುಮೇಹಕ್ಕೆ ರಾಮಬಾಣ ಬೆಂಡೆಕಾಯಿ! ಹಾಗೇಯೆ ಬೆಂಡೆಕಾಯಿಯಲ್ಲಿ ಹೈ ಫೈಬರ್ ಕಂಟೆಂಟ್ ಹೆಚ್ಚಾಗಿರುವುದರಿಂದ ಜೀರ್ಣಕ್ರಿಯೆಗೆ ಬೆಂಡೆಕಾಯಿ ಉಪಯುಕ್ತವಾಗಿದೆ. ಇನ್ನೂ ಅನೇಕ ರೀತಿಯಲ್ಲಿ ಉಪಯುಕ್ತಕಾರಿಯಾಗಿರುವ ಬೆಂಡೆಕಾಯಿಯಿಂದ ನಾವು ಸಾಮಾನ್ಯವಾಗಿ ಪಲ್ಯ, ಗೊಜ್ಜು ಮತ್ತು ಹುಳಿಯನ್ನು ಮಾಡುತ್ತೇವೆ. ಆದರೆ ಅತಿ ಸುಲಭವಾಗಿ ತಯಾರಿಸಬಹುದಾದ ಚಟ್ನಿಯ ಬಗ್ಗೆ ತಿಳಿದುಕೊಳ್ಳೋಣ.
ತಯಾರಿಸಲು ಬೇಕಾಗುವ ಸಾಮಗ್ರಿಗಳು
 
ಅರ್ಧ ಕೆಜಿಯಷ್ಟು ಬೆಂಡೆಕಾಯಿ
7-8 ಹಸಿಮೆಣಸಿನಕಾಯಿ
ಸ್ವಲ್ಪ ಕೊತ್ತಂಬರಿಸೊಪ್ಪು
ಬೆಲ್ಲದ ಗಾತ್ರದ ಹುಣಸೆಹಣ್ಣು
1 ಟೀ ಸ್ಪೂನ್ ಜೀರಿಗೆ
ಅರ್ಧ ಟೀಸ್ಪೂನ್ ಸಾಸಿವೆ
ರುಚಿಗೆ ತಕ್ಕಷ್ಟು ಉಪ್ಪು
 
ತಯಾರಿಸುವ ವಿಧಾನ:
 
ಮೊದಲಿಗೆ ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆದು ಸ್ವಲ್ಪ ಹೊತ್ತು ಆರಲು ಬಿಡಬೇಕು. ನಂತರ ಬೆಂಡೆಕಾಯಿಯನ್ನು ಪಲ್ಯಕ್ಕೆ ಹಚ್ಚಿಕೊಳ್ಳುವಂತೆ ಹೆಚ್ಚಿಕೊಳ್ಳಬೇಕು, ಬಾಣಲಿಯಲ್ಲಿ 1 ಸ್ಪೂನ್ ಎಣ್ಣೆಹಾಕಿಕೊಂಡು ಹುಣಸೆ ಹಣ್ಣಿನ ಹುಳಿಯೊಂದಿಗೆ ಅದರ ಲೋಳೆ ಹೋಗುವ ತನಕ ಚೆನ್ನಾಗಿ ಹುರಿಯಬೇಕು. ಅದೇ ಬಾಣಲಿಗೆ ಹಸಿಮೆಣಸಿನಕಾಯಿ, ಕೊತ್ತಬಂರಿ ಸೊಪ್ಪು, ಜೀರಿಗೆ ಹಾಕಿ ಸ್ವಲ್ಪ ಹೊತ್ತು ಬಾಡಿಸಿಕೊಳ್ಳಬೇಕು. ಹುರಿದುಕೊಂಡ ಪದಾರ್ಥಗಳು ತಣ್ಣಗಾದ ಮೇಲೆ ಮಿಕ್ಸಿಯಲ್ಲಿ ಚಟ್ನಿಯ ಹದಕ್ಕೆ ರುಬ್ಬಿಕೊಳ್ಳಬೇಕು. 
 
ರುಬ್ಬಿಕೊಂಡ ಮಿಶ್ರಣವನ್ನು ಮತ್ತೊಮ್ಮೆ ಬಾಣಲಿಯಲ್ಲಿ 7-8 ಚಮಚ ಎಣ್ಣೆಹಾಕಿ ಸಾಸಿವೆ ಹಾಗೂ ಸ್ವಲ್ಪ ಜೀರಿಗೆ ಒಗ್ಗರಣೆ ಮಾಡಿಕೊಂಡು ಅದಕ್ಕೆ ರುಬ್ಬಿಕೊಂಡ ಮಿಶ್ರಣವನ್ನು ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ 5 ನಿಮಿಷ ಚೆನ್ನಾಗಿ ಬಾಡಿಸಿದರೆ ಬೆಂಡೆಕಾಯಿ ಚಟ್ನಿ ಸಿದ್ಧವಾಗುತ್ತದೆ. 
 
ಬೆಂಡೆಕಾಯಿ ಚಟ್ನಿ ಚಪಾತಿ, ಬಿಸಿಬಿಸಿ ಅನ್ನ, ರೊಟ್ಟಿಯೊಂದಿಗೆ ಸವಿಯಲು ಚೆನ್ನಾಗಿರುತ್ತದೆ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ
Show comments