Webdunia - Bharat's app for daily news and videos

Install App

ಸಿಹಿಯಾದ ಬೆಂಡೆಕಾಯಿ ಕಾಯಿರಸ ಮಾಡುವ ವಿಧಾನ

Webdunia
ಬುಧವಾರ, 1 ಫೆಬ್ರವರಿ 2017 (09:16 IST)
ಬೆಂಗಳೂರು: ಬೆಂಡೆಕಾಯಿ ಬಳಸಿ ತರಹೇವಾರಿ ಐಟಂ ಮಾಡಬಹುದು. ಅದರಲ್ಲಿ ಸ್ವಲ್ಪ ಸಿಹಿ ಮಿಶ್ರಿತ ಸಾಂಬಾರ್ ನನ್ನೇ ಹೋಲುವ ಕಾಯಿರಸ ಕೂಡಾ ಒಂದು. ಇದನ್ನು ಮಾಡುವ ವಿಧಾನ ಇಲ್ಲಿದೆ ನೋಡಿ.

 
ಬೇಕಾಗುವ ಸಾಮಗ್ರಿಗಳು


ಬೆಂಡೆಕಾಯಿ
ಕಾಯಿ ತುರಿ
ಒಣ ಮೆಣಸು
ಅರಸಿನ ಪುಡಿ
ಹುಳಿ
ಬೆಲ್ಲ
ಉದ್ದಿನ ಬೇಳೆ
ಇಂಗು
ಒಗ್ಗರಣೆ ಸಾಮಾನು

ಮಾಡುವ ವಿಧಾನ

ಬೆಂಡೆಕಾಯಿಯನ್ನು ಸಾಂಬಾರ್ ಗೆ ಬೇಕಾದ ಹಾಗೆ ಕತ್ತರಿಸಿಕೊಳ್ಳಿ. ಇದನ್ನು ಹುಣಸೆ ಹುಳಿ ರಸ, ಅರಸಿನ ಪುಡಿ, ಉಪ್ಪು, ಬೆಲ್ಲ ಹಾಕಿ ಬೇಯಿಸಿಕೊಳ್ಳಿ. ಬೆಲ್ಲ ಸ್ವಲ್ಪ ಜಾಸ್ತಿಯೇ ಇರಲಿ. ಬಾಣಲೆಯಲ್ಲಿ ಉದ್ದಿನ ಬೇಳೆ, ಕೆಂಪು ಮೆಣಸು, ಇಂಗು ಹಾಕಿಕೊಂಡು ಎಣ್ಣೆ ಹಾಕಿ ಹುರಿದುಕೊಳ್ಳಿ. ಇದನ್ನು ಕಾಯಿ ತುರಿಯೊಂದಿಗೆ ಹಾಕಿ ನುಣ್ಣಗೆ ರುಬ್ಬಿ. ಈ ಮಸಾಲೆಯನ್ನು ಬೆಂದ ಬೆಂಡೆಕಾಯಿ ಹೋಳಿನ ಜತೆಗೆ ಸೇರಿಸಿ ಚೆನ್ನಾಗಿ ಕುದಿಸಿ. ಇದು ಸಾಂಬಾರ್ ನಷ್ಟು ತೆಳ್ಳಗಾಗುವುದು ಬೇಡ. ನಂತರ ಒಗ್ಗರಣೆ ಹಾಕಿದರೆ ಬೆಂಡೆಕಾಯಿ ಕಾಯಿರಸ ರೆಡಿ. ಇದು ಅನ್ನ, ದೋಸೆಯ ಜತೆಗೆ ತಿನ್ನಲು ರುಚಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ತೆಳ್ಳಗಿರೋರಿಗೆ ಕೊಲೆಸ್ಟ್ರಾಲ್ ಬರಲ್ವಾ: ನಿಜಾಂಶ ಇಲ್ಲಿದೆ

ಡ್ರ್ಯಾಗನ್ ಹಣ್ಣನ್ನು ಯಾಕೆ ಸೇವಿಸಬೇಕೆಂಬುದಕ್ಕೆ ಇಲ್ಲಿದೆ ಕೆಲ ಕಾರಣ

ಹೃದಯದ ಆರೋಗ್ಯ ಚೆನ್ನಾಗಿರಬೇಕೆಂದರೆ ಇದೊಂದನ್ನು ಸೇವಿಸಬೇಡಿ

ಉಳಿದ ಅನ್ನ ಮರುದಿನ ಸೇವನೆ ಮಾಡ್ತೀರಾ ಹಾಗಿದ್ದರೆ ಡೇಂಜರ್ ಏನು ನೋಡಿ

ಮಕ್ಕಳಲ್ಲಿನ ಏಕಾಗ್ರತೆ, ನೆನಪು ಶಕ್ತಿ ಸಮಸ್ಯೆಗೆ ಬ್ರಾಹ್ಮಿ ರಾಮಬಾಣ

ಮುಂದಿನ ಸುದ್ದಿ
Show comments