Select Your Language

Notifications

webdunia
webdunia
webdunia
webdunia

ಖೋವಾ ಮಿಕ್ಸ್ ಜಾಮೂನ್

ಖೋವಾ ಮಿಕ್ಸ್ ಜಾಮೂನ್
ಬೆಂಗಳೂರು , ಶುಕ್ರವಾರ, 2 ನವೆಂಬರ್ 2018 (15:57 IST)
ಹಬ್ಬ ಹರಿದಿನಗಳಲ್ಲಿ ಸಾಮಾನ್ಯವಾಗಿ ಮಾಡುವ ಸಿಹಿ ಪದಾರ್ಥವೆಂದರೆ ಜಾಮೂನು. ಜಾಮೂನನ್ನು ಸುಲಭವಾಗಿ ತಯಾರಿಸಿ ಸವಿಯಬಹುದು. ಅದರಲ್ಲೂ ಮಾರುಕಟ್ಟೆಯಲ್ಲಿ ನಾನಾ ತರಹದ ಜಾಮೂನುಗಳು ಸಿಗುತ್ತವೆ. ಆದರೆ ಈ ಖೋವಾ ಮಿಕ್ಸ್ ಜಾಮೂನನ್ನು ದೀಡೀರ್ ಎಂದು ತಯಾರಿಸಬಹುದು. ಹಾಗಾದರೆ ಇದನ್ನು ಹೇಗೆ ತಯಾರಿಸಬಹುದು ಎಂದು ಹೇಳುತ್ತೀವಿ. ನೀವೂ ಒಮ್ಮೆ ಟ್ರೈ ಮಾಡಿ ನೋಡಿ..
ಬೇಕಾಗುವ ಸಾಮಗ್ರಿಗಳು:
 
 * 100 ಗ್ರಾಂ ಖೋವಾ
 * 100 ಗ್ರಾಂ ಮೈದಾ ಹಿಟ್ಟು
* 100 ಗ್ರಾಂ ಸಕ್ಕರೆ 
* 2 ಏಲಕ್ಕಿ
* ಕರಿಯಲು ಬೇಕಾದಷ್ಟು ಎಣ್ಣೆ/ ತುಪ್ಪ
 
ತಯಾರಿಸುವ ವಿಧಾನ :
 
ಮೊದಲು ಸಕ್ಕರೆ ಪಾಕವನ್ನು ಮಾಡಿಕೊಳ್ಳೋಣ. ಪಾಕವನ್ನು ಮಾಡಿಕೊಳ್ಳಲು ಒಂದು ಬಾಣಲೆಯಲ್ಲಿ ಒಂದು ಅಳತೆ ನೀರಿಗೆ ಒಂದು ಅಳತೆ ಸಕ್ಕರೆಯನ್ನು ಹಾಕಿ ಪಾಕವನ್ನು ಮಾಡಿಟ್ಟುಕೊಳ್ಳಬೇಕು. ಅದಕ್ಕೆ ಏಲಕ್ಕಿ ಪುಡಿಯನ್ನು ಸ್ವಲ್ಪ ಹಾಕಬೇಕು. 
 
ನಂತರ ಮೈದಾ ಹಿಟ್ಟು ಮತ್ತು ಖೋವಾವನ್ನು ಚೆನ್ನಾಗಿ ಕಲೆಸಿ ಮಿಕ್ಸ್ ಮಾಡಿಟ್ಟುಕೊಳ್ಳಬೇಕು. ಅದನ್ನು ಸ್ವಲ್ಪ ಸ್ವಲ್ಪ ನೀರನ್ನು ಸೇರಿಸಿ ಹಗುರವಾಗಿ ಜಾಮೂನಿನ ಹದಕ್ಕೆ ಕಲೆಸಿಕೊಳ್ಳಬೇಕು. ನಂತರ ಇದನ್ನು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿಕೊಳ್ಳಬೇಕು. ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಅಥವಾ ಸ್ವಲ್ಪ ತುಪ್ಪವನ್ನು ಹಾಕಿ ಕಾಯಿಸಿಕೊಂಡು ಅದಕ್ಕೆ ಚಿಕ್ಕ ಚಿಕ್ಕ ಉಂಡೆಯನ್ನು ಎಣ್ಣೆಯಲ್ಲಿ ಕರಿದು ತೆಗೆದು ಪಾಕದಲ್ಲಿ ಹಾಕಿ ಸ್ವಲ್ಪ ಹೊತ್ತು ಬಿಟ್ಟರೆ ರುಚಿ ರುಚಿಯಾದ ಸವಿಯಾದ ಖೋವಾ ಮಿಕ್ಸ್ ಜಾಮೂನು ಸವಿಯಲು ಸಿದ್ಧ. 

Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳ ಹಸಿವನ್ನು ಹೆಚ್ಚಿಸುತ್ತೇ ಈ ಆಹಾರಗಳು