ಜಲ್ಜೀರಾ ಆರೋಗ್ಯಕ್ಕೆ ಹೇಳಿಮಾಡಿಸಿದಂತಹ ಪಾನೀಯ

Webdunia
ಬುಧವಾರ, 3 ಅಕ್ಟೋಬರ್ 2018 (18:28 IST)
ಜಲ್ಜೀರಾ ಆರೋಗ್ಯಕ್ಕೆ ಹೇಳಿಮಾಡಿಸಿದಂತಹ ಪಾನೀಯ. ಆಯುರ್ವೇದದ ಔಷಧೀಯ ಗುಣವನ್ನು ಇದು ಹೊಂದಿರುವುದರಿಂದ ಜಲ್ಜೀರಾ ಕುಡಿಯೋದ್ರಿಂದ ಅಜೀರ್ಣದ ಸಮಸ್ಯೆ ನಿವಾರಣೆಯಾಗುತ್ತದೆ. ಭೂರಿ ಭೋಜನದ ನಂತರ ಜಲ್ಜೀರಾ ಕುಡಿದರೆ ಗ್ಯಾಸ್ಟ್ರಿಕ್ ಸಮಸ್ಯೆಯಾಗುವುದಿಲ್ಲ ಮತ್ತು ಜಲ್ಜೀರಾವನ್ನು ಮನೆಯಲ್ಲೇ ಸುಲಭವಾಗಿ ಮಾಡಬಹುದು.
ಬೇಕಾಗುವ ಸಾಮಗ್ರಿ:
ಪುದೀನಾ ಸೊಪ್ಪು
ಕೊತ್ತಂಬರಿ ಸೊಪ್ಪು
ಐಸ್ ಕ್ಯೂಬ್ಸ್
ಅರ್ಧ ಇಂಚು ತುರಿದ ಶುಂಠಿ
2 ಚಮಚ ಜೀರಿಗೆ
ಅರ್ಧ ಚಮಚ ಮಾವಿನಕಾಯಿ ಪುಡಿ
ಬ್ಲಾಕ್ ಸಾಲ್ಟ್
ಎರಡೂವರೆ ಗ್ಲಾಸ್ ನೀರು
ಅರ್ಧ ನಿಂಬೆಹಣ್ಣು
ಅರ್ಧ ಚಮಚ ಕಾಳುಮೆಣಸಿನ ಪುಡಿ.
 
ತಯಾರಿಸುವ ವಿಧಾನ : ಜೀರಿಗೆಯನ್ನು ಹುರಿದು ಪುಡಿ ಮಾಡಿಕೊಳ್ಳಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಮತ್ತು ಪುದೀನಾ ಸೊಪ್ಪನ್ನು ಬ್ಲೆಂಡರ್ ನಲ್ಲಿ ಹಾಕಿ ರುಬ್ಬಿಕೊಳ್ಳಿ. ದೊಡ್ಡ ಜಗ್ ತೆಗೆದುಕೊಂಡು ಅದರಲ್ಲಿ ನಾಲ್ಕಾರು ಐಸ್ ಕ್ಯೂಬ್ಸ್ ಹಾಕಿ. ತುರಿದ ಶುಂಠಿಯನ್ನು ಬೆರೆಸಿ. ರುಬ್ಬಿಕೊಂಡ ಸೊಪ್ಪಿನ ಮಿಶ್ರಣವನ್ನೂ ಹಾಕಿಕೊಳ್ಳಿ. ನಂತರ ಅದಕ್ಕೆ ಜೀರಿಗೆ ಪುಡಿ, ಆಮ್ ಚೂರ್ ಪೌಡರ್, ಉಪ್ಪು, 2 ಗ್ಲಾಸ್‌ನಷ್ಟು ನೀರು, ನಿಂಬೆ ರಸ, ಕಾಳುಮೆಣಸಿನ ಪುಡಿ ಎಲ್ಲವನ್ನೂ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಉಪ್ಪು, ಹುಳಿ ಸರಿಯಾಗಿದೆಯಾ ಅಂತಾ ಪರಿಶೀಲಿಸಿದರೆ ನಿಮ್ಮ ಮೆಚ್ಚಿನ ಆರೋಗ್ಯಕರ ಜಲ್ಜೀರಾ ಕುಡಿಯಲು ಸಿದ್ಧ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ದೀಪಾವಳಿಗೆ ಖೋವಾ ಬಳಸಿ ಗುಲಾಬ್ ಜಾಮೂನ್ ಮಾಡಿ

ಹಬ್ಬದ ಋತುವಿನಲ್ಲಿ ತೂಕ ಹೆಚ್ಚಾಗದಂತೆ ಕಾಪಾಡಿಕೊಳ್ಳಲು ಆಹಾರ ಕ್ರಮ ಹೀಗೇ ಅನುಸರಿಸಿ

ಮುಂದಿನ ಸುದ್ದಿ
Show comments