Webdunia - Bharat's app for daily news and videos

Install App

ಮಜ್ಜಿಗೆ ಹುಳಿ ಮಾಡುವುದು ಹೇಗೆ ಗೊತ್ತಾ...?

Webdunia
ಗುರುವಾರ, 15 ಫೆಬ್ರವರಿ 2018 (07:42 IST)
ಬೆಂಗಳೂರು: ಅಡುಗೆ ಮಾಡುವುದಕ್ಕೆ ಬೇಸರ ಅನಿಸಿದಾಗ ಸುಲಭವಾಗಿ ತಯಾರಾಗುವುದು ಮಜ್ಜಿಗೆ ಹುಳಿ. ಇದು ಅನ್ನಕ್ಕೆ ಹೇಳಿಮಾಡಿಸಿದ್ದು. ಮಜ್ಜಿಗೆ ಹುಳಿ ಮಾಡಲು ಬೇಕಾಗುವ ಸಾಮಗ್ರಿ ಮತ್ತು ವಿಧಾನ ಇಲ್ಲಿದೆ ನೋಡಿ

ಸಾಮಗ್ರಿಗಳು
1. ಬೂದುಗುಂಬಳ ಕಾಯಿ ಹೆಚ್ಚಿದ್ದು -                  1 ಕಪ್
2. ಶುಂಠಿ -                                                1 ಇಂಚು
3. ಹಸಿಮೆಣಸಿನ ಕಾಯಿ -                               2
4. ಜೀರಿಗೆ -                                                5ಚಮಚ
5. ತೆಂಗಿನ ತುರಿ -                                        1/4 ಕಪ್
6. ಕೊತ್ತಂಬರಿ ಸೊಪ್ಪು -                                  ಸ್ವಲ್ಪ
7. ಅರಿಶಿನ -                                                1/2  ಸ್ಪೂನ್
8. ಮೊಸರು -                                            ಒಂದು ಕಪ್

ಒಗ್ಗರಣೆಗೆ
1. ಎಣ್ಣೆ -                                                   1 ಚಮಚ
2. ಸಾಸಿವೆ -                                               ಸ್ವಲ್ಪ
3. ಕರಿಬೇವು -                                              ಸ್ವಲ್ಪ
4. ಇಂಗು-                                                  ಸ್ವಲ್ಪ
5. ಒಣಮೆಣಸಿನ ಕಾಯಿ -                                1


ಮಾಡುವ ವಿಧಾನ

ಬೂದುಗುಂಬಳದ ಹೋಳುಗಳನ್ನು ಸ್ವಲ್ಪ ಉಪ್ಪು ಹಾಕಿ ಒಂದು ಕಪ್ ನೀರೂ ಹಾಕಿ ಬೇಯಿಸಿ. ಮತ್ತೊಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದಕ್ಕೆ ಹಸಿಮೆಣಸಿನ ಕಾಯಿ, ಜೀರಿಗೆ ಹಾಕಿ ಹುರಿಯಬೇಕು. ಕೊಂಚ ತಣ್ಣಗಾದ ಮೇಲೆ ಇದರ ಜೊತೆಗೆ ಶುಂಠಿ, ತೆಂಗಿನ ತುರಿ, ಕೊತ್ತಂಬರಿ ಸೊಪ್ಪು ಅರಿಶಿನ ಸೇರಿಸಿ ರುಬ್ಬಿಕೊಳ್ಳಿ.


ರುಬ್ಬಿದ ಈ ಮಿಶ್ರಣವನ್ನು ಬೇಯುತ್ತಿರುವ ಬೂದುಗುಂಬಳ ಕಾಯಿಗೆ ಹಾಕಿ ಉಪ್ಪು, ಸಕ್ಕರೆ ಸೇರಿಸಿ ಚೆನ್ನಾಗಿ ಬೇಯಿಸಿಕೊಳ್ಳಿ. ಸ್ಟವ್ ಆಫ್ ಮಾಡಿ ಮೊಸರನ್ನು ಸೇರಿಸಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಒಗ್ಗರಣೆ ಸಾಮಾನುಗಳನ್ನು ಸೇರಿಸಿ, ಬಾಡಿಸಿ ಮಜ್ಜಿಗೆ ಹುಳಿಗೆ ಸೇರಿಸಿದರೆ ಮಜ್ಜಿಗೆ ಹುಳಿ ಸಿದ್ಧ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ
Show comments