ಬೆಂಗಳೂರು: ಕೊದ್ದೆಲ್ ಎಂದರೆ ಕರಾವಳಿಗರ ಭಾಷೆಯಲ್ಲಿ ಸಾಂಬಾರ್. ಬೂತದ ಕೊದ್ದೆಲ್ ಎಂದರೆ ಸಾಮಾನ್ಯವಾಗಿ ಬೂತ ಕೋಲದ ಸಂದರ್ಭದಲ್ಲಿ ನೀಡುವ ಅನ್ನ ಸಂತರ್ಪಣೆಯಲ್ಲಿ ಸಾಮಾನ್ಯವಾಗಿ ಇಂತಹದ್ದೇ ಸಾಂಬಾರ್ ಮಾಡುತ್ತಾರೆ. ಅದು ಏನು ಹೇಗೆ ಮಾಡುವುದು ಎಂದು ತಿಳಿದುಕೊಳ್ಳೋಣ.
ಬೇಕಾಗುವ ಸಾಮಗ್ರಿಗಳು
ತೊಂಡೆಕಾಯಿ
ಅರಸಿನ ಪುಡಿ
ಕಾಯಿ ತುರಿ
ಬೆಳ್ಳುಳ್ಳಿ
ಕೆಂಪು ಮೆಣಸು
ಧನಿಯಾ
ಉಪ್ಪು
ಒಗ್ಗರಣೆಗೆ ಬೇಕಾದ ಸಾಮಾನುಗಳು
ಮಾಡುವ ವಿಧಾನ
ತೊಂಡೆಕಾಯಿಯನ್ನು ಜಜ್ಜಿ ಅದಕ್ಕೆ ಸ್ವಲ್ಪ ಅರಸಿನ ಪುಡಿ, ಉಪ್ಪು ಹಾಕಿ ಬೇಯಿಸಿಕೊಳ್ಳಿ. ಕಾಯಿ ತುರಿಗೆ ಸ್ವಲ್ಪ ಬೆಳ್ಳುಳ್ಳಿ, ಕೆಂಪು ಮೆಣಸು, ಸ್ವಲ್ಪ ಧನಿಯಾ, ಚಿಟಿಕೆ ಅರಸಿನ ಪುಡಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಬೆಂದ ಹೋಳಿಗೆ ಸೇರಿಸಿ ಚೆನ್ನಾಗಿ ಕುದಿಸಿ. ಇದಕ್ಕೆ ಕರಿಬೇವು, ಸಾಸಿವೆ ಹಾಕಿ ಒಗ್ಗರಣೆ ಕೊಟ್ಟರೆ ಬೂತದ ಕೊದ್ದೆಲ್ ಸವಿಯಲು ಸಿದ್ಧ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ