Webdunia - Bharat's app for daily news and videos

Install App

ವೆಜ್ ಪರೋಟ ಮಾಡುವ ಸಿಂಪಲ್ ರೆಸಿಪಿ ಇಲ್ಲಿದೆ ನೋಡಿ….

Webdunia
ಶನಿವಾರ, 16 ಸೆಪ್ಟಂಬರ್ 2017 (16:26 IST)
ದಿನವೂ ಚಿತ್ರನ್ನ, ಮೊಸರನ್ನ, ಉಪ್ಪಿಟ್ಟು, ಪುಳಿಯೋಗರೆ, ಪೂರಿ ಇತ್ಯಾದಿ ಇತ್ಯಾದಿ ಬಿಟ್ಟು ಸ್ವಲ್ಪ ವೆರೈಟಿ ಫುಡ್ ಯಾಕೆ ಟ್ರೈ ಮಾಡಬಾರದು…. ಅದಕ್ಕಾಗಿಯೇ ಇಲ್ಲಿದೆ ನೋಡಿ ವೆಜ್ ಪರೋಟ ರೆಸಿಪಿ..

ವೆಜ್ ಪರೋಟ

ಬೇಕಾಗುವ ಪದಾರ್ಥಗಳು:


ಮೈದಾ - 3 ಕಪ್
ಗೋಧಿ ಹಿಟ್ಟು – 1 ಕಪ್
ಕ್ಯಾರೆಟ್ – 2
ಬೇಯಿಸಿದ ಆಲೂಗಡ್ಡೆ – 2
ಕ್ಯಾಪ್ಸಿಕಂ  – 1
ಮೆಂತ್ಯಾಸೊಪ್ಪು – 1 ಕಟ್ಟು
ಈರುಳ್ಳಿ – ¼ ಕಪ್
ಮೊಸರು – ಸ್ವಲ್ಪ
ಹಸಿಮೆಣಸಿನಕಾಯಿ – 2
ಅಚ್ಚಖಾರದ ಪುಡಿ – ½ ಚಮಚ
ಗರಂ ಮಸಾಲಾ – ½ ಚಮಚ
ಆಮ್ ಚೂರ್ ಪೌಡರ್ - ½ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಚೀಸ್ – ‍ಸ್ವಲ್ಪ

ಮಾಡುವ ವಿಧಾನ: ಮೈದಾ, ಗೋಧಿಹಿಟ್ಟು, ಸ್ವಲ್ಪ ಎಣ್ಣೆ, ಸ್ವಲ್ಪ ನೀರು, ಸ್ವಲ್ಪ ಮೊಸರು ಹಾಕಿ ಚಪಾತಿ ಹದಕ್ಕೆ ಕಲಸಿ 10 ನಿಮಿಷ ನೆನೆಯಲು ಬಿಡಬೇಕು. ಪ್ಯಾನ್ ಗೆ ಎಣ್ಣೆ, ಹಸಿಮೆಣಸಿನಕಾಯಿ, ಈರುಳ್ಳಿ, ಮೆಂತ್ಯಾಸೊಪ್ಪು ಹಾಕಿ ಹಸಿ ವಾಸನೆ ಹೋಗುವವರೆಗೆ ಕಲಕಬೇಕು. ನಂತರ ಅದಕ್ಕೆ ಹೆಚ್ಚಿಟ್ಟ ಕ್ಯಾರೆಟ್, ಕ್ಯಾಪ್ಸಿಕಂ, ಹಾಕಿ ಬೇಯುವವರೆಗೆ ಬಿಡಬೇಕು. ಇದಕ್ಕೆ ಸ್ಮಾಶ್ ಮಾಡಿದ ಆಲೂಗಡ್ಡೆ, ಅಚ್ಚಖಾರದ ಪುಡಿ, ಗರಂ ಮಸಾಲಾ, ಆಮ್ ಚೂರ್ ಪೌಡರ್, ತುರಿದ ಚೀಸ್, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚನ್ನಾಗಿ ಮಿಕ್ಸ್ ಮಾಡಬೇಕು. ಇದನ್ನು ನಾದಿಟ್ಟ ಮೈದಾವನ್ನು ಚಿಕ್ಕ ಉಂಡೆ ಮಾಡಿ ಹೋಳಿಗೆಗೆ ಹೂರಣ ಇಟ್ಟಂತೆ ಇಟ್ಟು ಲಟ್ಟಿಸಬೇಕು. ತವಾಗೆ ಎಣ್ಣೆಹಾಕಿ ಪರೋಟವನ್ನು ಎರಡೂ ಕಡೆ ಸರಿಯಾಗಿ ಬೇಯಿಸಬೇಕು. ಪರೋಟ ಸಿದ್ಧವಾಗುತ್ತಿದ್ದಂತೆ ಮೊಸರು ಅಥವಾ ಉಪ್ಪಿನಕಾಯಿಯೊಂದಿಗೆ ಬಿಸಿ ಬಿಸಿ ಸವಿದರೆ ಚಂದ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಎಲ್ಲರೂ ಇಷ್ಟಪಟ್ಟು ತಿನ್ನುವ ರಾಂಬೂಟನ್ ಹಣ್ಣಿನ ಆರೋಗ್ಯ ಪ್ರಯೋಜನ ಇಲ್ಲಿದೆ

ರಾತ್ರಿ ನಿದ್ರೆ ಬರುವವರೆಗೂ ಬೆಡ್ ಮೇಲೆ ಮಲಗಿ ಮೊಬೈಲ್ ನೋಡುತ್ತಿದ್ದರೆ ಇದನ್ನು ತಪ್ಪದೇ ಓದಿ

ರಕ್ತ ತುಂಬಲು ಕೊಡುವ ಗುಳಿಗೆಗಳಿಂದ ಏನು ಅಡ್ಡಪರಿಣಾಮವಿದೆ ಎಂದು ತಿಳಿದುಕೊಳ್ಳಿ

ಪೇಪರ್ ಅವಲಕ್ಕಿಯಿಂದ ಆರೋಗ್ಯಕ್ಕೆ ಸಿಗುವ ಸಿಗುವ ಪ್ರಯೋಜನಗಳು ಇಲ್ಲಿದೆ

ಆಯುರ್ವೇದದ ಪ್ರಕಾರ ಬಿಸಿ ನೀರಿಗೆ ಜೇನು ತುಪ್ಪ ಸೇರಿಸಿ ಸೇವಿಸಬಾರದು ಯಾಕೆ ಗೊತ್ತಾ

ಮುಂದಿನ ಸುದ್ದಿ
Show comments