Publish Date: Tue, 17 Jan 2017 (09:14 IST)
Updated Date: Tue, 17 Jan 2017 (09:29 IST)
ಬೆಂಗಳೂರು: ಹೊಸದೇನಾದರೂ ಸಿಹಿ ಮಾಡಬೇಕಲ್ಲಾ? ಎಂದರೆ ಹೆಚ್ಚು ಕಾಲ ಹಾಳಾಗದೆ ಉಳಿಯುವಂತಹ ಗೋಧಿ ಹುಡಿ ಬಳಸಿ ಲಾಡು ಮಾಡಬಹುದು. ಮಾಡುವ ವಿಧಾನ ಇಲ್ಲಿದೆ ನೋಡಿಕೊಳ್ಳಿ.
ಬೇಕಾಗುವ ಸಾಮಗ್ರಿಗಳು
ಗೋಧಿ ಹುಡಿ
ಸಕ್ಕರೆ
ಏಲಕ್ಕಿ
ಗೋಡಂಬಿ
ಒಣ ದ್ರಾಕ್ಷಿ
ತುಪ್ಪ
ಮಾಡುವ ವಿಧಾನ
ಗೋಧಿ ಹುಡಿಯನ್ನು ಸ್ವಲ್ಪ ತುಪ್ಪದಲ್ಲಿ ಹುರಿದುಕೊಳ್ಳಿ. ಇನ್ನೊಂದು ಪಾತ್ರೆಯಲ್ಲಿ ಸಕ್ಕರೆ ನೂಲು ಪಾಕ ಮಾಡಿಕೊಳ್ಳಿ. ಸಕ್ಕರೆ ಪಾಕ ಮಾಡುವಾಗ ಏಲಕ್ಕಿ ಪುಡಿ ಮಾಡಿ ಹಾಕಿ. ಸಕ್ಕರೆ ಪಾಕವಾದ ಮೇಲೆ ಹುರಿದ ಗೋಧಿ ಹುಡಿಗೆ ಹಾಕಿ. ಇದಕ್ಕೆ ಗೋಡಂಬಿ, ಒಣ ದ್ರಾಕ್ಷಿಯನ್ನೂ ಹಾಕಿ. ಸ್ವಲ್ಪ ತಣ್ಣಗಾದ ಮೇಲೆ ಲಾಡಿನಂತೆ ಉಂಡೆ ಕಟ್ಟಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ