Publish Date: Sat, 14 Jan 2017 (10:04 IST)
Updated Date: Sat, 14 Jan 2017 (10:12 IST)
ಬೆಂಗಳೂರು: ಹೀರೇಕಾಯಿ ಉತ್ತಮ ನಾರಿನಂಶವುಳ್ಳ ತರಕಾರಿ. ಇದರ ಸಿಪ್ಪೆ ಆರೋಗ್ಯಕ್ಕೆ ಉತ್ತಮ. ಆದರೆ ನಾವು ಅದರ ಸಿಪ್ಪೆಯನ್ನು ಬಿಸಾಕುವುದೇ ಜಾಸ್ತಿ. ಅದರ ಚಟ್ನಿ ಮಾಡಬಹುದು. ಹೇಗೆಂದು ಹೇಳುತ್ತೇವೆ ನೋಡಿ.
ಬೇಕಾಗುವ ಸಾಮಗ್ರಿಗಳು
ಹೀರೇಕಾಯಿ ಸಿಪ್ಪೆ
ಉದ್ದಿನ ಬೇಳೆ
ಕೆಂಪು ಮೆಣಸು
ಹುಳಿ
ಕಾಯಿ ತುರಿ
ಉಪ್ಪು
ಮಾಡುವ ವಿಧಾನ
ಹೀರೇಕಾಯಿ ಸಿಪ್ಪೆಯನ್ನು ತೊಳೆದುಕೊಂಡು ಹುಣಸೆ ಹುಳಿ ಹಾಕಿದ ನೀರಿನಲ್ಲಿ ಎರಡು ಕುದಿ ಕುದಿಸಿ. ನಂತರ ಒಂದು ಬಾಣಲೆಯಲ್ಲಿ ಉದ್ದಿನ ಬೇಳೆ, ಕೆಂಪು ಮೆಣಸು ಹುರಿದುಕೊಳ್ಳಿ. ಇದನ್ನು ಕಾಯಿ ತುರಿ ಜತೆಗೆ, ಬೇಯಿಸಿದ ಹೀರೇಕಾಯಿ ಸಿಪ್ಪೆ ಸೇರಿಸಿ ನೀರು ಹಾಕದೆ ಗಟ್ಟಿಯಾಗಿ ರುಬ್ಬಿ ಕೊಳ್ಳಿ. ಇದೀಗ ಹೀರೇಕಾಯಿ ಸಿಪ್ಪೆಯ ಚಟ್ನಿ ರೆಡಿ. ಇದನ್ನು ದೋಸೆ, ಅನ್ನದ ಜತೆಗೂ ಸೇವಿಸಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ