Select Your Language

Notifications

webdunia
webdunia
webdunia
webdunia

ಆರೋಗ್ಯಕರ ಗ್ರೀನ್ ಟೀ

ಆರೋಗ್ಯಕರ ಗ್ರೀನ್ ಟೀ
ಬೆಂಗಳೂರು , ಬುಧವಾರ, 24 ಅಕ್ಟೋಬರ್ 2018 (17:27 IST)
ಈಗ ಎಲ್ಲರ ಬಾಯಲ್ಲೂ ಡಯಟ್ ಮಂತ್ರ. ಅದರಲ್ಲಿಯೂ ತೂಕವನ್ನು ಇಳಿಸಿಕೊಳ್ಳಲು ಗ್ರೀನ್ ಟೀ ಮೊರೆ ಹೋಗುವವರ ಸಂಖ್ಯೆಯೇ ಜಾಸ್ತಿ. ಹಾಗಾದರೆ ಈ ಆರೋಗ್ಯಕರ ಗ್ರೀನ್ ಟೀಯನ್ನು ಮನೆಯಲ್ಲಿಯೇ ತಯಾರಿಸಬಹುದು. ಹಾಗಾದರೆ ಗ್ರೀನ್ ಟೀಯನ್ನು ಹೇಗೆ ತಯಾರಿಸುವುದು ಎಂದು ಹೇಳ್ತೀವಿ. ನೀವೂ ಒಮ್ಮೆ ಟ್ರೈ ಮಾಡಿ ನೋಡಿ. 
ತಯಾರಿಸಲು ಬೇಕಾಗುವ ಸಾಮಗ್ರಿಗಳು :
 
* 1 ಗ್ಲಾಸ್ ನೀರು
* 10 ರಿಂದ 11 ತುಳಸಿ ಎಲೆ
* ನಿಂಬೆ ಹುಲ್ಲು (ಚಹ ಗರಿ) 2 ಎಲೆ
* ಏಲಕ್ಕಿ 2
* ಲವಂಗ 2
* ಹಸಿ ಶುಂಠಿ 1 ತುಂಡು
* 1 ಚಮಚ ಸಕ್ಕರೆ
 
ತಯಾರಿಸುವ ವಿಧಾನ :
 
 ಮೊದಲು ಒಂದು ಗ್ಲಾಸ್ ನೀರನ್ನು ಕುದಿಯಲು ಇಡಬೇಕು. ಅದು ಚೆನ್ನಾಗಿ ಕುದಿ ಬಂದ ಮೇಲೆ ಅದಕ್ಕೆ ಹಸಿ ಶುಂಠಿ, ಏಲಕ್ಕಿ, ಲವಂಗ, ನಿಂಬೆ ಹುಲ್ಲು ಮತ್ತು ತುಳಸಿ ಎಲೆಯನ್ನು ಹಾಕಿ ಚೆನ್ನಾಗಿ 2 ನಿಮಿಷ ಕುದಿಸಬೇಕು. ನಂತರ ಈ ಮಿಶ್ರಣಕ್ಕೆ ಸಕ್ಕರೆ ಹಾಕಿ 1 ನಿಮಿಷ ಕುದಿಸಿ ಸೋಸಿ ತೆಗೆದರೆ ಆರೋಗ್ಯಕರ ಗ್ರೀನ್ ಟೀ ರೆಡಿ.

Share this Story:

Follow Webdunia kannada

ಮುಂದಿನ ಸುದ್ದಿ

ರವಾ ಉತ್ತಪ್ಪ