Select Your Language

Notifications

webdunia
webdunia
webdunia
webdunia

ಸುವಾಸನೆ, ರುಚಿಯನ್ನು ಹೆಚ್ಚಿಸಲು ಶುಂಠಿ ಬಳಕೆ

ಸುವಾಸನೆ, ರುಚಿಯನ್ನು ಹೆಚ್ಚಿಸಲು ಶುಂಠಿ ಬಳಕೆ

ಅತಿಥಾ

ಬೆಂಗಳೂರು , ಗುರುವಾರ, 25 ಜನವರಿ 2018 (13:12 IST)
ಆಹಾರದಲ್ಲಿ ಶುಂಠಿ ಬಳಸುವುದರಿಂದ ಅದರ ಸುವಾಸನೆ ಮತ್ತು ರುಚಿಯನ್ನು ಹೆಚ್ಚಿಸುವುದಷ್ಟೇ ಅಲ್ಲ, ಆರೋಗ್ಯ ಮತ್ತು ಸೌಂದರ್ಯದ ಮೇಲೂ ಉತ್ತಮ ಪರಿಣಾಮವನ್ನು ಬೀರುತ್ತದೆ. ಅದರಲ್ಲೂ ಚಳಿಗಾಲದಲ್ಲಂತೂ ಇದರ ಸೇವನೆಯಿಂದ ಬಹಳಷ್ಟು ಲಾಭಗಳನ್ನು ಪಡೆಯಬಹುದು
- ಶುಂಠಿ ರಸವನ್ನು ಮಜ್ಜಿಗೆಯೊಡನೆ ಸೇವಿಸುವುದರಿಂದ ಆಮಶಂಕೆ ಬೇಧಿಯು ಕಡಿಮೆಯಾಗುತ್ತೆದ
 
- ಶುಂಠಿ ಪುಡಿಯನ್ನು ನೀರಿನೊಂದಿಗೆ ಅರೆದು ಹಣೆಗೆ ಹಚ್ಚುವುದರಿಂದ ತಲೆಭಾರದೊಂದಿಗಿರುವ ತಲೆನೋವು ನಿವಾರಣೆಯಾಗುತ್ತದೆ
 
- ಒಂದು ಲೋಟ ನೀರಿಗೆ ಸ್ವಲ್ಪ ಶುಂಠಿ ಹಾಕಿ ಕುದಿಸಿ ಅದಕ್ಕೆ ,ಒಂದು ಚಮಚ ಜೇನು ತುಪ್ಪ ಹಾಕಿ ಕುಡಿಯುವುದರಿಂದ ಚಳಿಗಾಲದಲ್ಲಿ ಸಾಮಾನ್ಯವಾಗಿ ಕಂಡು ಬರುವ ಶೀತ-ನೆಗಡಿಯ ಸಮಸ್ಯೆ ಇರುವುದಿಲ್ಲ.
 
- ಊಟ ಮಾಡುವುದಕ್ಕೂ ಮುನ್ನ ಸಣ್ಣ ತುಂಡು ಶುಂಠಿಯನ್ನು ಜಗಿದು ಸೇವಿಸಿದರೆ ಹಸಿವು ಹೆಚ್ಚಾಗುವುದು.
 
- ಪ್ರಯಾಣಕ್ಕೆ ಮೊದಲು ಒಂದು ಲೋಟ ಶುಂಠಿ ಟೀ ಕುಡಿದರೆ ವಾಕರಿಕೆ ಮತ್ತು ವಾಂತಿ ತಡೆಗಟ್ಟಲು ಸಹಾಯ ಮಾಡುತ್ತದೆ
 
- ಅರ್ಧ ಚಮಚ ಶುಂಠಿ ರಸ, 1/4 ಚಮಚ ಕರಿಮೆಣಸಿನ ಪುಡಿ, ಚಿಟಿಕೆಯಷ್ಟು ಉಪ್ಪು, ಸ್ವಲ್ಪ ಜೇನು ತುಪ್ಪ ಮಿಶ್ರಣ ಮಾಡಿ ಬೆಳಗ್ಗೆ ಮತ್ತು ರಾತ್ರಿ ಮಲಗುವ ಮುಂಚೆ ಸೇವಿಸಿದರೆ ಕಫ ನಿವಾರಣೆಯಾಗುತ್ತದೆ.
 
- ಗಂಟು ನೋವು ಉಳ್ಳವರು ಕೂಡ ಸಣ್ಣ ತುಂಡು ಶುಂಠಿಯನ್ನು ಸೇವಿಸಿದರೆ ನೋವು ಕಡಿಮೆಯಾಗುವುದು.
 
- ಅಜೀರ್ಣ ಸಮಸ್ಯೆ ಉಳ್ಳವರು ಸ್ವಲ್ಪ ಹಸಿ ಶುಂಠಿಯನ್ನು ಜಗಿದು ತಿಂದರೆ ಅಜೀರ್ಣ ಮಾಯವಾಗುತ್ತದೆ.
 
- ಪರಿಸರದ ಅಲರ್ಜಿ ಸಂಬಂಧಿಸಿದ ಉಸಿರಾಟದ ತೊಂದರೆ ಉಳ್ಳವರು ಒಂದು ಕಪ್ ಶುಂಠಿ ಚಹಾ ಕುಡಿದರೆ ಸಾಕು.
 
- ಮುಟ್ಟಿನ ಸಮಸ್ಯೆಯಿಂದ ಬಳಲುತ್ತಿರುವವರು ಜೇನುತುಪ್ಪವನ್ನು ಶುಂಠಿ ಚಹಾದೊಂದಿಗೆ ಬೆರೆಸಿ ಕುಡಿಯಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಆರೋಗ್ಯದ ಸುಧಾರಣೆಗೆ ಅತ್ಯುತ್ತಮ ಎಣ್ಣೆ ತೆಂಗಿನೆಣ್ಣೆ