Select Your Language

Notifications

webdunia
webdunia
webdunia
webdunia

ಸ್ವಾದಿಷ್ಠವಾದ ಮೊಟ್ಟೆ ಬೋಂಡಾ

ಸ್ವಾದಿಷ್ಠವಾದ ಮೊಟ್ಟೆ ಬೋಂಡಾ

ಅತಿಥಾ

ಬೆಂಗಳೂರು , ಮಂಗಳವಾರ, 2 ಜನವರಿ 2018 (16:02 IST)
ಬೇಕಾಗುವ ಸಾಮಗ್ರಿ 
 
ಬೇಯಿಸಿದ ಮೊಟ್ಟೆಗಳು: ಐದು (ಮಧ್ಯಮ ಗಾತ್ರ)
ಕಡ್ಲೆಹಿಟ್ಟು: - ½ ಕಪ್ 
ಕೆಂಪು ಮೆಣಸಿನ ಪುಡಿ - 1 ಚಿಕ್ಕ ಚಮಚ
ಉಪ್ಪು
ಎಣ್ಣೆ
ಮಾಡುವ ವಿಧಾನ
- ಬೇಯಿಸಿದ  ಮೊಟ್ಟೆಗಳನ್ನು ಎರಡು ಭಾಗವಾಗಿ ಕತ್ತರಿಸಿ ಅಥವಾ ಇಡಿಯಾಗಿ ನಿಮ್ಮಿಷ್ಟದಂತೆ ಬೋಂಡಾ ಮಾಡಬಹುದು.
- ಒಂದು ಪಾತ್ರೆಯಲ್ಲಿ ಕಡ್ಲೆಹಿಟ್ಟು, ನೀರು, ಮೆಣಸಿನ ಪುಡಿ ಉಪ್ಪು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. 
- ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿಮಾಡಿ. 
- ಎಣ್ಣೆ ಕುದಿಯಲು ಪ್ರಾರಂಭವಾಗುತ್ತಲೇ ಬೇಯಿಸಿದ ಮೊಟ್ಟೆಗಳನ್ನು ಕಡ್ಲೆಹಿಟ್ಟಿನಲ್ಲಿ ಮುಳುಗಿಸಿ ಪೂರ್ಣ ಆವರಿಸುವಂತೆ ಮಾಡಿ ಎಣ್ಣೆಯಲ್ಲಿ ನಿಧಾನವಾಗಿ ಇಳಿಬಿಡಿ. 
- ಅಂಚುಗಳು ಕೊಂಚ ಕಪ್ಪಾಗತೊಡಗಿದಾಕ್ಷಣ ಎಣ್ಣೆಯಿಂದ ಹೊರತೆಗೆಯಿರಿ.
 
2. ಮೊಟ್ಟೆ ಕಟ್ಲೇಟ್
webdunia
ಬೇಕಾಗುವ ಸಾಮಗ್ರಿ
 
4 ಬೇಯಿಸಿದ ಮೊಟ್ಟೆ
ಆಲೂಗಡ್ಡೆ 250 ಗ್ರಾಂ (ಬೇಯಿಸಿ, ಹಿಸುಕಿದ್ದು)
1 ಚಮಚ ಕೆಂಪು ಮೆಣಸಿನ ಪುಡಿ
1 ಕಪ್ ಎಣ್ಣೆ
5 ರಸ್ಕ್ ಪುಡಿ
1 ಸಣ್ಣದಾಗಿ ಹೆಚ್ಚಿದ ಈರುಳ್ಳಿ
1/2 ಚಮಚ ಉಪ್ಪು
1 ಮೊಟ್ಟೆ
ಕೊತ್ತಂಬರಿ ಸೊಪ್ಪು
 
ಮಾಡುವ ವಿಧಾನ
- ಆಲೂಗಡ್ಡೆ, ಈರುಳ್ಳಿ, ಕೆಂಪು ಮೆಣಸಿನ ಪುಡಿ, ಉಪ್ಪು ಮತ್ತು ಕೊತ್ತಂಬರಿ ಸೊಪ್ಪುಗಳನ್ನು ಒಂದು ಬಟ್ಟಲಿನಲ್ಲಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ಬೇಯಿಸಿದ ಮೊಟ್ಟೆಗಳನ್ನು ಆಲೂಗಡ್ಡೆ ಮಿಶ್ರಣಕ್ಕೆ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಮಾಡಿ. ಈಗ, ಈ ಮಿಶ್ರಣವನ್ನು ಸಣ್ಣ ಉಂಡೆಗಳನ್ನಾಗಿ ಮಾಡಿ ಮತ್ತು ಅವುಗಳನ್ನು ಕಟ್ಲೇಟ್ ಆಕಾರಕ್ಕೆ ತಟ್ಟಿ. 
- ಒಂದು ಬಟ್ಟಲಿನಲ್ಲಿ ಮೊಟ್ಟೆ ಒಡೆದು ಚನ್ನಾಗಿ ಮಿಶ್ರಣ ಮಾಡಿ.
- ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿಮಾಡಿ. 
- ಎಣ್ಣೆ ಕುದಿಯಲು ಪ್ರಾರಂಭವಾಗುತ್ತಲೇ ಕಟ್ಲೇಟ್‌ಗಳನ್ನು, ಹಸಿ ಮೊಟ್ಟೆ ಮಿಶ್ರಣದಲ್ಲಿ ಮುಳುಗಿಸಿ, ರಸ್ಕ್ ಪುಡಿಯಲ್ಲಿ ಅದ್ದಿಸಿ ಪೂರ್ಣ ಆವರಿಸುವಂತೆ ಮಾಡಿ ಎಣ್ಣೆಯಲ್ಲಿ ನಿಧಾನವಾಗಿ ಇಳಿಬಿಡಿ. 
- ಅಂಚುಗಳು ಕೊಂಚ ಕಪ್ಪಾಗತೊಡಗಿದಾಕ್ಷಣ ಎಣ್ಣೆಯಿಂದ ಹೊರತೆಗೆಯಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಒಮ್ಮೆ ಟೊಮೆಟೋ ಆಮ್ಲೆಟ್ ಮಾಡಿ ಸವಿಯಿರಿ..!!