Select Your Language

Notifications

webdunia
webdunia
webdunia
webdunia

ಕಾಲಾ ನಮಕ್ ಪ್ರಯೋಜನ ನಿಮಗೆ ಗೊತ್ತೇ?

ಕಾಲಾ ನಮಕ್ ಪ್ರಯೋಜನ ನಿಮಗೆ ಗೊತ್ತೇ?

ಅತಿಥಾ

ಬೆಂಗಳೂರು , ಬುಧವಾರ, 20 ಡಿಸೆಂಬರ್ 2017 (18:14 IST)
ಸೈಂಧವ ಲವಣ ಒಂದು ಕರೆಯಲ್ಪಡುವ ಈ ಉಪ್ಪನ್ನು 'ಕಾಲಾ ನಮಕ್' ಎಂತಲೂ ಕರೆಯುತ್ತಾರೆ. ಈ ಉಪ್ಪು ಕಟುವಾದ ವಾಸನೆಯಿಂದ ಕೂಡಿರುವ ಪದಾರ್ಥವಾಗಿದೆ.

ಭಾರತ, ಪಾಕಿಸ್ತಾನ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಇದರ ಪ್ರಯೋಜನಗಳನ್ನು ತಿಳಿದಿರುವವರು ಇದನ್ನು ವ್ಯಾಪಕವಾಗಿ ಬಳಸುತ್ತಾರೆ. ಇದರ ಬಣ್ಣವು ಸಣ್ಣ ಪ್ರಮಾಣದ ಕಬ್ಬಿಣ ಮತ್ತು ಇತರ ಖನಿಜಗಳ ಉಪಸ್ಥಿತಿಯಿಂದ ಕೂಡಿದ್ದು ಸ್ವಲ್ಪ ಕಪ್ಪಾಗಿರುತ್ತದೆ.
ಕಪ್ಪು ಉಪ್ಪುನ್ನು ಆಯುರ್ವೇದದಲ್ಲಿ ದೇಹವನ್ನು ತಂಪಾಗಿಸುವ ಪಧಾರ್ಥ ಎಂದು ಹೇಳಲಾಗಿದೆ ಮತ್ತು ಇದನ್ನು ಜೀರ್ಣಕ್ರಿಯೆಗಾಗಿ ಬಳಸಲಾಗುತ್ತದೆ. ಇದು ವಾಯು ಮತ್ತು ಎದೆಯುರಿ ನಿವಾರಣೆಯಲ್ಲಿ ಇದು ತುಂಬಾ ಉಪಯೋಗಕಾರಿ. ಗಳಗಂಡ ರೋಗವನ್ನು ಗುಣಪಡಿಸಲು ಜಮ್ಮುವಿನಲ್ಲಿ ಇದನ್ನು ಬಳಸಲಾಗುತ್ತದೆ.ದಂತಮಂಜನವನ್ನು ತಯಾರಿಸಲು ಸಹ ಇದನ್ನು ಬಳಸಲಾಗುತ್ತದೆ
 
ಕಪ್ಪು ಉಪ್ಪಿನ ಆರೋಗ್ಯಕರ ಪ್ರಯೋಜನಗಳು..
 
1. ಮಲಬದ್ಧತೆ ಮತ್ತು ಹೊಟ್ಟೆ ಉಬ್ಬರವನ್ನು ಶಮನಗೊಳಿಸುತ್ತದೆ.ಕಪ್ಪು ಉಪ್ಪನ್ನು ಪ್ರಮುಖವಾಗಿ ಮಲಬದ್ಧತೆ, ಹೊಟ್ಟೆ ನೋವು, ಮತ್ತು ಅನೇಕ ಉದರ ಸಂಬಂಧಿತ ಕಾಯಿಲೆಗಳನ್ನು ನಿವಾರಿಸುವ ಸಾಮರ್ಥ್ಯವನ್ನು ಹೊಂದಿರುವುದರ ಜೊತೆಗೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
 
2. ಉಸಿರಾಟದ ತೊಂದರೆ ನಿವಾರಣೆ..
ಕಟ್ಟಿರುವ ಮೂಗು ಮತ್ತು ನೋಯುತ್ತಿರುವ ಗಂಟಲ ಕಾರಣದಿಂದಾಗಿ ಉಸಿರಾಟದ ತೊಂದರೆಗಳನ್ನು ಎದುರಿಸುತ್ತಿದ್ದಲ್ಲಿ ಇದು ನಿವಾರಕವಾಗಿ ಕೆಲಸ ಮಾಡುತ್ತದೆ.
 
3. ವಾಯು ಸಂಬಂಧಿತ ರೋಗಗಳನ್ನು ನಿವಾರಿಸುತ್ತದೆ
ಇದು ದೇಹದ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವ ಮೂಲಕ ವಾಯು ಸಂಬಂಧಿತ ರೋಗಗಳನ್ನು ನಿವಾರಿಸುವ ಶಕ್ತಿಯನ್ನು ಹೊಂದಿದೆ.
 
4. ಮಧುಮೇಹವನ್ನು ನಿಯಂತ್ರಿಸುತ್ತದೆ
ಸಕ್ಕರೆ ಕಾಯಿಲೆಯನ್ನು ಹೊಂದಿರುವವರಿಗೆ ಇನ್ಸುಲಿನ್ ಪ್ರಮಾಣ ಕಡಿಮೆ ಇರುವ ಕಾರಣ ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ ಕಲ್ಲು ಉಪ್ಪು ದೇಹದಲ್ಲಿರುವ ಸಕ್ಕರೆ ಅಂಶವನ್ನು ನಿಯಂತ್ರಿಸುವುದರಿಂದ ಮಧುಮೇಹಿಗಳಿಗೆ ಇದು ಪ್ರಯೋಜನಕಾರಿಯಾಗಿದೆ.
 
5. ಸ್ನಾಯು ಸೆಳೆತ ಮತ್ತು ನೋವನ್ನು ಶಮನಗೊಳಿಸುತ್ತದೆ
ಸ್ನಾಯು ಸೆಳೆತ ಮತ್ತು ನೋವನ್ನು ನಿವಾರಿಸಲು ಕಪ್ಪು ಉಪ್ಪು ಸಹಾಯಕಾರಿಯಾಗಿದೆ. ಇದು ಪೊಟ್ಯಾಷಿಯಮ್ ಅನ್ನು ಒಳಗೊಂಡಿರುವ ಕಾರಣದಿಂದಾಗಿ,  ಸ್ನಾಯುಗಳನ್ನು ಸದೃಢವಾಗಿಸಿ ನೋವನ್ನು ಕಡಿಮೆ ಮಾಡುತ್ತದೆ. ಸ್ವಲ್ಪ ಕಪ್ಪು ಉಪ್ಪನ್ನು ಬಾಣಲೆಯಲ್ಲಿ ಹಾಕಿ ಹುರಿದು ಒಂದು ಹತ್ತಿ ಬಟ್ಟೆಯಿಂದ ಕಟ್ಟಿ ಶಾಖ ನೀಡುವ ಮೂಲಕ ಸಹ ನೋವನ್ನು ಕಡಿಮೆ ಮಾಡಬಹುದಾಗಿದೆ.
 
6. ಚರ್ಮದ ಮತ್ತು ಪಾದದ ಆರೋಗ್ಯಕ್ಕೆ ಸಹಾಯಕಾರಿ.
ಇದು ಬಿರುಕು ಬಿಟ್ಟಿರುವ ಪಾದ ಮತ್ತು ಊದಿಕೊಂಡಿರುವ ಪಾದ, ಹಾಗೂ ಮೊಡವೆಗಳ ನಿವಾರಣೆಗೆ ಇದು ಸಹಾಯಕಾರಿಯಾಗಿದೆ ಸ್ನಾನದ ನೀರಿಗೆ ಸ್ವಲ್ಪ ಉಪ್ಪನ್ನು ಹಾಕಿ ಸ್ನಾನ ಮಾಡುವ ಮೂಲಕ ಚರ್ಮದ ಕಾಯಿಲೆಗಳಿಂದ ಮುಕ್ತಿಹೊಂದಬಹುದು.
 
7.ಕ್ಲೆನ್ಸರ್ ಆಗಿ ಕಾರ್ಯನಿರ್ವಹಿಸುತ್ತದೆ
ನಿಮ್ಮ ಚರ್ಮವನ್ನು ಕಾಂತಿಯುತವನ್ನಾಗಿಸಲು ನಿಮ್ಮ ಕ್ಲೆನ್ಸರ್ ಅಥವಾ ಸ್ಕ್ರಬ್‌ಗೆ ಸ್ವಲ್ಪ ಪ್ರಮಾಣದಲ್ಲಿ ಈ ಉಪ್ಪನ್ನು ಸೇರಿಸಿ ಬಳಸುವುದರಿಂದ ಮುಚ್ಚಿಕೊಂಡಿರುವ ಚರ್ಮದ ರಂಧ್ರಗಳು ಮತ್ತು ಮೊಡವೆಗಳು ಹಾಗೂ ಎಣ್ಣೆಯುಕ್ತ ಚರ್ಮದಿಂದ ಮುಕ್ತಿಹೊಂದಬಹುದು.
 
8. ಕೂದಲು ಉದುರುವಿಕೆಯನ್ನು ನಿಲ್ಲಿಸುತ್ತದೆ
ನೀವು ಕೂದಲು ಉದುರುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಉಪ್ಪು ನಿಮಗೆ ಸಹಾಯಕಾರಿಯಾಗುತ್ತದೆ. ನಿಮ್ಮ ಸ್ನಾನದ ನೀರಿಗೆ ಉಪ್ಪನ್ನು ಹಾರಿ ತಲೆ ಸ್ನಾನ ಮಾಡುವುದರಿಂದ ನಿಮ್ಮ ಕುದಲಿನ ಬೆಳವಣಿಗೆಯನ್ನು ಹೆಚ್ಚುಸುವುದಷ್ಟೇ ಅಲ್ಲ ತಲೆಹೊಟ್ಟಿನ ಸಮಸ್ಯೆಯನ್ನು ನಿವಾರಿಸುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕೊಲ್ಲಾಪುರಿ ಚಿಕನ್ ಮಸಾಲಾ