Webdunia - Bharat's app for daily news and videos

Install App

ನಾಟಿ ಕೋಳಿ ಚಿಕನ್ ಸ್ಪೆಷಲ್

Webdunia
ಸೋಮವಾರ, 8 ಅಕ್ಟೋಬರ್ 2018 (14:21 IST)
ಬೇಕಾಗುವ ಸಾಮಾಗ್ರಿಗಳು 
ನಾಟಿ ಚಿಕನ್ – 1 ಕೆಜಿ
ಈರುಳ್ಳಿ – 1 ದೊಡ್ಡದು
ಕೊತ್ತಂಬರಿ + ಪುದೀನಾ – 1 ಕಪ್
ಹಸಿಮೆಣಸಿಕಾಯಿ – ರುಚಿಗೆ ತಕ್ಕಷ್ಟು
ಚಕ್ಕೆ – ಚಿಕ್ಕದು
ಪಲಾವ್ ಎಲೆ – 1 ದೊಡ್ಡದು
ಏಲಕ್ಕಿ – 1-2
ಶುಂಠಿ, ಬೆಳ್ಳುಳ್ಳಿ – ಪೇಸ್ಟ್ ಒಂದೂವರೆ ಚಮಚ
ಮೊಸರು – 1 ಕಪ್
ಕಸುರಿ ಮೇತಿ – ಚಿಟಿಕೆ
ಗರಂ ಮಸಾಲ – 1 ಚಮಚ
ಕೆಂಪು ಮೆಣಸಿನಕಾಯಿ ಪುಡಿ (ಚಿಲ್ಲಿ ಪೌಡರ್) – 1 ಚಮಚ (ರುಚಿಗೆ ತಕ್ಕಷ್ಟು)
ಜೀರಿಗೆ ಪುಡಿ – 1 ಚಮಚ
ದನಿಯಾಪುಡಿ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ತುಪ್ಪ – 5-6 ಚಮಚ
 
ಮಾಡುವ ವಿಧಾನ
 
ಮೊದಲಿಗೆ ತೊಳೆದ ಕೊತ್ತಂಬರಿ, ಪುದೀನಾ ಮತ್ತು ಹಸಿಮೆಣಸಿಕಾಯಿಯನ್ನು ಮಿಕ್ಸಿ ಜಾರ್‌ಗೆ ಹಾಕಿ ನುಣ್ಣಗೆ ಪೇಸ್ಟ್ ಮಾಡಿಟ್ಟಿಕೊಳ್ಳಿ. ನಂತರ ಒಂದು ಬಾಣಲೆಯನ್ನು ತೆಗೆದುಕೊಂಡು5 ರಿಂದ 6 ಚಮಚ ತುಪ್ಪವನ್ನು ಹಾಕಿ ಅದು ಬಿಸಿಯಾದ ಮೇಲೆ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಫ್ರೈ ಮಾಡಿ. ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಚಕ್ಕೆ, ಏಲಕ್ಕಿ, ಪಲಾವ್ ಎಲೆಯನ್ನು ಹಾಕಿ ಹಸಿ ವಾಸನೆ ಹೋಗೋ ತನಕ ಫ್ರೈ ಮಾಡಿ. ಈ ಮಿಶ್ರಣಕ್ಕೆ ಚೆನ್ನಾಗಿ ತೊಳೆದ ಚಿಕನ್, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಬೇಯುವ ತನಕ ಮುಚ್ಚಲ ಮುಚ್ಚಿ ಬೇಯಿಸಿ. ಅದಕ್ಕೆ ನೀರನ್ನು ಹಾಕಬೇಡಿ ಹಾಗೆಯೇ ಬೇಯಿಸಿ ನಂತರ ಅದಕ್ಕೆ ಗಟ್ಟಿ ಮೊಸರು, ಕಸೂರಿ ಮೇತಿ, ರುಬ್ಬಿದ ಕೊತ್ತಂಬರಿ, ಪುದೀನಾ, ಮೆಣಸಿನಕಾಯಿ ಮಿಶ್ರಣ ಸೇರಿಸಿ, ನೀರು ಸೇರಿಸಿ 2 ನಿಮಿಷ ಬೇಯಿಸಿ ನಂತರ ಅದಕ್ಕೆ ಗರಂ ಮಸಾಲ, ಚಿಲ್ಲಿ ಪೌಡರ್, ದನಿಯಾಪುಡಿ, ಜೀರಾ ಪುಡಿ ಅನ್ನು ಹಾಕಿ ಬೇಕಿದ್ದರೆ ನೀರನ್ನು ಸೇರಿಸಿ ಚೆನ್ನಾಗಿ ಬೇಯಿಸಿ ನಂತರ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ. ಒಮ್ಮೆ ತಿರುಗಿಸಿ. ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಮೇಲೆ ಉದುರಿಸಿದರೆ ನಾಟಿ ಕೋಳಿ ಚಿಕನ್ ಸ್ಪೆಷಲ್ ರೆಡಿ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments