ಬೆಂಗಳೂರು: ಇದೇನಿದು ಸೊಕ್ಕಿನ ಉಂಡೆ ಎಂದುಕೊಳ್ಳಬೇಡಿ. ಇದು ಕರಾವಳಿ ಸ್ಪೆಷಲ್. ಅರಳು ಹುಡಿಯಿಂದ ಮಾಡುವ ಸಿಹಿ ತಿನಿಸು. ಮಾಡುವ ವಿಧಾನ ನೋಡಿಕೊಳ್ಳಿ.
ಬೇಕಾಗುವ ಸಾಮಗ್ರಿಗಳು
ಅರಳಿನ ಹುಡಿ
ಬೆಲ್ಲ
ಕಾಯಿ ತುರಿ
ಎಳ್ಳು
ಮೈದಾ ಹಿಟ್ಟು
ಅಕ್ಕಿ ಹಿಟ್ಟು
ಅರಸಿನ ಹುಡಿ
ಕರಿಯಲು ಎಣ್ಣೆ
ಮಾಡುವ ವಿಧಾನ
ಎಳ್ಳು ಹುರಿದಿಟ್ಟುಕೊಳ್ಳಿ. ಬೆಲ್ಲದ ಪಾಕ ಮಾಡಿಕೊಳ್ಳಿ. ಅರಳು ಹುಡಿಯನ್ನು ಹಾಕಿ, ಇದು ತಣ್ಣಗಾದ ಮೇಲೆ ಉಂಡೆ ಕಟ್ಟಿಕೊಳ್ಳಿ. ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಅರಸಿನ ಹುಡಿ ಹಾಕಿ ತೆಳುವಾದ ದೋಸೆ ಹಿಟ್ಟಿನಂತಹ ಹಿಟ್ಟು ಮಾಡಿಕೊಳ್ಳಿ. ಇದಕ್ಕೆ ಉಂಡೆಯನ್ನು ಅದ್ದಿ, ಎಣ್ಣೆಯಲ್ಲಿ ಕರಿದು ತೆಗೆದರೆ ಸುಕ್ಕಿನ ಉಂಡೆ ರೆಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ