Publish Date: Sat, 31 Dec 2016 (08:07 IST)
Updated Date: Sat, 31 Dec 2016 (08:11 IST)
ಬೆಂಗಳೂರು: ಸುಲಭ ಮತ್ತು ಕಡಿಮೆ ಸಾಮಾನು ಬಳಸಿ ಸಿಹಿ ತಿನಿಸು ಮಾಡಬೇಕಾದರೆ ಅಮೃತಫಲ ಮಾಡಬಹುದು. ನೋಡುವಾಗ ಥೇಟ್ ಮೈಸೂರು ಪಾಕ್ ನಂತೇ ಇರುತ್ತದೆ. ಹೇಗೆ ಮಾಡುವುದೆಂದು ನೋಡಿಕೊಳ್ಳಿ.
ಬೇಕಾಗುವ ಸಾಮಗ್ರಿಗಳು
ಹಾಲು
ತೆಂಗಿನ ಹಾಲು
ಸಕ್ಕರೆ
ಏಲಕ್ಕಿ ಪುಡಿ
ತುಪ್ಪ
ಮಾಡುವ ವಿಧಾನ
ಹಾಲು ಮತ್ತು ತೆಂಗಿನ ಕಾಯಿ ಹಾಲು ಹಾಗೂ ಸಕ್ಕರೆ ಸೇರಿಸಿ ಬಾಣಲೆಯಲ್ಲಿ ಚೆನ್ನಾಗಿ ತಿರುವಿ. ಇದು ತಳ ಬಿಟ್ಟು ಬರುವಷ್ಟು ಗಟ್ಟಿಯಾಗುವವರೆಗೂ ತಿರುವಿ. ನಂತರ ಏಲಕ್ಕಿ ಪುಡಿ, ತುಪ್ಪ ಹಾಕಿದ ತಟ್ಟೆಯಲ್ಲಿ ಸುರುವಿಕೊಂಡು ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ