Select Your Language

Notifications

webdunia
webdunia
webdunia
webdunia

ಹಲಸಿನ ಬೀಜ ಬಳಸಿ ರುಚಿಯಾದ ಪಲ್ಯ ಮಾಡಿ

ಹಲಸಿನ ಬೀಜ ಬಳಸಿ ರುಚಿಯಾದ ಪಲ್ಯ ಮಾಡಿ
Bangalore , ಸೋಮವಾರ, 30 ಜನವರಿ 2017 (12:01 IST)
ಬೆಂಗಳೂರು:  ಹಲಸಿನ ಕಾಯಿಯಲ್ಲಿ ಉಪಯೋಗಕ್ಕೆ ಬರದ ಭಾಗವೇನಿದೆ? ಎಲ್ಲವೂ ಒಂದಕ್ಕೊಂದು ರುಚಿಕರ ಖಾದ್ಯ ಮಾಡಬಹುದಾದ ವಸ್ತುಗಳೇ. ಅದರ ಬೀಜದ ಪಲ್ಯವಂತೂ ವಿಶೇಷ ಘಮ ಕೊಡುತ್ತದೆ. ಮಾಡುವ ವಿಧಾನ ಇಲ್ಲಿದೆ ನೋಡಿ.

ಬೇಕಾಗುವ ಸಾಮಗ್ರಿಗಳು

ಹಲಸಿನ ಬೀಜ
ಮಂಗಳೂರು ಸೌತೆ
ಖಾರದ ಪುಡಿ
ಅರಸಿನ ಪುಡಿ
ಬೆಲ್ಲ
ಉಪ್ಪು
ಒಗ್ಗರಣೆ ಸಾಮಾನು

ಮಾಡುವ ವಿಧಾನ

ಹಲಸಿನ ಬೀಜವನ್ನು ಜಜ್ಜಿ ಸಿಪ್ಪೆ ತೆಗೆದುಕೊಳ್ಳಿ. ಮಂಗಳೂರು ಸೌತೆಯನ್ನು ತೆಳುವಾಗಿ ಕತ್ತರಿಸಿಕೊಳ್ಳಿ. ಇವೆರಡನ್ನೂ ಖಾರದಪುಡಿ, ಅರಸಿನ ಪುಡಿ, ಬೆಲ್ಲ ಸ್ವಲ್ಪ ಹಾಕಿ ಬೇಯಿಸಿಕೊಳ್ಳಿ. ಬೆಂದ ಮೇಲೆ ರುಚಿಗೆ ತಕ್ಕಷ್ಟು ಉಪ್ಪು, ಒಗ್ಗರಣೆ ಕೊಟ್ಟರೆ ಪಲ್ಯ ರೆಡಿ. ಮಂಗಳೂರು ಸೌತೆ ಹಲಸಿನ ಬೀಜಕ್ಕೆ ಒಳ್ಳೆ ಕಾಂಬಿನೇಷನ್. ಪಲ್ಯವನ್ನು ಸ್ವಲ್ಪ ನೀರು ನೀರಾಗಿ ಮಾಡಿಕೊಂಡರೆ ಚಪಾತಿಯಂತಹ ವ್ಯಂಜನದ ಜತೆಗೂ ಸೇವಿಸಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೀಲು ನೋವು ಕಾಡುತ್ತಿದೆಯೇ? ಈ ಸರಳ ಉಪಾಯ ಮಾಡಿ ನೋಡಿ