Webdunia - Bharat's app for daily news and videos

Install App

ಸ್ವಾದಿಷ್ಠವಾದ ಪ್ಯಾನ್ ಕೇಕ್

Webdunia
ಗುರುವಾರ, 4 ಅಕ್ಟೋಬರ್ 2018 (13:40 IST)
1. ಬಾಳೆ ಹಣ್ಣಿನ ಪ್ಯಾನ್ ಕೇಕ್
ಬೇಕಾಗುವ ಸಾಮಗ್ರಿಗಳು
 
1/2 ಕಪ್ ಮೈದಾ ಹಿಟ್ಟು
3 ಚಮಚ ಬೇಕಿಂಗ್ ಪುಡಿ
2 ಚಮಚ ಸಕ್ಕರೆ
ಉಪ್ಪು
3/4 ಕಪ್ ಹಾಲು
2 ಮೊಟ್ಟೆ
1 ಬಾಳೆಹಣ್ಣು
ಬೆಣ್ಣೆ
1 ಚಮಚ ಜೇನು ತುಪ್ಪ
 
ಮಾಡುವ ವಿಧಾನ
* ಮೊಟ್ಟೆಯನ್ನು ಒಡೆದು ಪಾತ್ರೆಗೆ ಹಾಕಿ ಚೆನ್ನಾಗಿ ಕಲಕಿ ಅದಕ್ಕೆ ಮೈದಾ ಹಿಟ್ಟು ಹಾಗೂ ಇತರ ಸಾಮಗ್ರಿಗಳನ್ನು ಇದಕ್ಕೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
 
* ನಾನ್ ಸ್ಟಿಕ್ ಫ್ರೈಯಿಂಗ್ ಪ್ಯಾನ್ ಗೆ 1 ಚಮಚ ಬೆಣ್ಣೆ ಹಾಕಿ ಹರಡಿಕೊಳ್ಳಿ. ಒಂದು ಸೌಟು ಹಿಟ್ಟು ಹರಡಿ ದೋಸೆ ತರಹ ಎರಡೂ ಬದಿ ಬೇಯಿಸಿ.
 
* ಒಂದು ಪ್ಸೇಟ್‌ನಲ್ಲಿ 2 ಪ್ಯಾನ್ ಕೇಕ್ ಇಟ್ಟು ಅದರ ಮೇಲೆ ಕತ್ತರಿಸಿದ ಬಾಳೆ ಹಣ್ಣನ್ನು ಇಟ್ಟು ಸ್ವಲ್ಪ ಜೇನುತುಪ್ಪವನ್ನು ಮೇಲಿಂದ ಸುರಿದು ಸೇವಿಸಿ.
 
2. ಚಾಕಲೇಟ್ ಪ್ಯಾನ್ ಕೇಕ್
ಬೇಕಾಗುವ ಸಾಮಗ್ರಿಗಳು
 
1 ಕಪ್ ಗೋಧಿ ಹಿಟ್ಟು
1 ಚಮಚ ಬೇಕಿಂಗ್ ಪುಡಿ
ಚಿಟಿಕೆ ಅಡುಗೆ ಸೋಡಾ
3 ಚಮಚ ಜೇನುತುಪ್ಪ
ಚಾಕೋ ಪುಡಿ - 3-4 ಚಮಚ
ಉಪ್ಪು
ಮೊಟ್ಟೆಗಳು - 2
2 ಚಮಚ ಬೆಣ್ಣೆ
2-3 ಚಮಚ ಚಾಕಲೇಟ್ ಚಿಪ್ (ಐಚ್ಛಿಕ)
 
ಮಾಡುವ ವಿಧಾನ
* ಮೊಟ್ಟೆಯನ್ನು ಒಡೆದು ಪಾತ್ರೆಗೆ ಹಾಕಿ ಚೆನ್ನಾಗಿ ಕಲಕಿ ಅದಕ್ಕೆ ಗೋಧಿ ಹಿಟ್ಟು, ಬೇಕಿಂಗ್ ಪುಡಿ, ಅಡುಗೆ ಸೋಡಾ, ಜೇನುತುಪ್ಪ, ಚಾಕೋ ಪುಡಿ ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
 
* ನಾನ್ ಸ್ಟಿಕ್ ಫ್ರೈಯಿಂಗ್ ಪ್ಯಾನ್ ಗೆ 1 ಚಮಚ ಬೆಣ್ಣೆ ಹಾಕಿ ಹರಡಿಕೊಳ್ಳಿ. ಒಂದು ಸೌಟು ಹಿಟ್ಟು ಹರಡಿ ದೋಸೆ ತರಹ ಎರಡೂ ಬದಿ ಬೇಯಿಸಿ.
 
* ಒಂದು ಪ್ಸೇಟ್‌ನಲ್ಲಿ 2 ಪ್ಯಾನ್ ಕೇಕ್ ಇಟ್ಟು ಅದರ ಮೇಲೆ ಚಾಕಲೇಟ್ ಚಿಪ್ ಹಾಕಿ ಸ್ವಲ್ಪ ಜೇನುತುಪ್ಪವನ್ನು ಮೇಲಿಂದ ಸುರಿದು ಬಿಸಿಬಿಸಿಯಾಗಿ ಸೇವಿಸಿ.
 
3. ಓರಿಯೊ ಪ್ಯಾನ್ ಕೇಕ್
1/2 ಕಪ್ ಹಾಲು
1/4 ಕಪ್ ಮೈದಾ ಹಿಟ್ಟು
1/4 ಕಪ್ ಗೋಧಿ ಹಿಟ್ಟು
1 1/2 ಚಮಚ ಬೇಕಿಂಗ್ ಪುಡಿ
2 ಚಮಚ ಚಾಕೋ ಪುಡಿ
ಉಪ್ಪು
1 ಚಮಚ ಸಕ್ಕರೆ
10 ಪುಡಿ ಮಾಡಿದ ಓರಿಯೊ ಬಿಸ್ಕಿಟ್
ಬೆಣ್ಣೆ
 
ಮಾಡುವ ವಿಧಾನ
* ಪಾತ್ರೆಗೆ ಗೋಧಿ ಹಿಟ್ಟು, ಬೇಕಿಂಗ್ ಪುಡಿ, ಅಡುಗೆ ಸೋಡಾ, ಮೈದಾ ಹಿಟ್ಟು, ಚಾಕೋ ಪುಡಿ, ಹಾಲು, ಸಕ್ಕರೆ, ಪುಡಿ ಮಾಡಿದ ಓರಿಯೊ ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
 
* ನಾನ್ ಸ್ಟಿಕ್ ಫ್ರೈಯಿಂಗ್ ಪ್ಯಾನ್ ಗೆ 1 ಚಮಚ ಬೆಣ್ಣೆ ಹಾಕಿ ಹರಡಿಕೊಳ್ಳಿ. ಒಂದು ಸೌಟು ಹಿಟ್ಟು ಹರಡಿ ದೋಸೆ ತರಹ ಎರಡೂ ಬದಿ ಬೇಯಿಸಿ ಬಿಸಿಬಿಸಿಯಾಗಿ ಸೇವಿಸಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Health Tips: ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿ, ಪವರ್‌ಫುಲ್ ಚೇಂಜಸ್‌ ಕಂಡುಕೊಳ್ಳಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

ಮುಂದಿನ ಸುದ್ದಿ
Show comments