ಬೆಂಗಳೂರು: ಸೊಪ್ಪು ತರಕಾರಿಗಳು ನಮ್ಮ ಆರೋಗ್ಯಕ್ಕೆ ಉತ್ತಮವಾದುದು. ಆದರೆ ಮಕ್ಕಳಿಗೆ ಸೊಪ್ಪು ತರಕಾರಿಗಳ ಪಲ್ಯ, ಸಾಂಬಾರ್ ಮಾಡಿದರೆ ಇಷ್ಟವಾಗದು. ಹೀಗಾಗಿಯೇ, ಅವರಿಗಿಷ್ಟವಾದ ಎಣ್ಣೆ ತಿಂಡಿ ಮಾಡಬಹುದು. ಬಸಳೆ ಸೊಪ್ಪಿನ ಬೋಂಡ ಮಾಡುವುದು ಹೇಗೆಂದು ತಿಳಿದುಕೊಳ್ಳೋಣ.
ಬೇಕಾಗುವ ಸಾಮಗ್ರಿಗಳು
ಬಸಳೆ ಸೊಪ್ಪು
ಕಡಲೆ ಹಿಟ್ಟು
ಜೀರಿಗೆ
ಅಕ್ಕಿ ಹಿಟ್ಟು
ಉಪ್ಪು
ಹಸಿ ಮೆಣಸಿನಕಾಯಿ
ಕರಿಯಲು ಎಣ್ಣೆ
ಮಾಡುವ ವಿಧಾನ
ಬಸಳೆ ಸೊಪ್ಪನ್ನು, ಹಸಿಮೆಣಸನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ. ಇದಕ್ಕೆ ಸ್ವಲ್ಪ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಇಂಗು, ಜೀರಿಗೆ, ಉಪ್ಪು ಹಾಕಿ ನೀರು ಹಾಕದೆ ಕಲಸಿಕೊಳ್ಳಿ. ಬೇಕಿದ್ದರೆ ಮಾತ್ರ ಸ್ವಲ್ಪ ನೀರು ಹಾಕಿಕೊಂಡರೆ ಸಾಕು. ಸ್ವಲ್ಪ ಹೊತ್ತು ಬಿಟ್ಟು, ಕಾದ ಎಣ್ಣೆಯಲ್ಲಿ ಬೋಂಡ ಆಕಾರಕ್ಕೆ ಉಂಡೆ ಮಾಡಿಕೊಂಡು ಕರಿದರೆ ಬಸಳೆ ಸೊಪ್ಪಿನ ಬೋಂಡ ಸಿದ್ಧ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ