Webdunia - Bharat's app for daily news and videos

Install App

ಗೋಧಿ ಮಣ್ಣಿ (ಹಾಲುಬಾಯಿ)

Webdunia
ಶುಕ್ರವಾರ, 28 ಸೆಪ್ಟಂಬರ್ 2018 (15:15 IST)
ಬೇಕಾಗುವ ಸಾಮಗ್ರಿಗಳು
 
8 ಗಂಟೆ ನೆನೆಸಿದ ಗೋಧಿ - 1 ಕಪ್
1 1/2 ಕಪ್ ತೆಂಗಿನ ಹಾಲು
1/4 ಚಮಚ ಉಪ್ಪು
3 ಚಮಚ ಅಕ್ಕಿ ಹಿಟ್ಟು
ಬೆಲ್ಲ - 3/4 ಕಪ್
2 ಚಮಚ ತುಪ್ಪ
 
ಮಾಡುವ ವಿಧಾನ
* ನೆನೆಸಿದ ಗೋಧಿಯನ್ನು ಮಿಕ್ಸಿಯಲ್ಲಿ ಬೇಕಾದಷ್ಟು ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
* ರುಬ್ಬಿದ ಮಿಶ್ರಣವನ್ನು ಜರಡಿಗೆ ಹಾಕಿ ಗಾಳಿಸಿ, ಜರಡಿ ಮಾಡಿ ತೆಗೆದ ಗೋಧಿ ಹಾಲನ್ನು ಬಳಸಬೇಕು, ಜರಡಿಯಲ್ಲಿರುವ ಗೋಧಿಯನ್ನು ಬಳಸಬಾರದು.
* ಇದಕ್ಕೆ 2 ಕಪ್ ನೀರು, ಉಪ್ಪು ಹಾಗೂ ತೆಂಗಿನ ಹಾಲನ್ನು ಸೇರಿಸಿ, ಉಪ್ಪು ಹಾಕಿ ಮಿಶ್ರಣ ಮಾಡಿ.
* ಒಂದು ಸಣ್ಣ ಬಟ್ಟಲಲ್ಲಿ ಅಕ್ಕಿ ಹಿಟ್ಟಿಗೆ 1/2 ಕಪ್ ನೀರು ಸೇರಿಸಿ, ಗಂಟು ಬರದಂತೆ ಚೆನ್ನಾಗಿ ಮಿಶ್ರಣ ಮಾಡಿ, ಅದನ್ನು ಗೋಧಿ ಮಿಶ್ರಣಕ್ಕೆ ಸೇರಿಸಿ.
* ಒಂದು ಬಾಣಲೆಯಲ್ಲಿ ಬೆಲ್ಲ ಹಾಕಿ 1/4 ಕಪ್ ನೀರು ಹಾಕಿ ಕರಗಿಸಿ.
* ಬೆಲ್ಲದ ಪಾಕವನ್ನು ಗೋಧಿ ಮಿಶ್ರಣಕ್ಕೆ ಹಾಕಿ, ಚೆನ್ನಾಗಿ ಮಿಶ್ರಣ ಮಾಡಿ.
* ಈಗ ಇದನ್ನು ಒಲೆಯ ಮೇಲೆ ಕಡಿಮೆ ಉರಿಯಲ್ಲಿ ಇರಿಸಿ, ಮಿಶ್ರಣ ದಪ್ಪಗಾಗುವ ತನಕ ಕೈ ಬಿಡದೆ ಮಿಶ್ರಣ ಮಾಡಿ.
* ಮಿಶ್ರಣ ದಪ್ಪಗಾದ ನಂತರ ಅದಕ್ಕೆ ತುಪ್ಪ ಸೇರಿಸಿ, ಮಿಶ್ರಣ ಮಾಡಿ.
* ಈ ಮಿಶ್ರಣವನ್ನು ತುಪ್ಪ ಸವರಿದ ತಟ್ಟೆಗೆ ಸುರಿದು ಚಣ್ಣಗಾಗಲು ಬಿಡಿ.
* ನಂತರ ಬೇಕಾದ ಆಕಾರಕ್ಕೆ ಕತ್ತರಿಸಿ ಆರೋಗ್ಯಕರ ಹಾಗು ರುಚಿಕರ ಗೋಧಿ ಮಣ್ಣಿ ಸವಿಯಿರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Health Tips: ಚಳಿಗಾಲದಲ್ಲಿ ಜಾಗಿಂಗ್‌ ಮಾಡಿದ್ರೆ ಏನೆಲ್ಲ ಪ್ರಯೋಜನ ಗೊತ್ತಾ

ನಾನ್‌ವೆಜ್ ತಿನ್ನದವರು ಈ ರೀತಿ ಮಶ್ರೂಮ್ ಕಬಾಬ್ ಮಾಡಿ, ಸಖತ್ ಆಗಿ ಇರುತ್ತೆ

ಚಳಿಗಾಲದಲ್ಲಿ ಕಾಡುವ ಕೀಲು ನೋವನ್ನು ಹೀಗೇ ದೂರ ಮಾಡಬಹುದು

ಮಹಾಕುಂಭ ಮೇಳ 2025ರಲ್ಲಿ ಧ್ಯಾನ ಮಾಡುವವರಿಗೆ 5 ಸಲಹೆಗಳು

ಚಳಿಗಾಲದಲ್ಲಿ ಪ್ರವಾಸಕ್ಕೆ ತೆರಳುವ ಪ್ಲಾನ್ ಇದ್ಯಾ, ಹಾಗಾದರೆ ಇದನ್ನು ತಪ್ಪದೆ ತೆಗೆದುಕೊಂಡು ಹೋಗಿ

ಮುಂದಿನ ಸುದ್ದಿ
Show comments