Select Your Language

Notifications

webdunia
webdunia
webdunia
webdunia

ಬ್ರೇಕ್ ಫಾಸ್ಟ್ ಗೆ ಮಾಡಿ ಬ್ರೆಡ್-ಬಟರ್ ಪುಡ್ಡಿಂಗ್

ಬ್ರೇಕ್ ಫಾಸ್ಟ್ ಗೆ ಮಾಡಿ ಬ್ರೆಡ್-ಬಟರ್ ಪುಡ್ಡಿಂಗ್
ಬೆಂಗಳೂರು , ಭಾನುವಾರ, 16 ಜುಲೈ 2017 (18:35 IST)
ಕೆಲಸಕ್ಕೆ ಹೋಗುವ ಮಹಿಳೆಯರು ಬೆಳಿಗ್ಗೆ ತುಂಬಾನೇ ಬಿಜಿ ಇರುತ್ತಾರೆ. ಆಫಿಸಿಗೆ ಟೈಂ ಆಗುತ್ತೆ ಎನ್ನುವ ಗಡಿಬಿಡಿ ಬೇರೆ ಆದ್ರೆ ಬ್ರೇಕ್ ಫಾಸ್ಟ್ ಮಾಡ್ಲೇಬೇಕು. ಕಡಿಮೆ ಸಮಯದಲ್ಲಿ ರೆಡಿಯಾಗುವ ಬ್ರೇಕ್ ಫಾಸ್ಟ್ ಅಂದ್ರೆ ಈ ಬ್ರೆಡ್ ಬಟರ್ ಪುಡ್ಡಿಂಗ್ 

 
ಬೇಕಾಗುವ ಸಾಮಾಗ್ರಿಗಳು  :
ಬ್ರೆಡ್ ತುಂಡುಗಳು 10 
ಹಾಲು 300ml 
ಬೆಣ್ಣೆ 50 ಗ್ರಾಂ 
ಶುಗರ್ 80 ಗ್ರಾಂ 
ಮೊಟ್ಟೆ 2 
ಖಾರದ ಪುಡಿ 1 ಚಮಚ 
ನಟ್ ಮಗ್ 1 ಚಮಚ(ಪುಡಿ ಮಾಡಿದ್ದು) 
 
ತಯಾರಿಸುವ ವಿಧಾನ: 
* ಮೊದಲಿಗೆ ಬ್ರೆಡ್ ಚೂರುಗಳನ್ನು ಸಮ ಅರ್ಧಭಾಗವಾಗಿ ಕತ್ತರಿಸಿ. 
* ಈಗ ಅದರ ಮೇಲೆ ಹಾಲು ಸುರಿದು ಪೇಸ್ಟ್ ರೀತಿ ಮಾಡಿ ಈ ಮಿಶ್ರಣವನ್ನು ಅರ್ಧ ಗಂಟೆ ಕಾಲ ಇಡಿ. 
* ಈಗ ಅರ್ಧ ಲೀಟರ್ ನೀರು ಅಥವಾ ಹಾಲು ಹಾಕಬಹುದಾದ ಬೇಕಿಂಗ್ ಡಿಶ್ ತೆಗೆದುಕೊಂಡು ಅದರಲ್ಲಿ ಬೆಣ್ಣೆ ಸವರಿ. 
* ಈಗ ಆ ಪಾತ್ರೆಗೆ ಬೆಣ್ಣೆ, ಶುಗರ್, ಮೊಟ್ಟೆ, ಖಾರದ ಪುಡಿ, ಹಾಕಿ ಚೆನ್ನಾಗಿ ಕದಡಿ. 
* ಈಗ ಈ ಮಿಶ್ರಣಕ್ಕೆ ಹಾಲಿನಲ್ಲಿ ನೆನೆ ಹಾಕಿದ್ದ ಬ್ರೆಡ್ ಪೇಸ್ಟ್ ಹಾಕಿ, ಈಗ ಡ್ರೈ ಫ್ರೂಟ್ಸ್ ಮತ್ತು ನಟ್ ಮಗ್ ಹಾಕಿ ಒಮ್ಮೆ ಸೌಟ್ ನಿಂದ ತಿರುಗಿಸಿ, ಈಗ ಬೇಕಿಂಗ್ ಡಿಶ್ ಅನ್ನು ಮೈಕ್ರೋ ಓವನ್ ನಲ್ಲಿ ಇಟ್ಟು ಕಡಿಮೆ ಉಷ್ಣತೆಯಲ್ಲಿ 20 ನಿಮಿಷ ಬೇಯಿಸಿ ಆಗ ಮಿಶ್ರಣ ಸ್ವಲ್ಪ ಕಂದು ಬಣ್ಣಕ್ಕೆ ತಿರುಗುತ್ತದೆ. ಈಗ ಬ್ರೆಡ್ ಬಟರ್ ಪುಡ್ಡಿಂಗ್ ರೆಡಿ
 

Share this Story:

Follow Webdunia kannada

ಮುಂದಿನ ಸುದ್ದಿ

ಸ್ತ್ರೀಯರ ಆ ದಿನಗಳ ಹೊಸ ಸಂಗಾತಿ