ಸಂಜೆ ವೇಳೆ ಟೀ ಜೊತೆ ಸವಿಯಿರಿ ಬ್ರೆಡ್ ಬೊಂಡಾ

Webdunia
ಗುರುವಾರ, 16 ಜುಲೈ 2020 (12:03 IST)
ಬೆಂಗಳೂರು : ಮಳೆಗಾಲದಲ್ಲಿ ಸಂಜೆ ವೇಳೆಗೆ ಟೀ ಕುಡಿಯುವಾಗ ಕರಿದ ತಿಂಡಿಗಳನ್ನು ತಿನ್ನಬೇಕೆನಿಸುತ್ತದೆ.  ಆ ವೇಳೆ ರುಚಿಕರವಾದ ಬ್ರೆಡ್ ಬೊಂಡಾ ತಯಾರಿಸಿ ತಿನ್ನಿ.

ಬೇಕಾಗುವ ಸಾಮಾಗ್ರಿಗಳು : ½ ಕಪ್ ಕಡಲೆಹಿಟ್ಟು, ¼ ಕಪ್ ಅಕ್ಕಿಹಿಟ್ಟು, ½ ಚಮಚ ಓಂಕಾಳು, 1 ಚಮಚ ಮೆಣಸಿನ ಪುಡಿ, ಉಪ್ಪು, ಪುದೀನಾ ಸೊಪ್ಪು, 2 ಹಸಿಮೆಣಸಿನಕಾಯಿ, ಎಣ್ಣೆ, ಬ್ರೆಡ್.

ಮಾಡುವ ವಿಧಾನ : ಮೊದಲಿಗೆ ಪಾತ್ರೆಗೆ ಕಡಲೆಹಿಟ್ಟು, ಅಕ್ಕಿ ಹಿಟ್ಟು, ಮೆಣಸಿನ ಪುಡಿ, ಓಂಕಾಳು, ಉಪ್ಪು, ನೀರು ಹಾಕಿ ಕಲಸಿಕೊಳ್ಳಿ. ಬಳಿಕ ಮಿಕ್ಸಿ ಜಾರಿಗೆ ಪುದೀನಾ ಸೊಪ್ಪು, ಹಸಿಮೆಣಸಿನಕಾಯಿ, ಓಂಕಾಳು, ಉಪ್ಪು ಹಾಕಿ ಚಟ್ನಿ ರುಬ್ಬಿಕೊಳ್ಳಿ.
ಬ್ರೆಡ್ ನ್ನು4 ಭಾಗ ಮಾಡಿ ಕತ್ತರಿಸಿಕೊಳ್ಳಿ. ಅದರಲ್ಲಿ 2 ಭಾಗ ತೆಗೆದುಕೊಂಡು ಅದರಲ್ಲಿ 1 ಭಾಗದ ಮೇಲೆ 1 ಚಮಚ ಪುದೀನಾ ಚಟ್ನಿ ಸವರಿ ಇನ್ನೊಂದು ಭಾಗವನ್ನು ಅದರ ಮೇಲಿಟ್ಟು ಹಿಟ್ಟಿಗೆ ಅದ್ದಿ ಎಣ್ಣೆಯಲ್ಲಿ ಬೇಯಿಸಿದರೆ ಬ್ರೆಡ್ ಬೋಂಡಾ ರೆಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಪಿರಿಯಡ್ಸ್ ನೋವು ಶಮನವಾಗಲು ಓಂ ಕಾಳನ್ನು ಹೇಗೆ ಸೇವಿಸಬೇಕು

ಜ್ವರ ಬಂದ ಮೇಲೆ ನಾಲಿಗೆ ರುಚಿ ಮರಳಲು ಏನು ಮಾಡಬೇಕು ತಪ್ಪದೇ ನೋಡಿ

ಉಗುರು ಕಡಿಯುವ ಅಭ್ಯಾಸ ನಿಲ್ಲಿಸಬೇಕೇ, ಹಾಗಿದ್ದರೆ ಈ ರೀತಿ ಮಾಡಿ

ಪುರುಷರಿಗೆ ಹಲಸಿನ ಬೀಜ ಸೇವನೆಯ ಪ್ರಯೋಜನ ತಿಳಿದರೆ ಖಂಡಿತಾ ಬಿಡಲಾರಿರಿ

ತಲೆಗೆ ತೆಂಗಿನ ಎಣ್ಣೆ ಹಚ್ಚುವುದರಿಂದ ಆರೋಗ್ಯಕ್ಕೆ ಸಿಗುವ ಲಾಭವೇನು ಗೊತ್ತಾ

ಮುಂದಿನ ಸುದ್ದಿ
Show comments