Select Your Language

Notifications

webdunia
webdunia
webdunia
webdunia

ಸಂಜೆ ವೇಳೆ ಟೀ ಜೊತೆ ಸವಿಯಿರಿ ಬ್ರೆಡ್ ಬೊಂಡಾ

ಸಂಜೆ ವೇಳೆ ಟೀ ಜೊತೆ ಸವಿಯಿರಿ ಬ್ರೆಡ್ ಬೊಂಡಾ
ಬೆಂಗಳೂರು , ಗುರುವಾರ, 16 ಜುಲೈ 2020 (12:03 IST)
ಬೆಂಗಳೂರು : ಮಳೆಗಾಲದಲ್ಲಿ ಸಂಜೆ ವೇಳೆಗೆ ಟೀ ಕುಡಿಯುವಾಗ ಕರಿದ ತಿಂಡಿಗಳನ್ನು ತಿನ್ನಬೇಕೆನಿಸುತ್ತದೆ.  ಆ ವೇಳೆ ರುಚಿಕರವಾದ ಬ್ರೆಡ್ ಬೊಂಡಾ ತಯಾರಿಸಿ ತಿನ್ನಿ.

ಬೇಕಾಗುವ ಸಾಮಾಗ್ರಿಗಳು : ½ ಕಪ್ ಕಡಲೆಹಿಟ್ಟು, ¼ ಕಪ್ ಅಕ್ಕಿಹಿಟ್ಟು, ½ ಚಮಚ ಓಂಕಾಳು, 1 ಚಮಚ ಮೆಣಸಿನ ಪುಡಿ, ಉಪ್ಪು, ಪುದೀನಾ ಸೊಪ್ಪು, 2 ಹಸಿಮೆಣಸಿನಕಾಯಿ, ಎಣ್ಣೆ, ಬ್ರೆಡ್.

ಮಾಡುವ ವಿಧಾನ : ಮೊದಲಿಗೆ ಪಾತ್ರೆಗೆ ಕಡಲೆಹಿಟ್ಟು, ಅಕ್ಕಿ ಹಿಟ್ಟು, ಮೆಣಸಿನ ಪುಡಿ, ಓಂಕಾಳು, ಉಪ್ಪು, ನೀರು ಹಾಕಿ ಕಲಸಿಕೊಳ್ಳಿ. ಬಳಿಕ ಮಿಕ್ಸಿ ಜಾರಿಗೆ ಪುದೀನಾ ಸೊಪ್ಪು, ಹಸಿಮೆಣಸಿನಕಾಯಿ, ಓಂಕಾಳು, ಉಪ್ಪು ಹಾಕಿ ಚಟ್ನಿ ರುಬ್ಬಿಕೊಳ್ಳಿ.
ಬ್ರೆಡ್ ನ್ನು4 ಭಾಗ ಮಾಡಿ ಕತ್ತರಿಸಿಕೊಳ್ಳಿ. ಅದರಲ್ಲಿ 2 ಭಾಗ ತೆಗೆದುಕೊಂಡು ಅದರಲ್ಲಿ 1 ಭಾಗದ ಮೇಲೆ 1 ಚಮಚ ಪುದೀನಾ ಚಟ್ನಿ ಸವರಿ ಇನ್ನೊಂದು ಭಾಗವನ್ನು ಅದರ ಮೇಲಿಟ್ಟು ಹಿಟ್ಟಿಗೆ ಅದ್ದಿ ಎಣ್ಣೆಯಲ್ಲಿ ಬೇಯಿಸಿದರೆ ಬ್ರೆಡ್ ಬೋಂಡಾ ರೆಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕವನ್ನು ಕೊರೋನಾದಿಂದ ದೇವರೇ ಕಾಪಾಡಬೇಕು ಎಂದ ಆರೋಗ್ಯ ಸಚಿವ ಶ್ರೀರಾಮುಲು