ಬ್ರೆಡ್ ಬಾದಾಮ್ ಕೇಕ್

Webdunia
ಗುರುವಾರ, 21 ಫೆಬ್ರವರಿ 2019 (15:10 IST)
ಈ ಕೇಕ್ ಅನ್ನು ಸುಲಭವಾಗಿ ತಯಾರಿಸಬಹುದು. ಓವನ್ ಇಲ್ಲದೇ ಕುಕ್ಕರ್ ಇಲ್ಲದೇಯೂ ಕೂಡಾ ಈ ಕೇಕ್ ಅನ್ನು ಮನೆಯಲ್ಲಿಯೇ ತಯಾರಿಸಬಹುದು. ಕೇವಲ ಹಬೆಯಲ್ಲಿಯೇ ಬೇಯಿಸಿ ಮಾಡುವಂತಹ ಈ ಸುಲಭವಾದ ಕೇಕ್ ಎಲ್ಲಾ ವಯಸ್ಸಿನವರಗೂ ಇಷ್ಟವಾಗುತ್ತದೆ. ಹಾಗಾದರೆ ಇದನ್ನು ಹೇಗೆ ಮಾಡುವುದೆಂದು ನೋಡೋಣ..
   ತಯಾರಿಸಲು ಬೇಕಾಗುವ ಸಾಮಗ್ರಿಗಳು:
* ಪುಡಿ ಮಾಡಿರುವ ಬ್ರೆಡ್- 2 ಕಪ್
* ಮೈದಾ 1 ಕಪ್
* ಹಾಲು 2 ಕಪ್
ಸಕ್ಕರೆ 1 ಕಪ್
ಕರಗಿಸಿದ ತುಪ್ಪ ಅಥವಾ ಬೆಣ್ಣೆ 3 ಟೇಬಲ್ ಚಮಚ
* ಮಿಲ್ಕ್ ಮೇಡ್ 3 ಟೇಬಲ್ ಚಮಚ
* ಬೇಕಿಂಗ್ ಪೌಡರ್ 2 ಟೀ ಚಮಚ
* ಬೇಕಿಂಗ್ ಸೋಡಾ 1 ಟೀ ಚಮಚ
* ವೆನಿಲ್ಲಾ ಎಸ್ಸೆನ್ಸ್ 1 ಟೀ ಚಮಚ
* ಸಣ್ಣದಾಗಿ ಹೆಚ್ಚಿದ ಬಾದಾಮಿ ಕಾಲು ಕಪ್
 
ತಯಾರಿಸುವ ವಿಧಾನ:
      ಮೊದಲಿಗೆ ಇಡ್ಲಿ ಪಾತ್ರೆಯನ್ನು ಕಾಯಲು ಇಡಬೇಕು. ನಂತರ ಬ್ರೆಡ್ ಪೌಡರ್ ಅಂದರೆ ಬ್ರೆಡ್ ಅನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಂಡಿರಬೇಕು. ನಂತರ ಒಂದು ಬಟ್ಟಲಿಗೆ ಬ್ರೆಡ್ ಪೌಡರ್, ಮೈದಾ, ಸಕ್ಕರೆ, ಬೇಕಿಂಗ್ ಸೋಡಾ, ಬೇಕಿಂಗ್ ಪೌಡರ್ ಅನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ನಂತರ ಒಂದು ಬಟ್ಟಲಿಗೆ ತುಪ್ಪವನ್ನು ಸವರಿ ಮೈದಾವನ್ನು ಹಾಕಿ ಸುತ್ತಲೂ ತಿರುಗಿಸಿ ಹಚ್ಚಿನ ಮೈದಾವನ್ನು ತೆಗೆದುಬಿಡಬೇಕು. ನಂತರ ಇದಕ್ಕೆ ರೆಡಿ ಆಗಿರುವ ಕೇಕ್ ಮಿಶ್ರಣವನ್ನು ಹಾಕಿ ಇಡ್ಲಿ ಪಾತ್ರೆಯಲ್ಲಿ ಇಟ್ಟು ಅದರ ಮೇಲೆ ಹೆಚ್ಚಿದ ಬಾದಾಮಿಯನ್ನು ಉದುರಿಸಬೇಕು. ಅದನ್ನು 45 ರಿಂದ 1 ಗಂಟೆಯವರೆಗೆ ಹಬೆಯಲ್ಲಿ ಬೇಯಿಸಬೇಕು. ಮಧ್ಯ ಮಧ್ಯ ಚಾಕು ಅಥವಾ ಕಡ್ಡಿಯನ್ನು ಹಾಕಿ ನೋಡಬಹುದು. ಯಾವುದೇ ಹಿಟ್ಟು ಅಂಟದೇ ಇದ್ದರೆ ಕೇಕ್ ಬೆಂದಿದೆ ಎಂದು ಅರ್ಥ. ಈಗ ರುಚಿಕರವಾದ ಬ್ರೆಡ್ ಬಾದಾಮ್ ಕೇಕ್ ಸವಿಯಲು ಸಿದ್ಧ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಿಗೆ ಪದೇ ಪದೇ ಅಜೀರ್ಣವಾಗುವುದು ಯಾಕೆ ಇಲ್ಲಿದೆ ನೋಡಿ ಕಾರಣ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ಮುಂದಿನ ಸುದ್ದಿ
Show comments