ಹಾಗಲಕಾಯಿ ಗೊಜ್ಜು

Webdunia
ಬುಧವಾರ, 3 ಅಕ್ಟೋಬರ್ 2018 (18:13 IST)
ಅದರಕ್ಕೆ ಕಹಿಯಾದದ್ದು ಉದರಕ್ಕೆ ಸಿಹಿ ಎನ್ನುವ ಮಾತಿದೆ. ಅದು ಹಾಗಲಕಾಯಿಗೆ ಹೇಳಿ ಮಾಡಿಸಿದಂತೆ ಇದೆ. ಹಾಗಲಕಾಯಿಯು ಎಷ್ಟು ಕಹಿಯೋ ಅಷ್ಟೇ ಉದರಕ್ಕೆ ಬೇಕಾಗುವಂತಹ ಎಲ್ಲ ರೀತಿಯ ಪೋಷಕಾಂಶಗಳನ್ನು ಹೊಂದಿದೆ. ಅಷ್ಟೇ ಅಲ್ಲದೇ ಹಾಗಲಕಾಯಿಯನ್ನು ಬಳಸಿ ಮಾಡಿದ ಪದಾರ್ಥಗಳು ತುಂಬಾ ರುಚಿಯಾಗಿರುತ್ತವೆ. ಹಾಗಲಕಾಯಿಯ ಗೊಜ್ಜನ್ನೂ ಸಹ ಅತಿ ಸುಲಭವಾಗಿ ಮಾಡಬಹುದು. 
ಬೇಕಾಗುವ ಸಾಮಗ್ರಿಗಳು :
* ಹಾಗಲಕಾಯಿ 4 ರಿಂದ 5
* ಹುಣಸೆಹಣ್ಣು 1
* ನಿಂಬೆ ಹಣ್ಣು 
* ಬೆಲ್ಲ ಸ್ವಲ್ಪ
* ಅರಿಶಿನ 1 ಚಮಚ
* ನೀರು
* ರುಚಿಗೆ ತಕ್ಕಷ್ಟು ಉಪ್ಪು
 
ತಯಾರಿಸುವ ವಿಧಾನ :
 
  ಮೊದಲು ಹಾಗಲಕಾಯಿಯನ್ನು ಕತ್ತರಿಸಿ 1 ಚಮಚ ಅರಿಶಿನ ಹಾಕಿದ ನೀರಿನಲ್ಲಿ 10 ನಿಮಿಷ ಹಾಕಬೇಕು. ನಂತರ ಒಂದು ಪ್ಯಾನ್‌ನಲ್ಲಿ ಕಡಿಮೆ ಉರಿಯಲ್ಲಿ ಒಣ ಮೆಣಸು, ಉದ್ದಿನ ಬೇಳೆ ಮತ್ತು ಗಸಗಸೆಯನ್ನು ಹುರಿದು ಬದಿಯಲ್ಲಿಡಬೇಕು. ನಂತರ ಈ ಎಲ್ಲಾ ಸಾಮಗ್ರಿಗಳನ್ನು ಹಾಕಿ, ತೆಂಗಿನ ತುರಿ ಸೇರಿಸಿ 1/4 ಕಪ್ ನೀರು ಹಾಕಿ ನುಣ್ಣನೆ ರುಬ್ಬಿಕೊಳ್ಳಬೇಕು. ನಂತರ ಒಂದು ಪಾತ್ರೆಗೆ ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಅದರಲ್ಲಿ ಸಾಸಿವೆ, ಉದ್ದಿನ ಬೇಳೆ, ಕರಿಬೇವಿನ ಎಲೆ ಹಾಕಿ 1 ರಿಂದ 2 ನಿಮಿಷ ಹುರಿದು ಹಾಗಲಕಾಯಿಯನ್ನು ಹಿಂಡಿ ಪಾತ್ರೆಗೆ ಹಾಕಬೇಕು.

ಅದನ್ನು 10 ನಿಮಿಷದವರೆಗೆ ಫ್ರೈ ಮಾಡಬೇಕು. ನಂತರ ಹುಣಸೆಹಣ್ಣಿನ ರಸ ಸೇರಿಸಿ 10 ನಿಮಿಷ ಬೇಯಿಸಬೇಕು. ಹಾಗಲಕಾಯಿ ಬೆಂದ ನಂತರ ರುಬ್ಬಿದ ಮಸಾಲೆಗೆ ಸ್ವಲ್ಪ ಬೆಲ್ಲ, ರುಚಿಗೆ ತಕ್ಕಷ್ಚು ಉಪ್ಪನ್ನು ಸೇರಿಸಿ 5 ನಿಮಿಷ ಬೇಯಿಸಿದರೆ ಅನ್ನದ ಜೊತೆ ಸವಿಯಲು ರುಚಿರುಚಿಯಾದ ಹಾಗಲಕಾಯಿ ಗೊಜ್ಜು ರೆಡಿ.. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಬಿಸಿಲ ತಾಪಕ್ಕೆ ಬಾಯಾರಿಕೆ ಆಗದಿದ್ದರು ನೀವು ಇಷ್ಟು ನೀರು ಕುಡಿಯಲೇಬೇಕು

ದೇಹದಲ್ಲಿ ಬಿಳಿ ರಕ್ತ ಕಣ ಮತ್ತು ಕೆಂಪು ರಕ್ತ ಕಣ ಸಮತೋಲನದಲ್ಲಿರಲು ಏನು ಮಾಡಬೇಕು

ಹೆರಿಗೆ ನಂತರ ಮಹಿಳೆಯರು ದಪ್ಪ ಆಗಲು ಕಾರಣವೇನು

ಕಹಿ ಬೇವನ್ನು ಪ್ರತಿನಿತ್ಯ ಸೇವನೆ ಮಾಡುವುದರ ಉಪಯೋಗವೇನು ತಿಳಿದುಕೊಳ್ಳಿ

ಮಾವಿನಕಾಯಿ ಸಿಕ್ರೆ ಈ ರೀತಿ ಚಟ್ನಿ ಮಾಡಿ ಗಂಜಿ ಜತೆ ಸೇವಿಸಿ, ಅದ್ಭುತ

ಮುಂದಿನ ಸುದ್ದಿ
Show comments