Webdunia - Bharat's app for daily news and videos

Install App

ಕಲೆರಹಿತ ಕಾಂತಿಯುಕ್ತ ಮುಖ ನಿಮ್ಮದಾಗಬೇಕಾ ?

Webdunia
ಸೋಮವಾರ, 17 ನವೆಂಬರ್ 2014 (17:26 IST)
ಹೆಣ್ಣಿನ ಸೌಂದರ್ಯದಲ್ಲಿ ಕಲೆರಹಿತ ಕಾಂತಿಯುಕ್ತ ಮುಖವೇ ಪ್ರಧಾನ ಪಾತ್ರ ವಹಿಸುತ್ತದೆ. ತ್ವಚೆ ಮೇಲಿನ ಕಪ್ಪು ಕೆಲೆಗಳು ಮುಖದ ಸೌಂದರ್ಯವನ್ನು ಅಡಗಿಸುತ್ತದೆ. ಅದಕ್ಕಾಗಿ ನೀವು ಈ ಸಲಹೆಗಳನ್ನು ಪಾಲಿಸಿದ್ದಲ್ಲಿ ಕಪ್ಪು ಕಲೆಗಳು ಮಾಯವಾಗಿ ನಿಮ್ಮ ಮುಖವು ಕಾಂತಿಯುತವಾಗುವುದಲ್ಲಿ ಯಾವುದೆ ಸಂಶಯವಿಲ್ಲ.
 
1.ಸೌತೆಕಾಯಿಯನ್ನು ಅತಿ ತೆಳುವಾಗಿ ಕತ್ತರಿಸಿ ಅವುಗಳನ್ನು 10 ನಿಮಿಷ ಕಣ್ಣಿನ ರೆಪ್ಪೆ ಮೇಲೆ ಇಟ್ಟುಕೊಂಡರೆ ಕಣ್ಣಿನ ಸುತ್ತಲಿನ ಕಪ್ಪು ವೃತ್ತ ಮಾಯವಾಗುತ್ತದೆ.
 
2.ಟೊಮ್ಯಾಟೋ ಕತ್ತರಿಸಿ ಪ್ರತಿದಿನ ಮುಖದ ಮೇಲೆ ತಿಕ್ಕುವುದರಿಂದ ತ್ವಚೆಯಲ್ಲಿ ಹೊಳಪು ಉಂಟಾಗುತ್ತದೆ.
 
3.ಹಾಲಿನ ಕೆನೆಯನ್ನು ಪ್ರತಿನಿತ್ಯ ಮುಖಕ್ಕೆ ಹಚ್ಚಿಕೊಳ್ಳುತ್ತಿದ್ದರೆ ತ್ವಚೆ ಮೃದುವಾಗುತ್ತದೆ ಮತ್ತು ನಂಜುನಿರೋಧಕ ಶಕ್ತಿ ಪಡೆಯುತ್ತದೆ. ಅಲ್ಲದೆ ಕಪ್ಪುಕಲೆ, ನೆರಿಗೆಗಳು ಮಾಯವಾಗುತ್ತವೆ.
 
4.ಪ್ರತಿದಿನ ಊಟದ ನಂತರ ಸೇಬುಹಣ್ಣನ್ನು ತಿನ್ನುವುದರಿಂದ ಹಲ್ಲುಗಳು ಹೊಳೆಯುತ್ತವೆ.
 
5.ಪ್ರತಿದಿನ ಹುಬ್ಬಿನ ಮೇಲೆ ಸ್ವಲ್ಪ ಹರಳೆಣ್ಮೆ ಲೇಪಿಸುತ್ತಿದ್ದರೆ ಹುಬ್ಬುಗಳು ಕಪ್ಪಾಗುತ್ತವೆ.
 
ತಲಾ ಎರಡು ಹನಿ ನಿಂಬೆರಸ, ಜೇನುತುಪ್ಪ, ಗ್ಲಿಸರಿನ್, ಪನ್ನೀರು ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳುತ್ತಿದ್ದರೆ, ತ್ವಚೆ ಬೇಗದ ಸುಕ್ಕುಗಟ್ಟದು.
 
6.ಮೆಂತ್ಯೆ,ಕಡಲೇಬೇಳೆ, ಹೆಸರುಬೇಳೆ ಇವುಗಳನ್ನು ಸೇರಿಸಿ ಹಿಟ್ಟು ಮಾಡಿಕೊಂಜು, ನಾಲ್ಕು ಚಮಚ ಪನ್ನೀರು ಹಾಗು ಎರಡು ಹಿಟ್ಟು ಬೆರೆಸಿ. ಮುಖಕ್ಕೆ ಲೇಪಿಸಿ 20 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ಮುಖವನ್ನು ಒರೆಸಿಕೊಳ್ಳಿ. ಇದು ಚಳಿಗಾಲಕ್ಕೆ ಉತ್ತಮ ಆರೈಕೆ.
 
7.ತುಟಿಗಳಿಗೆ ಪ್ರತಿದಿನ ತುಪ್ಪ, ಹರಳೆಣ್ಣೆ ಅಥವಾ ಹಾಲಿನ ಕೆನೆ ಹಚ್ಚಿ ತಿಕ್ಕಿ, ಒಂದು ಗಂಟೆ ಬಿಟ್ಟು ಸೀಗೇಪುಡಿ ಅಥವಾ ಕಡಲೇಹಿಟ್ಟಿನಲ್ಲಿ ತಿಕ್ಕಿ ತೊಳೆಯಿರಿ. ಹೊಳಪುಳ್ಳ ತಿಳಿಗೆಂಪು ತುಟಿ ನಿಮ್ಮದಾಗುತ್ತದೆ.
 
8.ಪ್ರತಿದಿನ ಸ್ವಲ್ಪ ತುಳಸೀರಸವನ್ನು ಜೇನುತುಪ್ಪದೊಡನೆ ಸೇವಿಸುತ್ತಿದ್ದರೆ, ಮುಖದ ತೇಜಸ್ಸು ಹೆಚ್ಚಿ ನುಖದ ಮೇಲಿನ ಕಲೆಗಳು ಮಾಯವಾಗುತ್ತವೆ.
 
9.ಕಹಿಬೇವಿನ ಏಳೆಂಟು ಎಲೆಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ , ತುಸು ಬೆಚ್ಚಗಿರುವಾಗಲೇ ಮುಖ ತೊಳೆದುಕೊಳ್ಳುತ್ತಿದ್ದರೆ, ಸಿಡಿಬಿನ ಕಲೆಗಳು ಮಾಯವಾಗುತ್ತವೆ.
 
10.ಹಸಿ ಹಾಲನ್ನು ಮುಖ, ಕೈ, ಕತ್ತು ಮತ್ತು ತಲೆಗೆ ಹಚ್ಚಿಕೊಂಡು, ಅಕ್ಥ ಗಂಟೆ ಬಿಟ್ಟು ಸ್ನಾನ ಮಾಡಿದರೆ ನ್ಯಾಚುರಲ್ ಕಂಡೀಶನರ್‌ನಂತೆ ಕಾರ್ಯ ನಿರ್ವಾಹಿಸುತ್ತದೆ.ಅಲ್ಲದೆ ಮುಖ ಹಾಗೂ ಕೂದಲಿನ ಹೊಳಪನ್ನು ಕಾಯ್ದಿರಿಸಿ ಸೌಂದರ್ಯ ಹೆಚ್ಚಿಸಲು ಸಹಕಾರಿಯಾಗುತ್ತದೆ.
 
11.ದಾಲ್ಚಿನ್ನಿ ಚುಕ್ಕೆಗಳನ್ನು ಪುಡಿ ಮಾಡಿ ನಿಂಬೆರಸ ಸೇರಿಸಿ ಹಚ್ಚಿಕೊಂಡರೆ ಮೊಡವೆಗಳು ಮಾಯವಾಗುತ್ತವೆ.
 
12.ಕಡಲೇಹಿಟ್ಟಿಗೆ ಸೌತೇರಸ ಬೆರೆಸಿ, ಮುಖ ಹಾಗೂ ಕತ್ತಿಗೆ ಹಚ್ಚಿಕೊಂಡು, 15 ನಿಮಿಷ ನಂತರ ಮುಖ ತೊಳೆದುಕೊಳ್ಳ. ಪ್ರತಿದಿನ ಈ ರೀತಿ ಮಾಡಿದರೆ, ತ್ವಚೆ ನುಣುಪು ಹಾಗೂ ಕೋಮಲತೆಯನ್ನು ಪಡೆಯುತ್ತದೆ.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಖಾಲಿ ಹೊಟ್ಟೆಯಲ್ಲಿ ಜಾಗಿಂಗ್ ಮಾಡುವಾಗ ಅಡ್ಡಪರಿಣಾಮಗಳ ಬಗ್ಗೆ ಎಚ್ಚರಿಕೆಯಿರಲಿ

ಪುದೀನಾ ಸೊಪ್ಪು ಬಳಸಿ ಕಲೆ ನಿವಾರಿಸಲು ಹೀಗೆ ಮಾಡಿ

ದೇಸೀ ಸನ್ ಸ್ಕ್ರೀನ್ ಲೋಷನ್ ಮನೆಯಲ್ಲಿಯೇ ಮಾಡಿ

ಸೆಕೆಗಾಲದಲ್ಲಿ ಪದೇ ಪದೇ ಕೋಲ್ಡ್ ಡ್ರಿಂಕ್ಸ್ ಸೇವನೆ ಮಾಡುತ್ತಿದ್ದರೆ ಇದನ್ನು ತಪ್ಪದೇ ಓದಿ

ಅಸ್ತಮಾ ರೋಗಿಗಳು ಹಾಲು ಹೇಗೆ ಸೇವಿಸಬೇಕು ಮತ್ತು ಬೆಸ್ಟ್ ಟೈಮ್ ಯಾವುದು ತಿಳಿಯಿರಿ

Show comments