Select Your Language

Notifications

webdunia
webdunia
webdunia
webdunia

ಹುರುಳಿ ಕಾಳಿನ ಚಟ್ನಿ ಪುಡಿ

ಹುರುಳಿ ಕಾಳಿನ ಚಟ್ನಿ ಪುಡಿ
ಬೆಂಗಳೂರು , ಗುರುವಾರ, 4 ಅಕ್ಟೋಬರ್ 2018 (14:47 IST)
ಊಟದ ಜೊತ ಉಪ್ಪಿನಕಾಯಿ ಇಲ್ಲದಿದ್ದರೆ ಊಟವೇ ರುಚಿಸುವುದಿಲ್ಲ. ಆದರೆ ಚಟ್ನಿಪುಡಿ ಎಂದರೆ ಬಯಲುಸೀಮೆಯ ಜನರು ನೆನಪಾಗುತ್ತಾರೆ. ಅಲ್ಲಿಯ ಜನರು ನಾನಾರೀತಿಯ ಚಟ್ನಿಪುಡಿಯನ್ನು ಮಾಡಿ ಸವಿಯುತ್ತಾರೆ. ಚಟ್ನಿಪುಡಿಗಳು ಉಪ್ಪಿನಕಾಯಿಯ ತರಹ ತುಂಬಾ ದಿನಗಳ ಕಾಲ ಬಳಸಬಹುದು. ಹುರುಳಿಕಾಳಿನ ಚಟ್ನಿ ಪುಡಿಯನ್ನೂ ಸಹ ಅತ್ಯಂತ ಸುಲಭವಾಗಿ ಮಾಡಬಹುದು. ನೀವೂ ಒಮ್ಮೆ ಮನೆಯಲ್ಲಿ ಮಾಡಿ ರುಚಿ ಸವಿಯಿರಿ
ತಯಾರಿಸಲು ಬೇಕಾಗುವ ಸಾಮಗ್ರಿಗಳು :
* 1 ಕಪ್ ಹುರಳಿಕಾಳು
* 8 ರಿಂದ 10 ಒಣಮೆಣಸಿನಕಾಯಿ
* 3 ಚಮಚ ಒಣಕೊಬ್ಬರಿ ತುರಿ
* 1 ಚಮಚ ಜೀರಿಗೆ
* ಸ್ವಲ್ಪ ಹುಣಸೇಹಣ್ಣು
* ಕರಿಬೇವು
* ಕೊತ್ತಂಬರಿ ಸೊಪ್ಪು
* ರುಚಿಗೆ ತಕ್ಕಷ್ಟು ಉಪ್ಪು
 
ತಯಾರಿಸುವ ವಿಧಾನ :
ಮೊದಲು 1 ಕಪ್ ಹುರಳಿಕಾಳನ್ನು ಮೆನ್ನಾಗಿ ಸ್ವಚ್ಛ ಮಾಡಿ ಹುರಿದು ಮಿಕ್ಸರ್‌‌ನಲ್ಲಿ ಪುಡಿ ಮಾಡಬೇಕು. ನಂತರ ಒಣಮೆಣಸಿನ ಕಾಯಿಯನ್ನು ಹುರಿದಿಟ್ಟುಕೊಳ್ಳಬೇಕು. ನಂತರ ಪುಡಿ ಮಾಡಿದ ಹುರಳಿಕಾಳಿನ ಜೊತೆ ಒಣ ಕೊಬ್ಬರಿತುರಿ, ಜೀರಿಗೆ, ಹುಣಸೆಹಣ್ಣು, ಈಗಾಗಲೇ ಹುರಿದುಕೊಂಡ ಒಣಮೆಣಸಿನ ಕಾಯಿ, ಕರಿಬೇವು, ಕೊತ್ತಂಬರಿ ಸೊಪ್ಪು, ಉಪ್ಪನ್ನು ಹಾಕಿ ನುಣ್ಣಗೆ ಪುಡಿ ಮಾಡಬೇಕು. ನಂತರ ಇದನ್ನು ಸ್ವಲ್ಪ ಹೊತ್ತು ಆರಲು ಬಿಡಬೇಕು. ಈ ರೀತಿಯ ಚಟ್ನಿಪುಡಿಗಳು ಒಂದು ತಿಂಗಳು ಇಟ್ಟರೂ ಕೆಡುವುದಿಲ್ಲ. ಮತ್ತು ಇವು ರೊಟ್ಟಿ, ಚಪಾತಿಯ ಜೊತೆ ತಿನ್ನುವುದಕ್ಕೆ ಚೆನ್ನಾಗಿರುತ್ತದೆ.    

Share this Story:

Follow Webdunia kannada

ಮುಂದಿನ ಸುದ್ದಿ

ತಯಾರಿಸಿ ನೋಡಿ ಗೋಧಿ ಹಿಟ್ಟಿನ ಆರೋಗ್ಯಕರ ಲಡ್ಡು