ಸಿಂಪಲ್ ಆಗಿ ಬಾದಾಮ್ ಹಲ್ವಾ ಮಾಡಿ ಸವಿಯಿರಿ...

Webdunia
ಶುಕ್ರವಾರ, 2 ನವೆಂಬರ್ 2018 (16:52 IST)
ಯಾವಾಗಲಾದರೂ ನಿಮಗೆ ಸಿಹಿ ತಿಂಡಿಯನ್ನು ತಿನ್ನುವ ಮನಸಾದರೆ ಅತಿ ಶೀಘ್ರವಾಗಿ ನೀವೇ ಮಾಡಿಕೊಳ್ಳಬಹುದಾದ ಸಿಹಿ ತಿಂಡಿ ಬಾದಾಮ್ ಹಲ್ವಾ. ಕೇವಲ ಕೆಲವೇ ಸಾಮಗ್ರಿಗಳನ್ನು ಬಳಸಿ ಇದನ್ನು ತಯಾರಿಸಬಹುದಾಗಿದೆ ಮತ್ತು ತಯಾರಿಸುವ ವಿಧಾನವೂ ಬಹಳ ಸುಲಭವಾಗಿದೆ. ಈ ಸಿಂಪಲ್ ಬಾದಾಮ್ ಹಲ್ವಾ ಮಾಡುವ ವಿಧಾನಕ್ಕಾಗಿ ಇಲ್ಲಿ ನೋಡಿ.
ಬೇಕಾಗುವ ಸಾಮಗ್ರಿಗಳು:
ಬಾದಾಮಿ - 1 ಕಪ್
ಸಕ್ಕರೆ - 1/2 ಕಪ್
ಹಾಲು - 1/4 ಕಪ್
ತುಪ್ಪ - 4 ಚಮಚ
ಕೇಸರಿ - 1 ಗ್ರಾಮ್
ಡ್ರೈಫ್ರೂಟ್ಸ್ - ಸ್ವಲ್ಪ
 
ಮಾಡುವ ವಿಧಾನ:
ಬಾದಾಮಿಯನ್ನು ಬಿಸಿ ನೀರಿನಲ್ಲಿ 1/2 ಗಂಟೆ ನೆನೆಸಿಡಿ. ಸ್ವಲ್ಪ ಹಾಲಿನಲ್ಲಿ ಕೇಸರಿಯನ್ನು ಹಾಕಿ ನೆನೆಸಿಡಿ. 1/2 ಗಂಟೆಯ ನಂತರ ಬಾದಾಮಿ ಸಿಪ್ಪೆಯನ್ನು ಬೇರ್ಪಡಿಸಿ ಮಿಕ್ಸಿ ಜಾರ್‌ಗೆ ಹಾಕಿ 1/4 ಕಪ್ ಹಾಲನ್ನು ಸೇರಿಸಿ ರುಬ್ಬಿಕೊಳ್ಳಿ. ಹೀಗೆ ರುಬ್ಬಿದ ಬಾದಾಮಿ ಪೇಸ್ಟ್ ಮತ್ತು 2 ಚಮಚ ತುಪ್ಪವನ್ನು ಬಿಸಿಯಾದ ತವಾಗೆ ಹಾಕಿ ಸಣ್ಣ ಉರಿಯಲ್ಲಿ ಬಿಸಿಮಾಡಿ.

2 ನಿಮಿಷದ ನಂತರ ಅದಕ್ಕೆ ಸಕ್ಕರೆಯನ್ನು ಸೇರಿಸಿ ಬಿಸಿಮಾಡಿ. ಸಕ್ಕರೆ ಕರಗಿದ ನಂತರ ಅದಕ್ಕೆ ಕೇಸರಿಯನ್ನು ಬೆರೆಸಿ. ನಂತರ ಇನ್ನೂ 2 ಚಮಚ ತುಪ್ಪವನ್ನು ಸೇರಿಸಿ ಮಿಕ್ಸ್ ಮಾಡಿ, ಅದು ತಳ ಬಿಟ್ಟಾಗ ಸ್ಟೌ ಆಫ್ ಮಾಡಿ ಅದನ್ನು ಒಂದು ಬೌಲ್‌ನಲ್ಲಿ ಹಾಕಿ ಡ್ರೈಫ್ರೂಟ್ಸ್ ಚೂರುಗಳನ್ನು ಸೇರಿಸಿದರೆ ರುಚಿಯಾದ ಬಾದಾಮ್ ಹಲ್ವಾ ಸಿದ್ಧವಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ದೀಪಾವಳಿಗೆ ಖೋವಾ ಬಳಸಿ ಗುಲಾಬ್ ಜಾಮೂನ್ ಮಾಡಿ

ಹಬ್ಬದ ಋತುವಿನಲ್ಲಿ ತೂಕ ಹೆಚ್ಚಾಗದಂತೆ ಕಾಪಾಡಿಕೊಳ್ಳಲು ಆಹಾರ ಕ್ರಮ ಹೀಗೇ ಅನುಸರಿಸಿ

ಮುಂದಿನ ಸುದ್ದಿ
Show comments