Select Your Language

Notifications

webdunia
webdunia
webdunia
webdunia

ಬೇಬಿ ಕಾರ್ನ್ ಮಂಚೂರಿ

ಬೇಬಿ ಕಾರ್ನ್ ಮಂಚೂರಿ
ಬೆಂಗಳೂರು , ಶನಿವಾರ, 27 ಮೇ 2017 (16:35 IST)
ಬೇಕಾಗುವ ಸಾಮಗ್ರಿಗಳು
 
ಚಿಕ್ಕ ಚಿಕ್ಕದಾಗಿ ಕತ್ತರಿಸಿದ ಕಾರ್ನ್ -1 ಕಪ್
ಮೈದಾ ಹಿಟ್ಟು - 1 ಕಪ್
ಬೇಯಿಸಿದ ಟೊಮ್ಯಾಟೊ -4
ಈರುಳ್ಳಿ- 2
ಹಸಿ ಮೆಣಸು -2
ಕತ್ತರಿಸಿಟ್ಟುಕೊಂಡ ದೊಡ್ಡ ಮೆಣಸು-ಸ್ವಲ್ಪ
ಕೊತ್ತಂಬರಿ ಸೊಪ್ಪು - ಸ್ವಲ್ಪ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ -2 ಚಮಚ
ಅಚ್ಚ ಖಾರದ ಪುಡಿ - ಸ್ವಲ್ಪ
ಅರಿಷಿಣ- ಸ್ವಲ್ಪ
ಉಪ್ಪು- ರುಚಿಗೆ ತಕ್ಕಷ್ಟು
ಎಣ್ಣೆ
 
 ಮಾಡುವ ವಿಧಾನ
* ಮೈದಾಹಿಟ್ಟು, ಅಚ್ಚ ಖಾರದ ಪುಡಿ ಎರಡು ಚಮಚ, ಚಿಟಿಕೆ ಅರಿಷಿಣ, ಉಪ್ಪು ಹಾಕಿ ಕಲಸಿ. ಈಗ ಕತ್ತರಿಸಿದ ಕಾರ್ನ್ ಗಳನ್ನು ಈ ಮಿಶ್ರಣದಲ್ಲಿ ಅದ್ದಿ ಎಣ್ಣೆಯಲ್ಲಿ ಕರಿದು ಇರಿಸಿಕೊಳ್ಳಿ.
 
ಈಗ ಮಿಕ್ಸಿಗೆ ಬೇಯಿಸಿದ ಟೊಮ್ಯಾಟೊ, ಹಸಿಮೆಣಸು, ಸ್ವಲ್ಪ ಉಪ್ಪು ಸೇರಿಸಿ ರುಬ್ಬಿ. 
 
* ಒಂದು ಪ್ಯಾನ್ ಗೆ ಎರಡು ಚಮಚ ಎಣ್ಣೆ,ಉದ್ದುದ್ದ ಹೆಚ್ಚಿದ ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ರುಬ್ಬಿದ ಮಿಶ್ರಣ ಹಾಕಿ ಕುದಿಸಿ. ಈಗ ಇದಕ್ಕೆ ಕರಿದಿಟ್ಟ ಕಾರ್ನ್ ಸೇರಿಸಿ ಚೆನ್ನಾಗಿ ಕಲಸಿ.
 
*ಇದನ್ನು ಒಂದು ಪ್ಲೇಟ್ ಗೆ ಹಾಕಿ ಅದರ ಮೇಲೆ ಕೊತ್ತಂಬರಿ ಸೊಪ್ಪು ಹಾಗೂ ಹೆಚ್ಚಿದ ಈರುಳ್ಳಿಯನ್ನು ಹಾಕಿ ಅಲಂಕರಿಸಿದರೆ  ಬೇಬಿ ಕಾರ್ನ್ ಮಂಚೂರಿ ಸಾಯಂಕಾಲದ ಟೀ-ಕಾಫಿ ಜತೆ ಸವಿಯಲು ಸಿದ್ಧ. 
 

Share this Story:

Follow Webdunia kannada

ಮುಂದಿನ ಸುದ್ದಿ

ನೀವೂ ಕಡಿಮೆ ನಿದ್ದೆ ಮಾಡ್ತೀರಾ..? ತಪ್ಪದೇ ಈ ಸುದ್ದಿ ನೋಡಿ