ವರ್ಷವಿಡೀ ಸಿಹಿ, ಕಹಿಯನ್ನು ಸಮವಾಗಿ ಕಾಣಬೇಕೆಂದು ಪ್ರಾರಂಭ ಮಾಡುವ ಹೊಸ ವರ್ಷವೇ ಯುಗಾದಿ. ಪ್ರಕೃತಿಯಲ್ಲೂ ಹೊಸತನ, ಹೊಸ ಚಿಗುರು ಮೊಳೆಯುವ ಈ ಕಾಲಕ್ಕೆ ದೇಹ, ಮನಸ್ಸನ್ನು ಹಗುರಗೊಳಿಸಬೇಕು.
ಚೈತ್ರ ಮಾಸ ಪ್ರಾರಂಭವಾಗುತ್ತಲೇ ದೇಹಕ್ಕೆ ತಂಪು ಮಾಡಲು ವಿವಿಧ ರೀತಿಯ ಪಾನೀಯಗಳನ್ನು ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಪಾನಕ, ಮಜ್ಜಿಗೆಗೆ ಬೇಡಿಕೆ ಹೆಚ್ಚು. ನಾವಿಂದು ಈ ವಿಶೇಷ ದಿನಕ್ಕೆ ತಂಪಾದ ಮಜ್ಜಿಗೆ ಹಾಗೂ ಪಾನಕದ ರೆಸಿಪಿಯನ್ನು ಹೇಳಿಕೊಡುತ್ತೇವೆ.
ಪಾನಕ ಮಾಡಲು ಬೇಕಾಗುವ ಪದಾರ್ಥಗಳು
ಬೆಲ್ಲ – 2 ಕಪ್
ಏಲಕ್ಕಿ – 3
ಕಾಳು ಮೆಣಸು – 5
ಸಕ್ಕರೆ – ಒಂದು ಟೀಸ್ಪೂನ್
ಉಪ್ಪು – ಚಿಟಿಕೆ
ಜೀರಿಗೆ ಪುಡಿ – ಅರ್ಧ ಟೀಸ್ಪೂನ್
ನಿಂಬೆಹಣ್ಣು – 1
ಪಾನಕ ಮಾಡುವ ವಿಧಾನ
* ಮೊದಲಿಗೆ ನೀರಿನಲ್ಲಿ ಬೆಲ್ಲವನ್ನು ಹಾಕಿ ಕರಗಿಸಿ.
* ಏಲಕ್ಕಿ, ಕಾಳು ಮೆಣಸು ಹಾಗೂ ಸಕ್ಕರೆಯನ್ನು ಚೆನ್ನಾಗಿ ಪುಡಿ ಮಾಡಿ ಈ ಪುಡಿಯನ್ನು ಬೆಲ್ಲದ ನೀರಿಗೆ ಹಾಕಿ ಮಿಶ್ರಣ ಮಾಡಿ.
* ಬಳಿಕ ಉಪ್ಪು, ಜೀರಿಗೆ ಪುಡಿ ಹಾಗೂ ನಿಂಬೆಹಣ್ಣಿನ ರಸವನ್ನು ಹಾಕಿ ಮಿಶ್ರಣ ಮಾಡಿ.
* ಇದೀಗ ಬೆಲ್ಲದ ಪಾನಕ ಸವಿಯಲು ಸಿದ್ಧ.