ಮಗುವಿನ ಚಿಕಿತ್ಸೆಗಾಗಿ 51,05,911 ಹಣ ನೀಡಿದ ರೊನೆಲ್ಡೋ...
ಮೆಡ್ರಿಡ್ , ಶನಿವಾರ, 15 ಮಾರ್ಚ್ 2014 (17:39 IST)
ಪ್ರಖ್ಯಾತ ಪುಟ್ ಬಾಲ್ ಆಟಗಾರ ಪೋರ್ಚುಗಾಲ್ ನ ಕ್ರಿಸ್ಟಿಯಾನೋ ರೊನೆಲ್ಡೋ 10 ತಿಂಗಳ ಮಗುವಿನ ಚಿಕಿತ್ಸೆಗಾಗಿ 51,05,911(83 ಸಾವಿರ ಡಾಲರ್) ಹಣವನ್ನು ನೀಡಿದ್ದಾರೆ. ಸ್ಪ್ಯಾನಿಶ್ ಪತ್ರಿಕೆ ಪ್ರಕಾರ, ವಿಶ್ವದ ಅತ್ಯುತ್ತಮ ಕಾಲ್ಚೆಂಡು ಆಟಗಾರರಾಗಿರುವ ರೊನಾಲ್ಡೊ ಕಾರ್ಟಿಕಲ್ ಡಿಸ್ಪ್ಲಾಸಿಯಾ ಎಂಬ ಕಾಯಿಲೆಯಿಂದ ಬಳಲುತ್ತಿರುವ ಎರಿಕ್ ಓರ್ಟಿಜ್ ಕ್ರೂಸ್ ಎಂಬ ಮಗುವಿನ ಚಿಕಿತ್ಸೆಗಾಗಿ ಈ ಭಾರಿ ಮೊತ್ತದ ಧನ ಸಹಾಯ ಮಾಡಿದ್ದಾರೆ. ಕಾರ್ಟಿಕಲ್ ಡಿಸ್ಪ್ಲಾಸಿಯಾ ಒಂದು ಗಂಭೀರ ಮಾನಸಿಕ ಕಾಯಿಲೆಯಾಗಿದೆ. ಎರಿಕ್ ಓರ್ಟಿಜ್ ಕ್ರೂಸ್ ನ ಚಿಕಿತ್ಸೆಗಾಗಿ ರೊನಾಲ್ಡೊರವರಲ್ಲಿ ಬುಟ್ಸ ಮತ್ತು ಜರ್ಸಿಯನ್ನು ಕೇಳಲಾಗಿತ್ತು. ಅದನ್ನು ಮಾರಿ ಆಪರೇಶನ್ ಗೆ ಅವಶ್ಯವಿದ್ದ 60,000 ಯುರೋವನ್ನು ಸಂಗ್ರಹಿಸಲು ನಿರ್ಧರಿಸಲಾಗಿತ್ತು. ಈ ಮೊತ್ತ ರೊಲಾಲ್ಡೋ ರವರ ವಾರದ ದುಡಿಮೆಯ ಪ್ರತಿಶತ 20 ಕ್ಕೆ ಸಮವಾಗಿತ್ತು. ಆದರೆ ಅವರು ಮಗುವಿನ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ತಾವೇ ಭರಿಸುವುದಾಗಿ ಹೇಳಿದರು. ಇಂತಹ ಪರೋಪಕಾರಿ ಕೆಲಸಕ್ಕೆ ಹೆಸರಾಗಿರುವ ರೊನೆಲ್ಡೋ 2012 ರಲ್ಲಿ ಕಾನ್ಸರ್ ರೋಗಿಯೊಬ್ಬರ ಚಿಕಿತ್ಸೆಯ ಪೂರ್ಣ ವೆಚ್ಚವನ್ನು ಭರಿಸಿದ್ದರು.